ರಾಹುಲ್ ಗಾಂಧಿ, ಕೇಶವನ್ 
ದೇಶ

ರಾಹುಲ್ ಗಾಂಧಿ ಭಾರತ ರಾಜಕೀಯದ ಗೋಬೆಲ್ಸ್ ಎಂದ ಬಿಜೆಪಿ!

ನಿನ್ನೆ ರಾಹುಲ್ ಗಾಂಧಿ ತಮ್ಮ ಸುಳ್ಳಿನ ಕಾರ್ಖಾನೆಯಿಂದ ಹೇಗೆ ಸುಳ್ಳುಗಳನ್ನು ಹರಡಲು ಪ್ರಯತ್ನಿಸಿದರು ಎಂಬುದನ್ನು ನೋಡಿದ್ದಿರಿ. ಅವರು ಗೋಬೆಲ್ಸ್ ತರಹದ ನಕಲಿ ಪ್ರಚಾರಕ

ನವದೆಹಲಿ: ಲೋಕಸಭೆ ವಿಪಕ್ಷ ನಾಯಕನ ವಿರುದ್ಧ ಶುಕ್ರವಾರ ವಾಗ್ದಾಳಿ ನಡೆಸಿರುವ ಬಿಜೆಪಿ ವಕ್ತಾರ ಸಿ ಆರ್ ಕೇಶವನ್, ರಾಹುಲ್ ಗಾಂಧಿಯನ್ನು ಹಿಟ್ಲರ್ ಪ್ರಚಾರ ಸಚಿವ ಜೋಸೆಫ್ ಗೋಬೆಲ್ಸ್‌ಗೆ ಹೋಲಿಸಿದ್ದಾರೆ. ರಾಹುಲ್ ಭಾರತ ರಾಜಕೀಯದ ಅಪ್ರಾಮಾಣಿಕ ಮತ್ತು ಭ್ರಮೆಯ ಗೋಬೆಲ್ಸ್, ಅವರು ಸುಳ್ಳು ಮಾಹಿತಿ ಹರಡುತ್ತಿದ್ದಾರೆ ಎಂದು ಕೇಶವನ್ ಆರೋಪಿಸಿದ್ದಾರೆ.

ನಿನ್ನೆ ರಾಹುಲ್ ಗಾಂಧಿ ತಮ್ಮ ಸುಳ್ಳಿನ ಕಾರ್ಖಾನೆಯಿಂದ ಹೇಗೆ ಸುಳ್ಳುಗಳನ್ನು ಹರಡಲು ಪ್ರಯತ್ನಿಸಿದರು ಎಂಬುದನ್ನು ನೋಡಿದ್ದಿರಿ. ಅವರು ಗೋಬೆಲ್ಸ್ ತರಹದ ನಕಲಿ ಪ್ರಚಾರಕ ಎಂದು ಕರೆದರು.

ಹರಿಯಾಣದ ಎರಡು ಕೋಟಿ ಮತದಾರರು ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ ಎಂಬುದು ರಾಹುಲ್ ಗಾಂಧಿಗೆ ಗೊತ್ತಾಗಿದ್ದು, ಅವರ ಭಯಭೀತ, ಆತಂಕಗೊಂಡಿದ್ದಾರೆ. ಅಲ್ಲದೇ, ಎಂದಿಗೂ ಹರಿಯಾಣ ಜನರು 'ರೈತ ವಿರೋಧಿ, ಮೀಸಲಾತಿ ವಿರೋಧಿ' ಮತ್ತು 'ಭ್ರಷ್ಟಾಚಾರದ ಪರ' ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವುದಿಲ್ಲ ಎಂಬುದು ಅವರಿಗೆ ಗೊತ್ತಿದೆ ಎಂದು ಬಿಜೆಪಿ ವಕ್ತಾರರು ಹೇಳಿದರು.

ಒಬಿಸಿಗಳು, ದಲಿತರು ಮತ್ತು ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಪ್ರಾತಿನಿಧ್ಯದ ಕುರಿತು ರಾಹುಲ್ ಗಾಂಧಿಯವರ ಹೇಳಿಕೆ ಕುರಿತು ಮಾತನಾಡಿದ ಸಿ.ಆರ್. ಕೇಶವನ್, ಹರಿಯಾಣದ ಪ್ರಸ್ತುತ ಮುಖ್ಯಮಂತ್ರಿ ಒಬಿಸಿ ಸಮುದಾಯದವರಾಗಿದ್ದಾರೆ.

ನಮ್ಮ ರಾಷ್ಟ್ರಪತಿ ಬುಡಕಟ್ಟು ಸಮುದಾಯದಿಂದ ಬಂದವರಾಗಿದ್ದು, ಅವರನ್ನು ಕಾಂಗ್ರೆಸ್ ವಿರೋಧಿಸಿತು. ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಮುಖ್ಯ ಮಾಹಿತಿ ಆಯುಕ್ತರು ದಲಿತ ಸಮುದಾಯದಿಂದ ಬಂದವರಾಗಿದ್ದಾರೆ. ಕಾಂಗ್ರೆಸ್ ಮೀಸಲಾತಿ ವಿರೋಧಿ ಪಕ್ಷವಾಗಿದ್ದು, ಆರ್ಥಿಕವಾಗಿ ದುರ್ಬಲವಾಗಿರುವ ಸಮುದಾಯಗಳಿಗೆ ಮೀಸಲಾತಿ ರದ್ದುಪಡಿಸಲು ಅವರು ಬಯಸುತ್ತಿದ್ದಾರೆ ಎಂದು ಅವರು ಟೀಕಿಸಿದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

SCROLL FOR NEXT