ಪ್ರಲ್ಹಾದ ಜೋಶಿ  
ದೇಶ

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಅಭೂತಪೂರ್ವ ಸಾಧನೆ!

PM-KUSUM ಯೋಜನೆಯಡಿ 2025ರಲ್ಲಿ 7 ಲಕ್ಷ ಪಂಪ್‌ಗಳ ಸೌರೀಕರಣ ಮಾಡಲಾಗಿದೆ. ಈವರೆಗೆ ಒಟ್ಟು 10 ಲಕ್ಷ ಪಂಪ್‌ಗಳಿಗೆ ಸೌರ ಶಕ್ತಿ ವಿದ್ಯುತ್‌ ಕಲ್ಪಿಸಲಾಗಿದೆ.

ನವದೆಹಲಿ: ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಅಭೂತಪೂರ್ವ ಸಾಧನೆಗೈದಿದ್ದು, 2025ರ ಆರ್ಥಿಕ ವರ್ಷದಲ್ಲಿ ಸೌರ ಸ್ಥಾಪಿತ ಸಾಮರ್ಥ್ಯ 100 GW ದಾಟಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಭಾರತದ ನವೀಕರಿಸಬಹುದಾದ ಇಂಧನ ವಲಯ ಪ್ರಸಕ್ತ ಆರ್ಥಿಕ ವರ್ಷದ ಆರಂಭದಲ್ಲೇ ಗರಿಷ್ಠ ಸ್ಥಾಪನಾ ಸಾಮರ್ಥ್ಯವನ್ನು ಸಾಧಿಸಿದೆ. ಈ ಅವಧಿಯಲ್ಲಿ 25 ಗಿಗಾವಾಟ್ ಸ್ಥಾಪನೆ ಮಾಡಿದ್ದು, 2024ರ 18.57 GW ನೊಂದಿಗೆ ಹೋಲಿಸಿದರೆ ಶೇ.35ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದರು.

ಇದೇ ವರ್ಷದಲ್ಲಿ 74 GW ಸಾಮರ್ಥ್ಯ ಹೆಚ್ಚಳ ನಿರೀಕ್ಷೆ: 2025ರಲ್ಲಿ 15 GW ನಿಂದ 21 GWಗೆ ಏರಿಕೆಯಾಗಿ ಶೇ.38ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಆತ್ಮನಿರ್ಭರ್ ಧ್ಯೇಯದಂತೆ ದೇಶದ ಸೌರ ಶಕ್ತಿ ಉತ್ಪಾದನಾ ಸಾಮರ್ಥ್ಯ ಇದೇ ವರ್ಷದಲ್ಲಿ 38 GW ನಿಂದ 74 GWಗೆ ಏರಿಕೆ ಕಾಣಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಸೌರ PV ಕೋಶಗಳ ಉತ್ಪಾದನಾ ಸಾಮರ್ಥ್ವವೂ 2024ರಲ್ಲಿ ಇದ್ದ 9GW ನಿಂದ 25ರಲ್ಲಿ 25 GWಗೆ ಅಂದರೆ ಕಳೆದ ವರ್ಷಕ್ಕಿಂತ ಮೂರುಪಟ್ಟು ಹೆಚ್ಚಳ ಕಂಡಿದೆ. ಭಾರತದ ಮೊದಲ ಇಂಗೋಟ್-ವೇಫರ್ ತಯಾರಿಕಾ ಘಟಕವೂ ಪ್ರಸಕ್ತ ವರ್ಷ 2 GW ಸಾಮರ್ಥ್ಯದಲ್ಲಿ ಉತ್ಪಾದನೆ ಆರಂಭಿಸಿದೆ ಎಂದರು.

11.01 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಸೂರ್ಯ ಘರ್‌: PM ಸೂರ್ಯ ಘರ್‌ ಯೋಜನೆ ಮೊದಲ ವರ್ಷದಲ್ಲೇ 11.01 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ತಲುಪಿದೆ. ಈಗಾಗಲೇ 6.98 ಲಕ್ಷ ಜನರಿಗೆ ₹5,437.20 ಕೋಟಿ ಸಹಾಯಧನವನ್ನು ಕೇಂದ್ರ ಸರ್ಕಾರ ವಿತರಿಸಿದೆ ಎಂದು ಸಚಿವರು ವಿವರಿಸಿದರು.

10 ಲಕ್ಷ ಪಂಪ್‌ಗಳಿಗೆ ಪಿಎಂ ಕುಸುಮ್‌: PM-KUSUM ಯೋಜನೆಯಡಿ 2025ರಲ್ಲಿ 7 ಲಕ್ಷ ಪಂಪ್‌ಗಳ ಸೌರೀಕರಣ ಮಾಡಲಾಗಿದೆ. ಈವರೆಗೆ ಒಟ್ಟು 10 ಲಕ್ಷ ಪಂಪ್‌ಗಳಿಗೆ ಸೌರ ಶಕ್ತಿ ವಿದ್ಯುತ್‌ ಕಲ್ಪಿಸಲಾಗಿದೆ. ಪ್ರಸಕ್ತ ವರ್ಷದ ಆರಂಭದಲ್ಲೇ PM-KUSUM ಯೋಜನೆ ಆರ್ಥಿಕ ವೆಚ್ಚ ₹2,680 ಕೋಟಿಯಾಗಿದೆ. ಇದು 2024ಕ್ಕಿಂತ ಶೇ.268ರಷ್ಟು ಹೆಚ್ಚು ಪ್ರಗತಿ ಸಾಧಿಸಿದೆ ಎಂದು ಹೇಳಿದರು.

