ಮತದಾರರು 
ದೇಶ

ಜಮ್ಮು ಮತ್ತು ಕಾಶ್ಮೀರ ಚುನಾವಣೆ: ಎರಡನೇ ಹಂತದಲ್ಲಿ ಶೇಕಡಾ 54 ಕ್ಕಿಂತ ಹೆಚ್ಚು ಮತದಾನ

ಎರಡನೇ ಹಂತದಲ್ಲಿ ಒಟ್ಟು 2.5 ಮಿಲಿಯನ್ ಮತದಾರರಿದ್ದು, 26 ಕ್ಷೇತ್ರಗಳಲ್ಲಿ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿದಂತೆ 239 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ಬುಧವಾರ ಮುಕ್ತಾಯವಾಗಿದ್ದು, ಸಂಜೆ 5 ಗಂಟೆಯವರೆಗೆ ಶೇಕಡಾ 54 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಎರಡನೇ ಹಂತದಲ್ಲಿ ಒಟ್ಟು 2.5 ಮಿಲಿಯನ್ ಮತದಾರರಿದ್ದು, 26 ಕ್ಷೇತ್ರಗಳಲ್ಲಿ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿದಂತೆ 239 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.

ಬಿಗಿ ಭದ್ರತೆಯ ನಡುವೆ ಇಂದು 26 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಪ್ರದೇಶದ ಗುಲಾಬ್‌ಗಢ (ST) ಕ್ಷೇತ್ರದಲ್ಲಿ ಅತ್ಯಧಿಕ ಅಂದರೆ ಶೇಕಡಾ 65.57 ರಷ್ಟು ಮತದಾನವಾಗಿದೆ. ನಂತರ ಪೂಂಚ್ ಹವೇಲಿಯಲ್ಲಿ ಶೇ. 62.91 ರಷ್ಟು ಮತದಾನವಾಗಿದೆ.

ಚುನಾವಣಾ ಆಯೋಗವು ಮತದಾರರ ಅನುಕೂಲಕ್ಕಾಗಿ 3,502 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಇವುಗಳಲ್ಲಿ 1,056 ನಗರ ಮತ್ತು 2,446 ಗ್ರಾಮೀಣ ಪ್ರದೇಶದಲ್ಲಿವೆ.

ಮೊದಲ ಹಂತದಲ್ಲಿ ಶೇ.61.38ರಷ್ಟು ಮತದಾನವಾಗಿದೆ. ಮೂರನೇ ಹಂತ ಅಕ್ಟೋಬರ್ 1 ರಂದು ನಡೆಯಲಿದ್ದು, ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ. ಈ ಬಾರಿ ಶ್ರೀನಗರ ಜಿಲ್ಲೆಯಲ್ಲಿ 93, ಬುದ್ಗಾಮ್ ಜಿಲ್ಲೆಯಲ್ಲಿ 46, ರಾಜೌರಿ ಜಿಲ್ಲೆಯಲ್ಲಿ 34, ಪೂಂಚ್ ಜಿಲ್ಲೆಯಲ್ಲಿ 25, ಗಂದರ್‌ಬಾಲ್ ಜಿಲ್ಲೆಯಲ್ಲಿ 21 ಮತ್ತು ರಿಯಾಸಿ ಜಿಲ್ಲೆಯಲ್ಲಿ 20 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

India-Pakistan ಯುದ್ಧವನ್ನು ನಾನು ತಡೆಯದೇ ಹೋಗಿದ್ದರೆ 3.5 ಕೋಟಿ ಜನರು ಸಾಯುತ್ತಿದ್ದರು: ಡೊನಾಲ್ಡ್ ಟ್ರಂಪ್

ಪ್ರಧಾನಿ ಮೋದಿ ಎರಡು ದಿನಗಳ ಇಸ್ರೇಲ್‌ ಪ್ರವಾಸ ಆರಂಭ; ಸಂಸತ್ತು ನೆಸ್ಸೆಟ್ ಭಾಷಣ ಮಾಡುವ ಮೊದಲ ಭಾರತ ಪ್ರಧಾನಿ-Video

ಮಾಜಿ ಪ್ರೇಯಸಿಯ ಮದುವೆಗೆ ಬಂದು ಗುಂಡು ಹಾರಿಸಿದ ಭಗ್ನ ಪ್ರೇಮಿ, Video ವೈರಲ್!

Epstein ties ಆರೋಪದ ಕುರಿತು ಮೌನ ಮುರಿದ ಬಿಲ್ ಗೇಟ್ಸ್; ಉದ್ಯಮಿ ಹೇಳಿದ್ದೇನು?

ಹಾರ್ನ್ ಮಾಡುವ ವಿಚಾರಕ್ಕೆ ಗಲಾಟೆ: 65ರ ವೃದ್ಧನ ಮೇಲೆ ಮನಸೋ ಇಚ್ಛೆ ಹಲ್ಲೆ, ರೌಡಿಶೀಟ್ ಗೆ ಪೊಲೀಸರ ಸಿದ್ಧತೆ? Video

SCROLL FOR NEXT