ಡೇವಿಡ್ ಹೆಡ್ಲಿ  
ದೇಶ

ಭಾರತ ವೀಸಾ ಪಡೆಯಲು ಡೇವಿಡ್ ಹೆಡ್ಲಿಗೆ ಸಹಾಯ ಮಾಡಿದ್ದ ತಹವ್ವೂರ್ ರಾಣಾ!

ರಾಣಾ 1990 ರ ದಶಕದ ಉತ್ತರಾರ್ಧದಲ್ಲಿ ಕೆನಡಾಕ್ಕೆ ವಲಸೆ ಹೋಗುವ ಮೊದಲು ಪಾಕಿಸ್ತಾನ ಸೇನಾ ವೈದ್ಯಕೀಯ ದಳದಲ್ಲಿ ಸೇವೆ ಸಲ್ಲಿಸಿದ್ದನು. ವಲಸೆ ಸಲಹಾ ಸಂಸ್ಥೆಯನ್ನು ಪ್ರಾರಂಭಿಸಿದ್ದನು.

ಮುಂಬೈ: 26/11ರ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದ ಪ್ರಮುಖ ಆರೋಪಿ, ಎನ್ಐಎ ಕಸ್ಟಡಿಯಲ್ಲಿರುವ ತಹವ್ವೂರ್ ಹುಸೇನ್ ರಾಣಾ, ಸಹ-ಸಂಚುಕೋರ ಡೇವಿಡ್ ಕೋಲ್ಮನ್ ಹೆಡ್ಲಿಗೆ ಭಾರತೀಯ ವೀಸಾ ಪಡೆಯಲು ಸಹಾಯ ಮಾಡಿದ್ದ ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿನ್ನೆ ಗುರುವಾರ ಸಂಜೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ರಾಣಾನನ್ನು ಔಪಚಾರಿಕವಾಗಿ ಬಂಧಿಸಿ ಎನ್ ಐಎ ಕಸ್ಡಡಿಗೊಪ್ಪಿಸಿದೆ. ಆತನನ್ನು ಅಮೆರಿಕದಿಂದ ಯಶಸ್ವಿಯಾಗಿ ಹಸ್ತಾಂತರಿಸಿದ ನಂತರ ಭಾರತಕ್ಕೆ ಕರೆತರಲಾಯಿತು. ದೆಹಲಿಯ ವಿಶೇಷ ನ್ಯಾಯಾಲಯವು 18 ದಿನಗಳ ಕಾಲ ಸಂಸ್ಥೆಯ ಕಸ್ಟಡಿಯಲ್ಲಿ ಇರಿಸಿದೆ.

ರಾಣಾ 1990 ರ ದಶಕದ ಉತ್ತರಾರ್ಧದಲ್ಲಿ ಕೆನಡಾಕ್ಕೆ ವಲಸೆ ಹೋಗುವ ಮೊದಲು ಪಾಕಿಸ್ತಾನ ಸೇನಾ ವೈದ್ಯಕೀಯ ದಳದಲ್ಲಿ ಸೇವೆ ಸಲ್ಲಿಸಿದ್ದನು. ವಲಸೆ ಸಲಹಾ ಸಂಸ್ಥೆಯನ್ನು ಪ್ರಾರಂಭಿಸಿದ್ದನು. ನಂತರ ಅಮೆರಿಕಕ್ಕೆ ತೆರಳಿ ಚಿಕಾಗೋದಲ್ಲಿ ಕಚೇರಿಯನ್ನು ಸ್ಥಾಪಿಸಿದನು.

ನವೆಂಬರ್ 2008 ರ ದಾಳಿಯ ಮೊದಲು ಮುಂಬೈನಲ್ಲಿ ವಿಚಕ್ಷಣ ಕಾರ್ಯಾಚರಣೆಯನ್ನು ನಡೆಸಲು ರಾಣಾ ತನ್ನ ಸಂಸ್ಥೆಯ ಮೂಲಕ ಹೆಡ್ಲಿಗೆ ರಕ್ಷಣೆ ನೀಡಿ ಹತ್ತು ವರ್ಷಗಳ ವೀಸಾ ವಿಸ್ತರಣೆಯನ್ನು ಪಡೆಯಲು ಸಹಾಯ ಮಾಡಿದ್ದನು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದಲ್ಲಿದ್ದಾಗ ಹೆಡ್ಲಿ ವಲಸೆ ವ್ಯವಹಾರವನ್ನು ನಡೆಸುವುದರಲ್ಲಿ ಮುಂಚೂಣಿಯಲ್ಲಿದ್ದ ಮತ್ತು ರಾಣಾ ಜೊತೆ ನಿಯಮಿತವಾಗಿ ಸಂಪರ್ಕದಲ್ಲಿದ್ದ. ಈ ಅವಧಿಯಲ್ಲಿ ಇಬ್ಬರ ನಡುವೆ 230 ಕ್ಕೂ ಹೆಚ್ಚು ಫೋನ್ ಕರೆಗಳು ನಡೆದಿವೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಎನ್‌ಐಎ ಚಾರ್ಜ್‌ಶೀಟ್‌ನ ಪ್ರಕಾರ, ಈ ಅವಧಿಯಲ್ಲಿ ದಾಳಿಯ ಮತ್ತೊಬ್ಬ ಸಹ-ಸಂಚುಕೋರ 'ಮೇಜರ್ ಇಕ್ಬಾಲ್' ಜೊತೆಯೂ ರಾಣಾ ಸಂಪರ್ಕದಲ್ಲಿದ್ದ. ಭಯೋತ್ಪಾದನಾ ದಾಳಿಗೆ ಕೆಲವು ದಿನಗಳ ಮೊದಲು, ನವೆಂಬರ್ 2008 ರಲ್ಲಿ ರಾಣಾ ಭಾರತಕ್ಕೆ ಭೇಟಿ ನೀಡಿದ್ದನು.

ರಾಣಾ ವಿರುದ್ಧ ಮುಂಬೈ ಪೊಲೀಸರು 2023ರಲ್ಲಿ ಸಲ್ಲಿಸಿದ ಚಾರ್ಜ್‌ಶೀಟ್‌ನ ಪ್ರಕಾರ, 26/11 ದಾಳಿಗೆ ಮುನ್ನ ಪೊವೈನಲ್ಲಿರುವ ಹೋಟೆಲ್‌ನಲ್ಲಿ ವಾಸಿಸುತ್ತಿದ್ದನು. ಪ್ರಕರಣದಲ್ಲಿ ಸಾಕ್ಷಿಯಾಗಿ ಪಟ್ಟಿ ಮಾಡಲಾದ ವ್ಯಕ್ತಿಯೊಂದಿಗೆ ದಕ್ಷಿಣ ಮುಂಬೈನ ಜನದಟ್ಟಣೆಯ ಸ್ಥಳಗಳ ಬಗ್ಗೆ ಚರ್ಚೆ ನಡೆಸಿದ್ದನು. ತರುವಾಯ, 166 ಜೀವಗಳನ್ನು ಬಲಿ ಪಡೆದ ಮಾರಕ ದಾಳಿಯ ಸಮಯದಲ್ಲಿ ಈ ಸ್ಥಳಗಳಲ್ಲಿ ಕೆಲವನ್ನು ಪಾಕಿಸ್ತಾನಿ ಭಯೋತ್ಪಾದಕರು ಗುರಿಯಾಗಿಸಿಕೊಂಡರು.

ಭಯೋತ್ಪಾದಕರು ಮುಂಬೈನ ತಾಜ್ ಮಹಲ್ ಮತ್ತು ಒಬೆರಾಯ್ ಹೋಟೆಲ್‌ಗಳು, ಲಿಯೋಪೋಲ್ಡ್ ಕೆಫೆ, ಚಾಬಾದ್ ಹೌಸ್ ಮತ್ತು ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣ ಸೇರಿದಂತೆ ಹಲವು ಪ್ರಸಿದ್ಧ ಸ್ಥಳಗಳನ್ನು ಗುರಿಯಾಗಿಸಿಕೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT