ಪವನ್ ಕಲ್ಯಾಣ್-ಪ್ರಕಾಶ್ ರಾಜ್ 
ದೇಶ

ಡಿಯರ್ ಪವನ್ ಕಲ್ಯಾಣ್... ತನಿಖೆ ಮಾಡಿಸೋದು ಬಿಟ್ಟು ತಿರುಪತಿ ಲಡ್ಡು ವಿಚಾರದಲ್ಲಿ ಕೋಮು ಬೆಂಕಿ ಹಚ್ಚೋದು ಯಾಕೆ?: ಪ್ರಕಾಶ್ ರಾಜ್

ತಿರುಪತಿ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು (ಮೀನಿನ ಎಣ್ಣೆ, ಹಂದಿಯ ಕೊಬ್ಬು ಮತ್ತು ದನದ ಕೊಬ್ಬು) ಸೇರಿಸುವುದರಿಂದ ಜನರು ತುಂಬಾ ಅಸಮಾಧಾನಗೊಂಡಿದ್ದಾರೆ ಎಂದು ಪವನ್ ಕಲ್ಯಾಣ್ ಶುಕ್ರವಾರ ಪೋಸ್ಟ್‌ನಲ್ಲಿ ಹೇಳಿದ್ದರು.

ಹೈದರಾಬಾದ್: ಆಂಧ್ರಪ್ರದೇಶದ ಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) 'ಲಡ್ಡು ಪ್ರಸಾದ'ದಲ್ಲಿ ದನದ ಕೊಬ್ಬು ಬಳಕೆ ಸುದ್ದಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ಸುದ್ದಿ ಬಂದ ನಂತರ ದೊಡ್ಡ ವಿವಾದ ಹುಟ್ಟಿಕೊಂಡಿದೆ. ಇದರ ವಿರುದ್ಧ ರಾಜಕೀಯ ವಲಯದಿಂದ ಹಿಡಿದು ಸಿನಿಮಾ ತಾರೆಯರು ಪ್ರತಿಭಟನೆ ನಡೆಸುತ್ತಿದ್ದು, ತನಿಖೆಗೆ ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ತೆಲುಗು ಚಿತ್ರರಂಗದ ಸ್ಟಾರ್ ನಟ ವಿಷ್ಣು ಮಂಚು ಮತ್ತು ಪ್ಯಾನ್ ಇಂಡಿಯಾ ನಟ ಪ್ರಕಾಶ್ ರಾಜ್ ನಡುವೆ ಮಾತಿನ ಸಮರ ಶುರುವಾಗಿದೆ. ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿರುವ ಸೂಪರ್‌ಸ್ಟಾರ್ ಪವನ್ ಕಲ್ಯಾಣ್ ಅವರು ತಿರುಪತಿ ಲಡ್ಡು ತನಿಖೆಗೆ ಆದೇಶಿಸಿದ್ದಾರೆ.

ತಿರುಪತಿ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು (ಮೀನಿನ ಎಣ್ಣೆ, ಹಂದಿಯ ಕೊಬ್ಬು ಮತ್ತು ದನದ ಕೊಬ್ಬು) ಸೇರಿಸುವುದರಿಂದ ಜನರು ತುಂಬಾ ಅಸಮಾಧಾನಗೊಂಡಿದ್ದಾರೆ ಎಂದು ಪವನ್ ಕಲ್ಯಾಣ್ ಶುಕ್ರವಾರ ಪೋಸ್ಟ್‌ನಲ್ಲಿ ಹೇಳಿದ್ದರು. ವೈಎಸ್ಆರ್ ಕಾಂಗ್ರೆಸ್ ಸರ್ಕಾರವು ರಚಿಸಿರುವ ಟಿಟಿಡಿ ಮಂಡಳಿ ಮುಂದೆ ಹಲವು ಪ್ರಶ್ನೆಗಳಿವೆ. ಈ ಮಧ್ಯೆ ಸರ್ಕಾರವು ಸಾಧ್ಯವಾದಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಬದ್ಧವಾಗಿದೆ ಎಂದು ಪವನ್ ಕಲ್ಯಾಣ್ ಹೇಳಿದ್ದರು. ಪವನ್ ಕಲ್ಯಾಣ್ ಟ್ವೀಟ್ ಗೆ ಪ್ರಕಾಶ್ ರಾಜ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನು ರಾಷ್ಟ್ರೀಯ ವಿಷಯವನ್ನಾಗಿ ಮಾಡಬೇಡಿ, ಮೊದಲು ತಪ್ಪಿತಸ್ಥರನ್ನು ಪತ್ತೆ ಮಾಡಿ ಶಿಕ್ಷೆ ವಿಧಿಸಿ ಎಂದು ಪ್ರಕಾಶ್ ಪವನ್ ಕಲ್ಯಾಣ್ ಅವರಿಗೆ ಮನವಿ ಮಾಡಿದ್ದಾರೆ. ಡಿಯರ್ ಪವನ್ ಕಲ್ಯಾಣ್... ನೀವು ಡಿಸಿಎಂ ಆಗಿದ್ದೀರಿ, ರಾಜ್ಯದಲ್ಲಿ ಇದು ನಡೆದಿದೆ... ದಯವಿಟ್ಟು ತನಿಖೆ ನಡೆಸಿ, ತಪ್ಪಿತಸ್ಥರನ್ನು ಪತ್ತೆ ಮಾಡಿ ಕಠಿಣ ಕ್ರಮ ಕೈಗೊಳ್ಳಿ" ಎಂದು ನಟ ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ.

ಅಷ್ಟೆ ಅಲ್ಲದೆ, ನೀವು ಯಾಕೆ ಆತಂಕಗಳನ್ನು ಸೃಷ್ಟಿಸುತ್ತಿದ್ದೀರಿ ಮತ್ತು ರಾಷ್ಟ್ರಮಟ್ಟದಲ್ಲಿ ಈ ವಿಷಯವನ್ನು ಎತ್ತುತ್ತಿದ್ದೀರಿ... ನಮ್ಮ ದೇಶದಲ್ಲಿ ಈಗಾಗಲೇ ಸಾಕಷ್ಟು ಕೋಮು ಉದ್ವಿಗ್ನತೆ ಇದೆ ಎಂದು ಬರೆದಿದ್ದಾರೆ. ತೆಲುಗು ಸ್ಟಾರ್ ವಿಷ್ಣು ಮಂಚು ಶನಿವಾರ ಪ್ರಕಾಶ್ ರಾಜ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿ, ಶಾಂತವಾಗಿರಲು ಸಲಹೆ ನೀಡಿದರು. ತಿರುಮಲ ಲಡ್ಡು ಪ್ರಸಾದವನ್ನು ಕೋಟ್ಯಂತರ ಹಿಂದೂಗಳ ನಂಬಿಕೆಯ ಸಂಕೇತ ಎಂದು ಬಣ್ಣಿಸಿದ್ದಾರೆ.

ವಿಷ್ಣು ಮಂಚು ಅವರು 'ಮೂವಿ ಆರ್ಟಿಸ್ಟ್ ಅಸೋಸಿಯೇಷನ್' (ಎಂಎಂಎ) ಅಧ್ಯಕ್ಷರಾಗಿದ್ದಾರೆ. ಅವರು ತಮ್ಮ ಟ್ವೀಟ್‌ನಲ್ಲಿ, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಅಂತಹ ಪವಿತ್ರ ಸಂಪ್ರದಾಯಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣ ತನಿಖೆ ಮತ್ತು ಕ್ರಮಕ್ಕೆ ಕರೆ ನೀಡಿದ್ದಾರೆ. ನೀವು ಈ ವಿಷಯವನ್ನು ಎತ್ತುತ್ತಿರುವಾಗ, ನಿಖರವಾಗಿ ಎಲ್ಲಿ ಕೋಮು ಬಣ್ಣವನ್ನು ಬಳಿಯಲಾಗುತ್ತಿದೆ ಎಂದು ಪರಿಗಣಿಸಿ. ಇದಕ್ಕೆ ಪ್ರತಿಕ್ರಿಯಿಸಿದ ಪ್ರಕಾಶ್, ಸರಿ ಶಿವಯ್ಯ, ನನ್ನದೇ ಆದ ದೃಷ್ಟಿಕೋನವಿದೆ... ನಿಮಗೆ ನಿಮ್ಮದೇ ದೃಷ್ಟಿಕೋನವಿದೆ... ಅದನ್ನು ನೋಟ್ ಮಾಡಿದ್ದೇನೆ ಎಂದರು. ಈ ವಿಷಯವು ನಿರೀಕ್ಷೆಗಿಂತ ಹೆಚ್ಚು ಉಲ್ಬಣಗೊಂಡಿದೆ ಎಂದು ತೋರುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

SCROLL FOR NEXT