ಬಿಗಿ ಭದ್ರತೆಯ ನಡುವೆ ಜಾಮಾ ಮಸೀದಿ ಬಳಿ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ. 
ದೇಶ

ದೆಹಲಿ: ವಕ್ಫ್ ತಿದ್ದುಪಡಿ ಮಸೂದೆ ಪ್ರತಿ ಹರಿದುಹಾಕಿ ಜಾಮಿಯಾ ವಿದ್ಯಾರ್ಥಿಗಳ ಪ್ರತಿಭಟನೆ; ಸೂಕ್ಷ್ಮ ಪ್ರದೇಶಗಳಲ್ಲಿ ಧ್ವಜ ಮೆರವಣಿಗೆ

ಜಾಮಿಯಾದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಮಸೂದೆ ವಿರುದ್ಧ ಮಾತನಾಡಿದರು. ಸರ್ಕಾರವು ಅಲ್ಪಸಂಖ್ಯಾತ ಸಮುದಾಯ ಮತ್ತು ಅದರ ಆಸ್ತಿಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದರು.

ನವದೆಹಲಿ: ಸಂಸತ್ತಿನ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದ ವಕ್ಫ್ (ತಿದ್ದುಪಡಿ) ಮಸೂದೆ 2025ಕ್ಕೆ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದು, ವಿಶ್ವವಿದ್ಯಾಲಯದ ಪ್ರವೇಶದ್ವಾರದಲ್ಲಿ ಆಯೋಜಿಸಲಾದ ಪ್ರತಿಭಟನೆಯಲ್ಲಿ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.

ವಿವಾದಾತ್ಮಕ ಮಸೂದೆ ಅಂಗೀಕಾರದ ನಂತರ ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆಯಾಗದಂತೆ ನೋಡಿಕೊಳ್ಳಲು ದೆಹಲಿ ಪೊಲೀಸರು ಅರೆಸೇನಾ ಪಡೆಗಳೊಂದಿಗೆ ದೆಹಲಿಯ ಜಾಮಿಯಾ ನಗರ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಸೇರಿದಂತೆ ನಗರದಾದ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಧ್ವಜ ಮೆರವಣಿಗೆಗಳನ್ನು ನಡೆಸಿದರು.

ಜಾಮಿಯಾದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಮಸೂದೆ ವಿರುದ್ಧ ಮಾತನಾಡಿದರು. ಸರ್ಕಾರವು ಅಲ್ಪಸಂಖ್ಯಾತ ಸಮುದಾಯ ಮತ್ತು ಅದರ ಆಸ್ತಿಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದರು. ಪ್ರತಿಭಟನೆಯ ಕ್ರಮವಾಗಿ, ಅವರು ಮಸೂದೆಯ ಪ್ರತಿಗಳನ್ನು ಸುಟ್ಟುಹಾಕಿದರು.

ಅಖಿಲ ಭಾರತ ವಿದ್ಯಾರ್ಥಿ ಸಂಘ (AISA) ಮತ್ತು ಇತರ ಎಡಪಂಥೀಯ ವಿದ್ಯಾರ್ಥಿ ಗುಂಪುಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳು ವಿಶ್ವವಿದ್ಯಾಲಯದ 7ನೇ ಗೇಟ್ ಬಳಿ ನಡೆದವು. ಎಐಎಸ್ ಎ ವಕ್ಫ್ ಮಸೂದೆಯನ್ನು "ಅಸಂವಿಧಾನಿಕ ಮತ್ತು ಕೋಮುವಾದಿ" ಎಂದು ಖಂಡಿಸಿದೆ. ವಿದ್ಯಾರ್ಥಿಗಳ ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವ ವಿಶ್ವವಿದ್ಯಾಲಯ ಆಡಳಿತವನ್ನು ಟೀಕಿಸಿತು.

ಜಾಮಿಯಾ ಆಡಳಿತವು ಕ್ಯಾಂಪಸ್‌ಗೆ ಬೀಗ ಹಾಕಿ ಎಲ್ಲಾ ಗೇಟ್‌ಗಳನ್ನು ಮುಚ್ಚಿ ವಿದ್ಯಾರ್ಥಿಗಳು ಪ್ರವೇಶಿಸುವುದನ್ನು ಮತ್ತು ನಿರ್ಗಮಿಸುವುದನ್ನು ತಡೆಯಿತು. ನಂತರ ಹೇಳಿಕೆ ಬಿಡುಗಡೆ ಮಾಡಿರುವ ಎಐಎಸ್ ಐ, ಈ ಮಸೂದೆ ಅಸಂವಿಧಾನಿಕ ಮತ್ತು ಕೋಮುಭಾವನೆ ಹೆಚ್ಚಿಸುವುದಾಗಿದ್ದು ವಿದ್ಯಾರ್ಥಿಗಳ ಅಸಮ್ಮತಿಯನ್ನು ವಿಶ್ವವಿದ್ಯಾಲಯ ಆಡಳಿತ ಹತ್ತಿಕ್ಕುತ್ತಿದೆ ಎಂದು ಟೀಕಿಸಿದೆ.

ಈ ಮಧ್ಯೆ, ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಡಾ. ವೀರೇಂದ್ರ ಸೋಲಂಕಿ, ಹಿಂದಿನ ವಕ್ಫ್ ಕಾನೂನಿನ ಬಗ್ಗೆ ವಿವಿಧ ವಿವಾದಗಳು ಮತ್ತು ಸವಾಲುಗಳು ಉದ್ಭವಿಸಿವೆ, ಇವುಗಳನ್ನು ಈಗ ಈ ತಿದ್ದುಪಡಿಯ ಮೂಲಕ ನ್ಯಾಯಯುತವಾಗಿ ಪರಿಹರಿಸಲಾಗುತ್ತಿದೆ. ವಕ್ಫ್ ಕೌನ್ಸಿಲ್‌ನಲ್ಲಿ ಮುಸ್ಲಿಮೇತರರು ಮತ್ತು ಮಹಿಳೆಯರ ಏಕೀಕರಣಕ್ಕೆ ಕರೆ ನೀಡುವುದರಿಂದ ಅದು ಇನ್ನಷ್ಟು ನಿಷ್ಪಕ್ಷಪಾತವಾಗುತ್ತದೆ ಎಂದು ಹೇಳಿದರು.

ತೀವ್ರ ಪ್ರತಿಭಟನೆ ನಡೆಯುತ್ತಿರುವುದರಿಂದ ಪೊಲೀಸರು ಹಲವಾರು ಸೂಕ್ಷ್ಮ ಸ್ಥಳಗಳನ್ನು ಮೇಲ್ವಿಚಾರಣೆ ಮಾಡಲು ಡ್ರೋನ್‌ಗಳನ್ನು ನಿಯೋಜಿಸಿದ್ದಾರೆ, ಉತ್ತರ, ಈಶಾನ್ಯ, ಆಗ್ನೇಯ, ಶಹದಾರ ಮತ್ತು ಪೂರ್ವ ದೆಹಲಿ ಜಿಲ್ಲೆಗಳಲ್ಲಿ ಪೊಲೀಸರ ಗಸ್ತು ತಿರುಗುವಿಕೆಯನ್ನು ತೀವ್ರಗೊಳಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT