ಜಗನ್ ಮೋಹನ್ ರೆಡ್ಡಿ 
ದೇಶ

ಧರ್ಮ ಘೋಷಿಸಿ ಎಂದ TDP! ಆಂಧ್ರ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿಯ ತಿರುಪತಿ ಭೇಟಿ ರದ್ದು

ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಸೇರಿದಂತೆ ಗುಣಮಟ್ಟವಿಲ್ಲದ ಪದಾರ್ಥಗಳು ವಿತರಣೆಯಾಗುತ್ತಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕಳೆದ ವಾರ ಆರೋಪ ಮಾಡಿದ್ದರು.

ಅಮರಾವತಿ: ಆಂಧ್ರ ಪ್ರದೇಶದ ಪ್ರತಿಪಕ್ಷ ವೈಎಸ್ ಆರ್ ಸಿಪಿ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ, ತಿರುಪತಿ ವೆಂಕಟೇಶ್ವರ ದೇವಾಲಯ ಭೇಟಿ ಯೋಜನೆಯನ್ನು ರದ್ದುಗೊಳಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ಶುಕ್ರವಾರ ತಿಳಿಸಿವೆ.

ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಸೇರಿದಂತೆ ಗುಣಮಟ್ಟವಿಲ್ಲದ ಪದಾರ್ಥಗಳು ವಿತರಣೆಯಾಗುತ್ತಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕಳೆದ ವಾರ ಆರೋಪ ಮಾಡಿದ್ದರು.

ಈ ಆರೋಪಕ್ಕೆ ತಿರುಗೇಟು ನೀಡಲು ದೇವಾಲಯದ ಆವರಣದಲ್ಲಿ ಪ್ರಾರ್ಥನೆಗೆ ವೈಎಸ್ ಆರ್ ಆರ್ ಪಿ ಕರೆ ನೀಡಿತ್ತು. ಇದರ ಭಾಗವಾಗಿ ಜಗನ್ ಮೋಹನ್ ರೆಡ್ಡಿ ಅವರ ತಿರುಮಲ ದೇವಾಲಯ ಭೇಟಿ ಕೂಡಾ ಹೆಚ್ಚಿನ ಕುತೂಹಲ ಕೆರಳಿಸಿತ್ತು. ತಿರುಪತಿ ದೇವಾಲಯ ಭೇಟಿಯನ್ನು ರದ್ದುಗೊಳಿಸಲಾಗಿದೆ ಎಂದು ಜಗನ್ ಮೋಹನ್ ರೆಡ್ಡಿ ಅವರ ಆಪ್ತ ಮೂಲಗಳು ಖಚಿತಪಡಿಸಿವೆ.

ಆದರೆ ಈ ನಿರ್ಧಾರಕ್ಕೆ ಕಾರಣವೇನು ಎಂಬುದನ್ನು ತಿಳಿಸಿಲ್ಲ. ದೇವಸ್ಥಾನ ಪ್ರವೇಶಿಸುವ ಮೊದಲು ತಮ್ಮ ಧರ್ಮವನ್ನು ಘೋಷಿಸಬೇಕು ಎಂಬ ಎನ್ ಡಿಎ ಮಿತ್ರಪಕ್ಷಗಳ ಬೇಡಿಕೆಯ ನಡುವೆ ರೆಡ್ಡಿ ಅವರ ಭೇಟಿಯನ್ನು ರದ್ದುಗೊಳಿಸಲಾಗಿದೆ ಎನ್ನಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೆಡ್ಡಿ, ದೇಶದ ಪ್ರತಿಯೊಬ್ಬರಿಗೂ ನನ್ನ ಧರ್ಮ ತಿಳಿದಿದೆ ಮತ್ತು ಸಿಎಂ ಆಗುವ ಮೊದಲು ಹಲವಾರು ಬಾರಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದೇನೆ. ನಾಲ್ಕು ಗೋಡೆಗಳ ಮಧ್ಯೆ ಬೈಬಲ್ ಓದಿದರೂ ಇಸ್ಲಾಂ, ಹಿಂದೂ ಮತ್ತು ಸಿಖ್ ಧರ್ಮವನ್ನು ಗೌರವಿಸುತ್ತೇನೆ. ದೇವಸ್ಥಾನಕ್ಕೆ ಹೋಗದಂತೆ ತಿರುಪತಿಯಲ್ಲಿ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಟಿವಿಗಳು ತೋರಿಸುತ್ತಿವೆ ಎಂದು ರೆಡ್ಡಿ ಹೇಳಿದರು.

ಚಂದ್ರಬಾಬು ನಾಯ್ಡು ಅವರ 100 ದಿನಗಳ ಆಡಳಿತ ವಿಫಲತೆ ಮರೆ ಮಾಚಲು, ಜನರ ಗಮನ ಬೇರೆಡೆ ಸೆಳೆಯಲು ಚಂದ್ರಬಾಬು ನಾಯ್ಡು ಲಡ್ಡು ವಿವಾದವನ್ನು ಮುನ್ನಲೆಗೆ ತಂದಿದ್ದಾರೆ. ಲಡ್ಡು ವಿವಾದದಲ್ಲಿನ ವಿಫಲತೆ ಮರೆ ಮಾಚಲು ಧರ್ಮ ಘೋಷಣೆ ವಿಚಾರವನ್ನು ತಂದಿದ್ದಾರೆ. ಲಡ್ಡು ಗುಣಮಟ್ಟ ವಿಚಾರದಲ್ಲಿ ಉದ್ದೇಶಪೂರ್ವಕವಾಗಿ ಅನುಮಾನವನ್ನು ಅವರು ಹುಟ್ಟುಹಾಕಿದ್ದಾರೆ ಎಂದು ಜಗನ್ ಮೋಹನ್ ರೆಡ್ಡಿ ಹೇಳಿದರು.

ಸಿಎಂ ಆಗಿದ್ದಾಗ ವೆಂಕಟೇಶ್ವರ ಸ್ವಾಮಿಗೆ ಐದು ವರ್ಷಗಳ ಕಾಲ ರೇಷ್ಮೆ ವಸ್ತ್ರವನ್ನು ಅರ್ಪಿಸುವ ಅವಕಾಶ ನನಗೆ ಸಿಕ್ಕಿತ್ತು, ನಾನು ಅದನ್ನು ಅರ್ಥಮಾಡಿಕೊಳ್ಳಬಲ್ಲೆ. ತಿರುಪತಿಗೆ ಇದು ನನ್ನ ಮೊದಲ ಬಾರಿ ಭೇಟಿ ಅಲ್ಲ. ಗುಣಮಟ್ಟದ ಕಾರಣಕ್ಕಾಗಿ ಟಿಟಿಡಿ ತಿರಸ್ಕರಿಸಿದ ತುಪ್ಪವನ್ನು ಲಡ್ಡು ಪ್ರಸಾದ ತಯಾರಿಸಲು ಎಂದಿಗೂ ಬಳಸಿಲ್ಲ ಎಂದು ಜಗನ್ ಪುನರುಚ್ಚರಿಸಿದರು.

ಹಿಂದಿನ ವೈಎಸ್‌ಆರ್‌ಸಿಪಿ ಆಡಳಿತದಲ್ಲಿ ಪ್ರಸಿದ್ಧ ತಿರುಪತಿ ಲಡ್ಡು ತಯಾರಿಕೆಯಲ್ಲಿ ಗುಣಮಟ್ಟವಿಲ್ಲದ ತುಪ್ಪದ ಬಳಕೆ ಮತ್ತು ಪ್ರಾಣಿಗಳ ಕೊಬ್ಬಿನಾಂಶ ಬಳಸಲಾಗಿದೆ ಎಂದು ನಾಯ್ಡು ಕಳೆದ ವಾರ ಆರೋಪಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ ನೆರವೇರಿಸಿದ್ದು ಹೇಗೆ?: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ; ಈ ಅದ್ಭುತ Video ನೋಡಿ..

SCROLL FOR NEXT