ಮೆಹುಲ್ ಚೋಕ್ಸಿ  
ದೇಶ

PNB ಬ್ಯಾಂಕ್ ವಂಚನೆ ಪ್ರಕರಣ: ಆರೋಗ್ಯದ ಕಾರಣ ನೀಡಿ ಬಂಧನದ ವಿರುದ್ಧ ಮೆಹುಲ್ ಚೋಕ್ಸಿ ಮೇಲ್ಮನವಿ!

ಪ್ರಸ್ತುತ ಜೈಲಿನಲ್ಲಿರುವ ಚೋಕ್ಸಿ ಆರೋಗ್ಯದ ಕಾರಣ ಉಲ್ಲೇಖಿಸಿ ಜಾಮೀನು ಮತ್ತು ತಕ್ಷಣದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ಭಾರತದಿಂದ ಪರಾರಿಯಾಗಿದ್ದ ವಜ್ರೋದ್ಯಮಿ ಮೆಹುಲ್ ಚೋಕ್ಸಿ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ (CBI)ಮತ್ತು ಜಾರಿ ನಿರ್ದೇಶನಾಲಯ (ED)ಮಾಡಿದ ಕೋರಿಕೆಯ ಮೇರೆಗೆ ಬೆಲ್ಜಿಯಂನ (Belgium) ಅಧಿಕಾರಿಗಳು ಬಂಧಿಸಿದ್ದಾರೆ. ಅದರ ಬಗ್ಗೆ ಭಾರತಕ್ಕೆ ಮಾಹಿತಿ ನೀಡಿದ್ದಾರೆ ಎಂದು ಸೋಮವಾರ ಮೂಲಗಳು ತಿಳಿಸಿವೆ.

ಪ್ರಸ್ತುತ ಜೈಲಿನಲ್ಲಿರುವ ಚೋಕ್ಸಿ ಆರೋಗ್ಯದ ಕಾರಣ ಉಲ್ಲೇಖಿಸಿ ಜಾಮೀನು ಮತ್ತು ತಕ್ಷಣದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಅವರ ಪರ ವಕೀಲರು ಇದೇ ರೀತಿಯ ಯೋಜನೆಯಲ್ಲಿದ್ದು, ಭಾರತಕ್ಕೆ ಅವರ ಹಸ್ತಾಂತರವನ್ನು ವಿರೋಧಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ಬೆಲ್ಜಿಯಂನಲ್ಲಿ ಇರುವುದಾಗಿ ಸ್ಥಳೀಯ ಆಡಳಿತಕ್ಕೆ ಗೊತ್ತಾದ ಬಳಿಕ ಚೋಕ್ಸಿಯನ್ನು ಶನಿವಾರ ಬಂಧಿಸಲಾಗಿತ್ತು. ಈಗ ಆತನನ್ನು ವಶಕ್ಕೆ ಪಡೆಯಲಾಗಿದ್ದು, ಭಾರತಕ್ಕೆ ಹಸ್ತಾಂತರಿಸಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

65 ವರ್ಷದ ವಜ್ರದ ವ್ಯಾಪಾರಿ ಚೋಕ್ಸಿ ಜನವರಿ 2, 2018 ರಂದು ಭಾರತದಿಂದ ಪರಾರಿಯಾಗಿದ್ದರು. ಸಾರ್ವಜನಿಕ ವಲಯದ PNB ಗೆ ರೂ. 13,850 ಕೋಟಿ ವಂಚಿಸಿದ ಆರೋಪದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ (ED) ಅವರು ಬೇಕಾಗಿದ್ದಾರೆ. ಈ ವಂಚನೆಯಲ್ಲಿ ಆತನ ಸೋದರಳಿಯ ನೀರವ್ ಮೋದಿ ಕೂಡ ಪಾಲುದಾರನಾಗಿದ್ದ.

ಆರಂಭದಲ್ಲಿ ಅಮೆರಿಕಕ್ಕೆ ತೆರಳುವ ಮೂಲಕ ಭಾರತದಿಂದ ಪರಾರಿಯಾಗಿದ್ದ ಚೋಕ್ಸಿ, ತದನಂತರ ಆಂಟಿಗುವಾದಲ್ಲಿ ನೆಲೆಸಿದ್ದರು. 2017 ರಲ್ಲಿ ಆಂಟಿಗುವಾದ ಪೌರತ್ವವನ್ನು ಪಡೆದಿದ್ದರು. ನಂತರ ಕ್ಯೂಬಾಕ್ಕೆ ತೆರಳಲು ಪ್ರಯತ್ನಿಸುತ್ತಿದ್ದಾಗ ಡೊಮಿನಿಕಾದಲ್ಲಿ ಬಂಧಿಸಲಾಗಿತ್ತು. ಆದರೂ ಅವರ ಪರ ವಕೀಲರು ಆಂಟಿಗುವಾದಿಂದ ಅಪಹರಿಸಿದ್ದಾರೆ ಎಂದು ಹೇಳಿದ್ದರು.