4.50 ಲಕ್ಷ ಟನ್ ಹಸಿರು ಹೈಡ್ರೋಜನ್ ಉತ್ಪಾದನೆಗೆ ಉತ್ತೇಜನ: ಹಸಿರು ಹೈಡ್ರೋಜನ್ ಉದ್ಯಮಕ್ಕೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹೆಚ್ಚು ಉತ್ತೇಜನ, ಪ್ರೋತ್ಸಾಹ ನೀಡಲಾಗಿದೆ. 1,500 ಮೆಗಾವ್ಯಾಟ್‌ ಸಾಮರ್ಥ್ಯದ ಎಲೆಕ್ಟ್ರೊಲೈಸರ್ ತಯಾರಿಕೆಗೆ ₹2,220 ಕೋಟಿ ಪ್ರೋತ್ಸಾಹ ಧನ ನೀಡಿದ್ದು, 4,50,000 ಟನ್ ಹಸಿರು ಹೈಡ್ರೋಜನ್ ಉತ್ಪಾದನೆಗೆ ₹2,239 ಕೋಟಿ ನೀಡಲಾಗಿದೆ ಎಂದು ಹೇಳಿದರು.

ಇನ್ಫ್ರಾಸ್ಟ್ರಕ್ಚರ್ ವಿಭಾಗದಲ್ಲಿ ಹೈಡ್ರೋಜನ್ ಬಳಸಿ ಸ್ಟೀಲ್ ಮತ್ತು ಪರಿವಹನ ಕ್ಷೇತ್ರಗಳಲ್ಲಿ ಪೈಲಟ್ ಯೋಜನೆಗಳು ಪ್ರಾರಂಭಗೊಂಡಿವೆ. ಸ್ಟೀಲ್ ಕ್ಷೇತ್ರದಲ್ಲಿ 7 ಪೈಲಟ್ ಯೋಜನೆಗಳಿಗೆ ₹454 ಕೋಟಿ ಮತ್ತು 10 ಬಸ್, 27 ಲಾರಿಗಳನ್ನು ಬಳಸಲು ₹208 ಕೋಟಿ ಹಂಚಲಾಗಿದೆ ಎಂದರು.

ಆರ್ಥಿಕ ವರ್ಷ 2026ರ ಆರಂಭದಲ್ಲಿ ಪರಿವಹನ ಮತ್ತು ಗೃಹಬಳಕೆ ಉಳಿತಾಯಕ್ಕೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಲಾಗಿದೆ. ಬಯೋ-CNG ಅನ್ನು CNG (Compressed Natural Gas) ಮತ್ತು PNG (Piped Natural Gas) ಗೆ ಮಿಶ್ರಣಗೊಳಿಸುವ ನಿಯಮ 2025ರ ಏಪ್ರಿಲ್ 1ರಿಂದ ಬದಿಸಿದೆ. ಪ್ರತಿಲವಾಗಿ ಆರ್ಥಿಕ ವರ್ಷ 2028-29ರಲ್ಲಿಯೂ ಇದು ಶೇ.5ರಷ್ಟು ಹೆಚ್ಚಳವಾಗಲಿದೆ ಎಂದು ತಿಳಿಸಿದರು.

IREDA ₹47,453 ಕೋಟಿ ಸಾಲ ಅನುಮೋದನೆ: ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (IREDA) ಆರ್ಥಿಕ ವರ್ಷ 2025ರಲ್ಲಿ ₹47,453 ಕೋಟಿ ಸಾಲ ಅನುಮೋದನೆ ನೀಡಿದೆ. ₹30,168 ಕೋಟಿ ಸಾಲ ವಿತರಿಸಿದ್ದು, ಇದು ಕಳೆದ ವರ್ಷಕ್ಕಿಂತ ಶೇ.20ರಷ್ಟು ಹೆಚ್ಚಾಗಿದೆ ಎಂದು ಹೇಳಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ನವೀಕರಿಸಬಹುದಾದ ಇಂಧನ ವಲಯದಲ್ಲಿ ಮಹತ್ತರ ಘಟ್ಟಕ್ಕೆ ಸಾಕ್ಷಿಯಾಗಿದೆ. ಜಗತ್ತಿನ ಮೂರನೇ ಅತಿದೊಡ್ಡ ರಾಷ್ಟ್ರವಾಗುತ್ತಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ಪ್ರಧಾನಿ ಮೋದಿ ಶ್ಲಾಘನೆ: ಭಾರತ ನವೀಕರಿಸಬಹುದಾದ ಇಂಧನ ವಲಯದಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸಿದೆ. ಇಂಧನ ಸುಸ್ಥಿರತೆಯತ್ತ ಬದ್ಧತೆ ತೋರಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘನೆ ವ್ಯಕ್ತಪಡಿಸಿ ಸಚಿವ ಪ್ರಲ್ಹಾದ ಜೋಶಿ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

UP ದಲಿತ ಮಹಿಳೆ ಕೊಲೆ: ಯೋಗಿ ಸರ್ಕಾರ ಜಾತಿ, ಧರ್ಮದ ಆಧಾರದಲ್ಲಿ ದ್ವೇಷಕ್ಕೆ ಪ್ರಚೋದನೆ- ಕಾಂಗ್ರೆಸ್ ಕಿಡಿ!

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

SCROLL FOR NEXT