ಕಿರಿಯ ವೈದ್ಯರ ಮುಷ್ಕರ  
ದೇಶ

42 ದಿನಗಳ ನಂತರ ಕೋಲ್ಕತ್ತಾ ಕಿರಿಯ ವೈದ್ಯರ ಮುಷ್ಕರ ಅಂತ್ಯ: ನಾಳೆಯಿಂದ ತುರ್ತು ಸೇವೆ ಲಭ್ಯ

'ಸ್ವಾಸ್ಥ್ಯ ಭವನ'ದಿಂದ ಸಿಜಿಒ ಕಾಂಪ್ಲೆಕ್ಸ್‌ವರೆಗೆ ಸುಮಾರು 4 ಕಿ.ಮೀ ದೂರವನ್ನು ಮೆರವಣಿಗೆ ಸಾಗಿದರು.

ಕೋಲ್ಕತ್ತಾ: ಆರ್‌ಜಿ ಕಾರ್ ಆಸ್ಪತ್ರೆಯಲ್ಲಿ 31 ವರ್ಷದ ಕಿರಿಯ ವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಕಿರಿಯ ವೈದ್ಯರು ಇಂದು ಶುಕ್ರವಾರ ಸಂಜೆ ತಮ್ಮ ಮುಷ್ಕರವನ್ನು ಹಿಂತೆಗೆದುಕೊಂಡು ಕರ್ತವ್ಯಕ್ಕೆ ಮರಳಿದ್ದಾರೆ. ನಾಳೆಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಸೇವೆಗಳನ್ನು ಪುನರಾರಂಭಿಸಲಾಗುವುದು ಎಂದು ಹೇಳಿದ್ದಾರೆ.

42 ದಿನಗಳ ಕಾಲ ನಡೆಸಿದ್ದ ಮುಷ್ಕರವನ್ನು ಇಂದು ಕೊನೆಗೊಳಿಸಿದ್ದು, ರಾಜ್ಯ ಆರೋಗ್ಯ ಇಲಾಖೆಯ ಪ್ರಧಾನ ಕಛೇರಿಯಿಂದ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ಕೇಂದ್ರೀಯ ತನಿಖಾ ದಳ (CBI) ಕಚೇರಿಗೆ ಮೆರವಣಿಗೆ ನಡೆಸಿದ ನಂತರ ವೈದ್ಯರು ಮುಷ್ಕರ ಹಿಂತೆಗೆದುಕೊಂಡಿದ್ದಾರೆ.

'ಸ್ವಾಸ್ಥ್ಯ ಭವನ'ದಿಂದ ಸಿಜಿಒ ಕಾಂಪ್ಲೆಕ್ಸ್‌ವರೆಗೆ ಸುಮಾರು 4 ಕಿ.ಮೀ ದೂರವನ್ನು ಮೆರವಣಿಗೆ ಸಾಗಿದರು. ವೈದ್ಯರು ಹೊರರೋಗಿ ವಿಭಾಗದಲ್ಲಿ (OPD) ಕೆಲಸ ಮಾಡುವುದಿಲ್ಲ ತುರ್ತು ಮತ್ತು ಅಗತ್ಯ ಸೇವೆಗಳಲ್ಲಿ ನಾಳೆಯಿಂದ ಭಾಗಶಃ ಕಾರ್ಯನಿರ್ವಹಿಸುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚುನಾವಣಾ ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!