ಭಾರತವು ಹಸ್ತಾಂತರಕ್ಕೆ ಮನವಿ ಮಾಡಿದ್ದರೂ ಡೊಮಿನಿಕಾ ಮತ್ತೆ ಆತನನ್ನು ಆಂಟಿಗುವಾಕ್ಕೆ ಗಡೀಪಾರು ಮಾಡಿತ್ತು. ನಂತರ ಆತನ ಬೆಲ್ಜಿಯಂನಲ್ಲಿ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯಲು ಡೊಮಿನಿಕಾವನ್ನು ತೊರೆದಿದ್ದರು ಎನ್ನಲಾಗಿದೆ.

ಸಿಬಿಐ ತನಿಖೆಯ ಪ್ರಕಾರ, 2014 ಮತ್ತು 2017 ರ ನಡುವೆ ಚೋಕ್ಸಿ ತನ್ನ ಸಹಚರರು ಮತ್ತು ಬ್ಯಾಂಕ್‌ನ ಅಧಿಕಾರಿಗಳೊಂದಿಗೆ ಸೇರಿಕೊಂಡು ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 6,097.63 ಕೋಟಿ ರೂ. ನಷ್ಟ ಉಂಟು ಮಾಡಿದ್ದಾರೆ.

ತನಿಖೆಯ ಭಾಗವಾಗಿ, ಇಡಿ ಭಾರತದಾದ್ಯಂತ 136 ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, ಚೋಕ್ಸಿ ಒಡೆತನದ ಗೀತಾಂಜಲಿ ಗ್ರೂಪ್‌ಗೆ ಸಂಬಂಧಿಸಿದ 597.75 ಕೋಟಿ ರೂ ಹಾಗೂ ಮೆಹುಲ್ ಚೋಕ್ಸಿ ಮತ್ತು ಗೀತಾಂಜಲಿ ಗ್ರೂಪ್‌ನ ರೂ. 1,968.15 ಕೋಟಿ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟಾರೆಯಾಗಿ ಈ ಪ್ರಕರಣದಲ್ಲಿರೂ. 2,565.90 ಕೋಟಿ ಮೊತ್ತವನ್ನು ವಶಕ್ಕೆ ಪಡೆಯಲಾಗಿದೆ. ಮೂರು ಚಾರ್ಜ್ ಶೀಟ್ ಗಳನ್ನು ಇಡಿ ದಾಖಲಿಸಿದೆ.

ಮೆಹುಲ್ ಚೋಕ್ಸಿ ಮತ್ತು ಅವರ ಪತ್ನಿ ಪ್ರೀತಿ ಚೋಕ್ಸಿ ಅವರು ಬೆಲ್ಜಿಯಂನಲ್ಲಿ ಎಫ್ ರೆಸಿಡೆನ್ಸಿ ಕಾರ್ಡ್ (ಪೌರತ್ವ) ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರೀತಿ ಬೆಲ್ಜಿಯಂ ಪ್ರಜೆಯಾಗಿದ್ದಾರೆ.

2024 ರಲ್ಲಿ ದಂಪತಿ ಆಂಟಿಗುವಾದಿಂದ ಬೆಲ್ಜಿಯಂಗೆ ಸ್ಥಳಾಂತರಗೊಂಡಿದ್ದಾರೆ. ಚೋಕ್ಸಿಯ ಸೋದರಳಿಯ, ನೀರವ್ ಮೋದಿಯನ್ನು ಲಂಡನ್‌ನಲ್ಲಿ ಮೆಟ್ರೋಪಾಲಿಟನ್ ಪೊಲೀಸರು 2019 ರ ಮೇ ತಿಂಗಳಲ್ಲಿ ಬಂಧಿಸಿದ್ದರು. ಮೋದಿ ಹಸ್ತಾಂತರಕ್ಕಾಗಿ ಎಲ್ಲಾ ಕಾನೂನು ಹೋರಾಟ ನಡೆಸುತ್ತಿದ್ದರೂ ಅವರು ಇನ್ನೂ ಯುಕೆ ಜೈಲಿನಲ್ಲಿದ್ದಾರೆ.

ಮೆಹುಲ್ ಚೋಕ್ಸಿಯ ಬಂಧನಕ್ಕೆ ಕಾರಣವಾದ ಘಟನೆಗಳ ಟೈಮ್‌ಲೈನ್

2014–2017: ಮೆಹುಲ್ ಚೋಕ್ಸಿ ತನ್ನ ಸಹಚರರು ಮತ್ತು ಕೆಲವು PNB ಅಧಿಕಾರಿಗಳೊಂದಿಗೆ ಸೇರಿಕೊಂಡು ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಅಂದಾಜು 6,098 ಕೋಟಿ ರೂ. ವಂಚಿಸಿದ್ದ ಆರೋಪ ಕೇಳಿಬಂದಿತು. ಇದು ಚೋಕ್ಸಿ ಮತ್ತು ಅವರ ಸೋದರಳಿಯ ನೀರವ್ ಮೋದಿ ಒಳಗೊಂಡ 13,850 ಕೋಟಿ ರೂಪಾಯಿಗಳ ಬೃಹತ್ ಹಗರಣದ ಒಂದು ಭಾಗ ಮಾತ್ರ.

