ಸ್ಥಳದಲ್ಲಿರುವ ಪಂಜಾಬ್ ಪೊಲೀಸರು 
ದೇಶ

ಪಂಜಾಬ್: BJP ನಾಯಕ ಮನೋರಂಜನ್ ಕಾಲಿಯಾ ನಿವಾಸದ ಬಳಿ ಭಾರೀ ಸ್ಫೋಟ! Video

ಇಂದು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಭಾರೀ ಸ್ಫೋಟಕ್ಕೆ ಗಾಢ ನಿದ್ರೆಯಲ್ಲಿದ್ದ ಜನರು ಬೆಚ್ಚಿ ಬಿದ್ದಿದ್ದಾರೆ.

ಜಲಂಧರ್ (ಪಂಜಾಬ್): ಪಂಜಾಬ್‌ ರಾಜ್ಯದ ಜಲಂಧರ್‌ನ ಬಿಜೆಪಿ ನಾಯಕ ಮನೋರಂಜನ್ ಕಾಲಿಯಾ ಅವರ ನಿವಾಸದ ಹೊರಗೆ ಭಾರೀ ಸ್ಫೋಟ ಸಂಭವಿಸಿದ್ದು, ಆಂತಕ ಸೃಷ್ಟಿಸಿದೆ.

ಇಂದು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಭಾರೀ ಸ್ಫೋಟಕ್ಕೆ ಗಾಢ ನಿದ್ರೆಯಲ್ಲಿದ್ದ ಜನರು ಬೆಚ್ಚಿ ಬಿದ್ದಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಸ್ಥಳೀಯ ಸಿಸಿಟಿವಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಸ್ಥಳಕ್ಕೆ ವಿಧಿವಿಜ್ಞಾನ ತಂಡ ಭೇಟಿ ನೀಡಿದ್ದು, ಗ್ರೇನೇಡ್ ದಾಳಿಯೇ ಅಥವಾ ಮತ್ತಿತರ ವಸ್ತುಗಳಿಂದ ಸಂಭವಿಸಿದ ಸ್ಫೋಟವೇ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.

ರಾತ್ರಿ 1 ಗಂಟೆ ಸುಮಾರಿಗೆ ಸ್ಫೋಟದ ಶಬ್ಧ ಕೇಳಿಸಿತು. ಈ ವೇಳೆ ಎಲ್ಲರೂ ಮಲಗಿದ್ದೆವು. ಭೂಮಿಯೇ ನಡುಗಿದ ಶಬ್ಧ ಕೇಳಿಸಿತು. ನಂತರವೇ ಸ್ಫೋಟ ಎಂಬ ವಿಚಾರ ನನ್ನ ಗಮನಕ್ಕೆ ಬಂದಿತು. ಬಳಿಕ ನನ್ನ ಗನ್ ಮ್ಯಾನ್ ಅನ್ನು ಪೊಲೀಸ್ ಠಾಣೆಗೆ ಕಳುಹಿಸಿದೆ. ಸಿಸಿಟಿವಿ ತನಿಖೆ ನಡೆಸಲಾಗುತ್ತಿದೆ. ವಿಧಿವಿಜ್ಞಾನ ತಜ್ಞರು ಸಹ ಸ್ಥಳದಲ್ಲಿದ್ದಾರೆಂದು ಬಿಜೆಪಿ ನಾಯಕ ಮನೋರಂಜನ್ ಅವರು ಹೇಳಿದ್ದಾರೆ.

ಜಲಂಧರ್‌ನ ಉಪ ಪೊಲೀಸ್ ಆಯುಕ್ತ ಮನ್ಪ್ರೀತ್ ಸಿಂಗ್ ಘಟನೆಯನ್ನು ದೃಢಪಡಿಸಿದ್ದು, ಮನೋರಂಜನ್ ಕಾಲಿಯಾ ಅವರ ನಿವಾಸದ ಬಳಿ ಸ್ಫೋಟ ಸಂಭವಿಸಿದೆ. ವಿಧಿವಿಜ್ಞಾನ ತಂಡವು ಪರಿಶೀಲನೆ ನಡೆಸಿ ವರದಿಯನ್ನು ನೀಡಲಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಸ್ತೂರಿರಂಗನ್ ವರದಿ: ಕೇಂದ್ರದ ಇಸಿಎ ಅಧಿಸೂಚನೆ ವಿಧಾನಸಭೆಯಲ್ಲಿ ಸರ್ವಾನುಮತದಿಂದ ತಿರಸ್ಕೃತ; ಒಂದು ವರ್ಷದ ಕಾಲಾವಕಾಶ ಕೋರಿಕೆ!

Asian Games 2026: Cricket Finalನಲ್ಲಿ ಶ್ರೀಲಂಕಾ ಮಣಿಸಿ ಇತಿಹಾಸ ಬರೆದ ಭಾರತ ಮಹಿಳಾ ತಂಡ, ಚಿನ್ನದ ಬೇಟೆ!

ನನ್ನ ಕಾರನ್ನೇ ತೆಗಸ್ತೀಯಾ, ನಿನ್ನ ವಿರುದ್ಧ ಪ್ರಕರಣವೊಂದಿದೆ ಹುಷಾರ್: ವಿಧಾನಸೌಧದ ಗೇಟ್ ಬಳಿ DCP ಯೋಗಿಶ್‌ಗೆ ಸಿದ್ದರಾಮಯ್ಯ ತರಾಟೆ!

'ಪ್ಲೀಸ್ ಬಿಟ್ ಬಿಡಿ'; ಒಡಿಶಾದಲ್ಲೂ ಶಾಕಿಂಗ್ ಘಟನೆ, ಬೈಕ್ ನಲ್ಲಿ ತೆರಳುತ್ತಿದ್ದ ಜೋಡಿಗೆ ಹಲ್ಲೆ-ಕಿರುಕುಳ, Video

ಇನ್ಮುಂದೆ ಸಾಬೂನು, ಶಾಂಪೂ, ಟೂತ್‌ಪೇಸ್ಟ್‌ಗಳ ಮೇಲೂ ವೆಜ್-ನಾನ್ ವೆಜ್ ಲೇಬಲ್ ಕಡ್ಡಾಯ: ಕೇಂದ್ರ ಸರ್ಕಾರದಿಂದ ಮಹತ್ವದ ಆದೇಶ