ಕೋಲ್ಕತ್ತ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರತಿಭಟನಾ ನಿರತ ವೈದ್ಯರಿಗೆ ಎಚ್ಚರಿಕೆ ನೀಡಿದ್ದು ತಮ್ಮನ್ನು ಪದೇ ಪದೇ ಅವಮಾನಿಸುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ವೈದ್ಯೆಯ ಮೇಲಿನ ಅತ್ಯಾಚಾರ, ಹತ್ಯೆಯನ್ನು ಖಂಡಿಸಿ ಕಿರಿಯ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಯನ್ನು ನಿಲ್ಲುಸುವುದಕ್ಕೆ ಸಂಬಂಧಿಸಿದ ಮಾತುಕತೆಯ ವಿಡಿಯೋಗಳನ್ನು ನೇರ ಪ್ರಸಾರ ಮಾಡಬೇಕೆಂಬ ಬೇಡಿಕೆಯ ಹಿನ್ನೆಲೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಈ ಎಚ್ಚರಿಕೆ ರವಾನಿಸಿದ್ದಾರೆ.
ಆರ್ ಜಿ ಕರ್ ಪ್ರತಿಭಟನೆ ಕೊನೆಗೊಳ್ಳುವುದಕ್ಕೆ ನಾವು ಹಲವು ದಿನಗಳಿಂದ ಕಾಯುತ್ತಿದ್ದೇವೆ. ನಾನು ಮಾತುಕತೆ ನಡೆಸುವುದಕ್ಕೆ ಮನವಿ ಮಾಡುತ್ತಿದ್ದೇನೆ ಎಂದು ಮಮತಾ ಬ್ಯಾನರ್ಜಿ ವೈದ್ಯರಿಗೆ ಹೇಳಿದ್ದಾರೆ.
ಆರ್ ಜಿ ಕರ್ ವಿಷಯ ಕೋರ್ಟ್ ನಲ್ಲಿರುವುದರಿಂದ ಸರ್ಕಾರ ಮಾತುಕತೆಗೆ ಸಂಬಂಧಿಸಿದಂತೆ ಯಾವುದನ್ನೂ ನೇರ ಪ್ರಸಾರ ಮಾಡಲು ಸಾಧ್ಯವಿಲ್ಲ ಎಂದು ಟಿಎಂಸಿ ನಾಯಕಿ ಹೇಳಿದ್ದಾರೆ.
"ಆರ್‌ಜಿ ಕರ್ ಬಿಕ್ಕಟ್ಟನ್ನು ಕೊನೆಗೊಳಿಸಲು ನಾವು ಸಭೆಯನ್ನು ವೀಡಿಯೊ ರೆಕಾರ್ಡ್ ಮಾಡುತ್ತೇವೆ ಮತ್ತು ಸುಪ್ರೀಂ ಕೋರ್ಟ್‌ನ ಅನುಮೋದನೆಯ ನಂತರ ಅದನ್ನು ನಿಮಗೆ ಒದಗಿಸುತ್ತೇವೆ" ಎಂದು ಅವರು ಹೇಳಿದರು.