2017: ಚೋಕ್ಸಿ ಆಂಟಿಗುವಾ ಮತ್ತು ಬಾರ್ಬುಡಾದ ಪೌರತ್ವವನ್ನು ಪಡೆದುಕೊಂಡರು. ಇದು ಭಾರತದೊಂದಿಗೆ ಸಕ್ರಿಯ ಹಸ್ತಾಂತರ ಒಪ್ಪಂದವನ್ನು ಹೊಂದಿಲ್ಲ

2018: ಹಗರಣವನ್ನು ಬಯಲಿಗೆಳೆಯುವ ಮುನ್ನ, ಚೋಕ್ಸಿ ಜನವರಿ 2, 2018 ರಂದು ಭಾರತದಿಂದ ಪರಾರಿಯಾಗಿ ಆಂಟಿಗುವಾದಲ್ಲಿ ನೆಲೆಸಿದರು. ತದನಂತರ ಸಿಬಿಐ ಮತ್ತು ಇಡಿ ಚೋಕ್ಸಿ, ನೀರವ್ ಮೋದಿ ಮತ್ತು ಇತರರ ವಿರುದ್ಧ ಪ್ರಕರಣಗಳನ್ನು ದಾಖಲಿಸಿತು.

2019: ನೀರವ್ ಮೋದಿಯನ್ನು ಲಂಡನ್‌ನಲ್ಲಿ ಮೇ 2019 ರಲ್ಲಿ ಬಂಧಿಸಲಾಯಿತು. ಅವರು ಇನ್ನೂ ಲಂಡನ್‌ ಜೈಲಿನಲ್ಲಿದ್ದು, ಭಾರತಕ್ಕೆ ಹಸ್ತಾಂತರಕ್ಕೆ ಕಾಯಲಾಗುತ್ತಿದೆ.

2021: ದೋಣಿ ಮೂಲಕ ಕ್ಯೂಬಾಕ್ಕೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಚೋಕ್ಸಿಯನ್ನು 2021 ರಲ್ಲಿ ಡೊಮಿನಿಕಾದಲ್ಲಿ ಬಂಧಿಸಲಾಯಿತು. ಅವರನ್ನು ಆಂಟಿಗುವಾದಿಂದ ಅಪಹರಿಸಿ ಡೊಮಿನಿಕಾಗೆ ಕರೆದೊಯ್ಯಲಾಯಿತು ಎಂದು ಅವರ ವಕೀಲರು ಹೇಳಿದ್ದಾರೆ. ಭಾರತ ಆತನ ಹಸ್ತಾಂತರಕ್ಕೆ ಕೋರಿತು. ಅದನ್ನು ಡೊಮಿನಿಕನ್ ಅಧಿಕಾರಿಗಳು ತಿರಸ್ಕರಿಸಿದರು. ಅಂತಿಮವಾಗಿ ಅವರನ್ನು ಆಂಟಿಗುವಾಕ್ಕೆ ಗಡೀಪಾರು ಮಾಡಲಾಯಿತು

2023: ಇಂಟರ್‌ಪೋಲ್ ಮಾರ್ಚ್ 2023 ರಲ್ಲಿ ಚೋಕ್ಸಿ ವಿರುದ್ಧ ರೆಡ್ ನೋಟಿಸ್ ಅನ್ನು ಹಿಂತೆಗೆದುಕೊಂಡಿತು. ಇದು ಭಾರತದ ಹಸ್ತಾಂತರ ಪ್ರಯತ್ನಗಳಿಗೆ ದೊಡ್ಡ ಹೊಡೆತವಾಗಿ ಪರಿಣಮಿಸಿತು

2024: ಉದ್ಯಮಿ ಚೋಕ್ಸಿಗೆ ರಕ್ತದ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಹೀಗಾಗಿ ಚಿಕಿತ್ಸೆಗಾಗಿ ಬೆಲ್ಜಿಯಂಗೆ ತೆರಳಿದ್ದಾರೆ ಎಂದು ಚೋಕ್ಸಿ ಪರ ವಕೀಲರು ಹೇಳಿದ್ದಾರೆ.

2025: ಸಿಬಿಐನಿಂದ ಮತ್ತೆ ಹಸ್ತಾಂತರ ಮನವಿಯ ನಂತರ ಚೋಕ್ಸಿಯನ್ನು ಬೆಲ್ಜಿಯಂನಲ್ಲಿ ಬಂಧಿಸಲಾಯಿತು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT