ಉಗ್ರರ ಬಂಧನ 
ದೇಶ

ಜಮ್ಮು ಮತ್ತು ಕಾಶ್ಮೀರ: ಪುಲ್ವಾಮದಲ್ಲಿ 6 ಉಗ್ರರ ಸಹಚರರ ಬಂಧನ!

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ಆರು ಭಯೋತ್ಪಾದಕ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.

ಪುಲ್ವಾಮ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಇಂದು ಮಹತ್ವದ ಕಾರ್ಯಾಚರಣೆ ನಡೆಸಿದ ಪೊಲೀಸರು 6 ಮಂದಿ ಉಗ್ರರ ಸಹಚರರನ್ನು ಬಂಧಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ಆರು ಭಯೋತ್ಪಾದಕ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.

ಬಂಧಿತರು ಜೈಶ್-ಎ-ಮೊಹಮ್ಮದ್‌ನ ಪಾಕಿಸ್ತಾನ ಮೂಲದ ಕಾಶ್ಮೀರಿ ಭಯೋತ್ಪಾದಕ ಉಗ್ರಗಾಮಿ ಶ್ರೇಣಿಗೆ ಸೇರಲು ಯುವಕರನ್ನು ಪ್ರಚೋದಿಸುತ್ತಿದ್ದರು. ಇದೀಗ ಇವರ ಬಂಧನವಾಗಿದ್ದು, ಇವರ ಪ್ರಚೋದನೆಯಿಂದ ಉಗ್ರ ಸಂಘಟನೆಗೆ ಸೇರಿದ ಯುವಕರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಶಂಕಿತರು ಉಗ್ರ ಸಂಘಟನೆಗೆ ಯುವಕರನ್ನು ಸೇರ್ಪಡೆಗೊಳಿಸುವ ಮುನ್ನ ಅವರಿಗೆ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಶಸ್ತ್ರಾಸ್ತ್ರ, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ನೀಡಿ ತರಬೇತಿ ನೀಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

"ತನಿಖೆಯ ಸಮಯದಲ್ಲಿ, ಈ ಮಾಡ್ಯೂಲ್‌ನ ಭಾಗವಾಗಿದ್ದ ಯುವಕರನ್ನು ಗುರುತಿಸಲಾಗಿದ್ದು, ಜೈಲಿನಲ್ಲಿ ಒಜಿಡಬ್ಲ್ಯೂ ಸಹಾಯದಿಂದ ಪಾಕಿಸ್ತಾನ ಮೂಲದ ಭಯೋತ್ಪಾದಕನು, ಕುಲ್ಗಾಮ್ ಜಿಲ್ಲೆ ಆವಂತಿಪೋರಾದ ತ್ರಾಲ್ ಪ್ರದೇಶದಲ್ಲಿ ಭಯೋತ್ಪಾದಕ ಶ್ರೇಣಿಗೆ ಸೇರಲು ಪ್ರೇರೇಪಿಸಲ್ಪಟ್ಟ ಅನೇಕ ಯುವಕರನ್ನು ಗುರುತಿಸಿದ್ದಾನೆ ಈ ಯುವಕರಿಗೆ ಪಿಸ್ತೂಲ್, ಗ್ರೆನೇಡ್, ಐಇಡಿ ಮತ್ತು ಇತರ ಸ್ಫೋಟಕಗಳನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Bihar Election Results 2025 Live: ಮ್ಯಾಜಿಕ್ ಸಂಖ್ಯೆ 122 ಮೀರಿ 166 ಸ್ಥಾನಗಳಲ್ಲಿ NDA ಮುನ್ನಡೆ; ಇಂಡಿಯಾ ಬಣ 59 ಸ್ಥಾನಗಳಲ್ಲಿ ಮುಂದೆ

Assembly bypolls: ಜುಬಿಲಿ ಹಿಲ್ಸ್‌ನಲ್ಲಿ ಕಾಂಗ್ರೆಸ್ ಮುನ್ನಡೆ; ನಗ್ರೋಟಾದಲ್ಲಿ ಬಿಜೆಪಿ ಗೆಲುವು; ಬುಡ್ಗಾಮ್‌ನಲ್ಲಿ ಪಿಡಿಪಿ ಮುನ್ನಡೆ

ವೃಕ್ಷಮಾತೆ- ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ವಿಧಿವಶ: ಸಿಎಂ- ಡಿಸಿಎಂ ಸೇರಿ ಹಲವು ಗಣ್ಯರ ಸಂತಾಪ

ಬಿಹಾರ ಚುನಾವಣಾ ಫಲಿತಾಂಶ 2025: ಕಾಂಗ್ರೆಸ್​​ಗೆ ಭಾರೀ ಮುಖಭಂಗ, ಸೋಲು ಖಚಿತವಾಗುತ್ತಿದ್ದಂತೆ ವೋಟ್ ಚೋರಿ ಎಂದ ಸಿದ್ದರಾಮಯ್ಯ

ಆಳಂದ ವಿಧಾನಸಭಾ ಚುನಾವಣೆಯಲ್ಲಿ ಮತ ಕಳ್ಳತನ; ಪಶ್ಚಿಮ ಬಂಗಾಳದ ವ್ಯಕ್ತಿಯನ್ನು ಬಂಧಿಸಿದ ಸಿಐಡಿ!

SCROLL FOR NEXT