ಸಾಂದರ್ಭಿಕ ಚಿತ್ರ 
ದೇಶ

ಮದುವೆಗೆ 9 ದಿನ ಬಾಕಿ ಇರುವಾಗಲೇ ಭಾವಿ ಅಳಿಯನ ಜೊತೆ ವಧುವಿನ ತಾಯಿ ಪರಾರಿ!

ವರನೊಂದಿಗೆ ಪರಾರಿಯಾಗುವಾಗ ವಧುವಿನ ತಾಯಿ, ಮಗಳ ಆಭರಣಗಳು ಮತ್ತು ಮದುವೆಗಾಗಿ ಉಳಿಸಿದ್ದ ಹಣವನ್ನೂ ತೆಗೆದುಕೊಂಡು ಹೋಗಿದ್ದಾಳೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಉತ್ತರ ಪ್ರದೇಶ: ಮದುವೆಗೆ ಕೇವಲ 9 ದಿನಗಳು ಬಾಕಿ ಇರುವಾಗಲೇ ವಧುವಿನ ತಾಯಿಯೊಂದಿಗೆ ವರ ಓಡಿಹೋದ ವಿಚಿತ್ರ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ.

ಓಡಿ ಹೋದ ವರ, ತನ್ನ ಭಾವಿ ಅತ್ತೆಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ ಯಾರಿಗೂ ಅವರಿಬ್ಬರ ಸಂಬಂಧದ ಬಗ್ಗೆ ತಿಳಿದಿರಲಿಲ್ಲ. ವರನೊಂದಿಗೆ ಪರಾರಿಯಾಗುವಾಗ ವಧುವಿನ ತಾಯಿ, ಮಗಳ ಆಭರಣಗಳು ಮತ್ತು ಮದುವೆಗಾಗಿ ಉಳಿಸಿದ್ದ ಹಣವನ್ನೂ ತೆಗೆದುಕೊಂಡು ಹೋಗಿದ್ದಾಳೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಪರಾರಿಯಾದ ಮಹಿಳೆ, ಯುವಕನೊಂದಿಗೆ ತನ್ನ ಮಗಳ ಮದುವೆಯನ್ನು ಮಾಡಿಸಲು ಮುಂದಾಗಿದ್ದಳು. ಮದುವೆಯ ಸಿದ್ಧತೆಗಳ ನೆಪದಲ್ಲಿ ಬಾಯ್​ಫ್ರೆಂಡ್​ ಆಗಾಗ್ಗೆಮನೆಗೆ ಬರುತ್ತಿದ್ದ. ಆದರೆ, ಯಾರಿಗೂ ಇಬ್ಬರ ಬಗ್ಗೆ ಯಾವುದೇ ಅನುಮಾನ ಬಂದಿರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಆ ಯುವಕ ಮತ್ತು ಭಾವಿ ಅತ್ತೆಯ ನಡುವೆ ಪ್ರಣಯ ಸಂಬಂಧವೂ ಬೆಳೆಯಿತು. ಇದರ ನಡುವೆ ವರನು ತನ್ನ ಭಾವಿ ಅತ್ತೆಗೆ ಮೊಬೈಲ್ ಫೋನ್ ಉಡುಗೊರೆಯಾಗಿ ನೀಡಿದನು. ಆದರೆ, ತಾಯಿ ಮತ್ತು ಮಗನ ನಡುವೆ ಇರುವ ಬಾಂದವ್ಯ ಅಂತ ಎಲ್ಲರೂ ಭಾವಿಸಿದ್ದರು. .

ಏಪ್ರಿಲ್ 16ರಂದು ತನ್ನ ಮಗಳ ವಿವಾಹ ನಡೆಯಬೇಕಿತ್ತು. ಮದುವೆಗೆ ಎಲ್ಲರನ್ನೂ ಆಹ್ವಾನಿಸಲಾಗಿತ್ತು. ಶಾಪಿಂಗ್‌ಗೆ ಹೋಗುವುದಾಗಿ ಹೇಳಿ ಇಬ್ಬರೂ ಮನೆಯಿಂದ ಹೊರಟರು. ಇದಾದ ನಂತರ, ಅವರಿಬ್ಬರು ಮನೆಗೆ ವಾಪಸ್​ ಬರಲೇ ಇಲ್ಲ. ಅವರ ಬಗ್ಗೆ ಯಾವುದೇ ಸುದ್ದಿಯೂ ಸಿಗಲಿಲ್ಲ.

ಇಬ್ಬರನ್ನು ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ, ಅದು ಕೂಡ ಪ್ರಯೋಜನವಾಗಲಿಲ್ಲ. ಅನುಮಾನಗೊಂಡ ಹುಡುಗಿಯ ತಂದೆ, ಬೀರು ಪರಿಶೀಲಿಸಿದಾಗ ಚಿನ್ನ ಮತ್ತು ಹಣ ಕಾಣೆಯಾಗಿರುವುದು ಕಂಡುಬಂದಿದೆ. ಅಲ್ಲಿಗೆ ಇಬ್ಬರು ಓಡಿ ಹೋಗಿದ್ದಾರೆಂಬುದು ಖಚಿತವಾಗಿದೆ. ಈ ವಿಷಯ ಸದ್ಯ ಪಟ್ಟಣಾದ್ಯಂತ ಚರ್ಚೆಗೆ ಗ್ರಾಸವಾಗಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!