ಪಲ್ಸರ್ ಸುನಿ  
ದೇಶ

ಕೇರಳ: ನಟಿ ಅತ್ಯಾಚಾರ ಪ್ರಕರಣ; 7 ವರ್ಷಗಳ ಬಳಿಕ ಪಲ್ಸರ್ ಸುನಿ ಜೈಲಿನಿಂದ ಬಿಡುಗಡೆ

ಪ್ರಕರಣದಲ್ಲಿ ಜಾಮೀನು ಕೋರಿ ಪಲ್ಸರ್ ಸುನಿ ಅರ್ಜಿ ಸಲ್ಲಿಸಿದ ಬಳಿಕ ನ್ಯಾಯಮೂರ್ತಿಗಳಾದ ಎ.ಎಸ್.ಓಕಾ ಮತ್ತು ಪಂಕಜ ಮಿತ್ತಲ್ ಅವರ ಪೀಠವು ರಾಜ್ಯ ಸರಕಾರದಿಂದ ವರದಿಯನ್ನು ಕೇಳಿತ್ತು

ತಿರುವನಂತಪುರ: 2017ರ ಕೇರಳದಲ್ಲಿ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ ವಿಚಾರಣೆ ಆಮೆಗತಿಯಲ್ಲಿ ಸಾಗುತ್ತಿರುವುದನ್ನು ಮತ್ತು ಪ್ರಮುಖ ಆರೋಪಿ ಸುನಿಲ್ ಎಸ್. ಅಲಿಯಾಸ್ ಪಲ್ಸರ್ ಸುನಿ ಕಳೆದ ಏಳು ವರ್ಷಗಳಿಂದಲೂ ಜೈಲಿನಲ್ಲಿರುವುದನ್ನು ಪರಿಗಣಿಸಿ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಆತನಿಗೆ ಜಾಮೀನು ಮಂಜೂರು ಮಾಡಿದೆ.

ಪ್ರಕರಣದಲ್ಲಿ ಜಾಮೀನು ಕೋರಿ ಪಲ್ಸರ್ ಸುನಿ ಅರ್ಜಿ ಸಲ್ಲಿಸಿದ ಬಳಿಕ ನ್ಯಾಯಮೂರ್ತಿಗಳಾದ ಎ.ಎಸ್.ಓಕಾ ಮತ್ತು ಪಂಕಜ ಮಿತ್ತಲ್ ಅವರ ಪೀಠವು ರಾಜ್ಯ ಸರಕಾರದಿಂದ ವರದಿಯನ್ನು ಕೇಳಿತ್ತು. ಈ ವರ್ಷದ ಜೂ.6ರಂದು ಕೇರಳ ಉಚ್ಚ ನ್ಯಾಯಾಲಯವು ತನ್ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಸುನಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದ.

ಪ್ರಕರಣದಲ್ಲಿಯ ಇತರ ಎಲ್ಲ ಆರೋಪಿಗಳು ಜಾಮೀನು ಬಿಡುಗಡೆಗೊಂಡಿದ್ದರೂ ಸುನಿ ಏಳು ವರ್ಷಗಳಿಗೂ ಅಧಿಕ ಜೈಲುವಾಸವನ್ನು ಅನುಭವಿಸಿದ್ದಾನೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡ ಸರ್ವೋಚ್ಚ ನ್ಯಾಯಾಲಯವು, ಎರ್ನಾಕುಲಂ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ರೀತಿಯನ್ನು ಟೀಕಿಸಿತು. ಸುನಿಯನ್ನು ಹಾಜರುಪಡಿಸಿದ ನಂತರ, ನ್ಯಾಯಾಲಯವು ಅವರಿಗೆ ಜಾಮೀನು ನೀಡಲು ಹಾಕಬೇಕಾದ ಷರತ್ತುಗಳ ಕುರಿತು ಅವರ ವಕೀಲರು ಮತ್ತು ಪ್ರಾಸಿಕ್ಯೂಷನ್ ವಾದು ಆಲಿಸಿತು. ಆರೋಪಿಗಳು ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಅಥವಾ ಯಾವುದೇ ಸಾಕ್ಷ್ಯವನ್ನು ಹಾಳು ಮಾಡದಂತೆ ಕಟ್ಟುನಿಟ್ಟಿನ ಷರತ್ತುಗಳನ್ನ ವಿಧಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಧಾನಸಭೆಯಲ್ಲಿ ಸಾಮಾಜಿಕ ಬಹಿಷ್ಕಾರ ನಿಷೇಧ ಮಸೂದೆ ಮಂಡನೆ; ನಿಯಮ ಉಲ್ಲಂಘಿಸಿದರೆ 3 ವರ್ಷ ಜೈಲು

MeToo ನಂತರ ಹೆಚ್ಚಾಯ್ತು ಕಿರುಕುಳ: 'ಮಾಂಗಲ್ಯಸರ' ಕುರಿತ ಪತಿಯ ಹೇಳಿಕೆ ಬಳಿಕ ಗಾಯಕಿಯ ನಗ್ನ ಫೋಟೋ ವೈರಲ್

ಬಿಜೆಪಿಯವರು ದ್ವೇಷ ಭಾಷಣದ ಪಿತಾಮಹರು; ಬ್ಯಾಲೆಟ್ ಇದ್ದಾಗ ಮತ ಕಳ್ಳತನ ಹೇಗೆ ಸಾಧ್ಯ?: ಡಿ.ಕೆ ಶಿವಕುಮಾರ್‌

ಸುಪ್ರೀಂ ಕೋರ್ಟ್​ನಲ್ಲೂ ಪ್ರಜ್ವಲ್‌ಗೆ ಹಿನ್ನಡೆ; ಅತ್ಯಾಚಾರ ಪ್ರಕರಣ ಬೇರೆ ಕೋರ್ಟ್ ಗೆ ವರ್ಗಾವಣೆ ಕೋರಿದ್ದ ಅರ್ಜಿ ವಜಾ!

ರಾಜ್ಯದ ರೈತರ ನೆರವಿಗೆ ಧಾವಿಸಿದ ಕೇಂದ್ರ; MSP ಅಡಿ 9.67 ಲಕ್ಷ ಟನ್ ತೊಗರಿ ಖರೀದಿಸಲು ಒಪ್ಪಿಗೆ

SCROLL FOR NEXT