ಮುಜಫರ್‌ನಗರದಲ್ಲಿ ಕೆಲವು ಯುವಕರು ಹಿಂದೂ ಯುವಕನೊಂದಿಗೆ ಮುಸ್ಲಿಂ ಯುವತಿ ಹೋಗುತ್ತಿರುವುದನ್ನು ನೋಡಿದ್ದಾರೆ. ಬುರ್ಖಾ ಧರಿಸಿದ ಯುವತಿ ಯುವಕನೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಳು. ಆಗ ಮುಸ್ಲಿಂ ಯುವಕರು ಅಡ್ಡಗಟ್ಟಿದ್ದಾರೆ. ನಂತರ ಯುವಕನ ಹೆಸರನ್ನು ಕೇಳಿದ್ದಾರೆ. ಆತ ಹಿಂದೂ ಅಂತ ಗೊತ್ತಾಗುತ್ತಿದ್ದಂತೆ ಆತನನ್ನು ಹತ್ತಿರದ ಅಂಗಡಿಗೆ ಎಳೆದುಕೊಂಡು ಹೋಗಿ ತೀವ್ರವಾಗಿ ಹಲ್ಲೆ ನಡೆಸಿದ್ದರು. ಅಷ್ಟಕ್ಕೆ ಸುಮ್ಮನಾಗದ ಗುಂಪು ಯುವತಿ ಧರಿಸಿದ್ದ ಬುರ್ಖಾವನ್ನು ಸಾರ್ವಜನಿಕವಾಗಿ ಕಿತ್ತು. ಆಕೆಯ ಕೂದಲನ್ನು ಎಳೆದು ಹಲವು ಬಾರಿ ಕಪಾಳಮೋಕ್ಷ ಮಾಡಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಹತ್ತಿರದ ಜನರು ಹೇಗೋ ಇಬ್ಬರನ್ನೂ ರಕ್ಷಿಸಿ ಅಲ್ಲಿಂದ ಕಳುಹಿಸಿದರು. ಸಂತ್ರಸ್ತರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು 6 ಆರೋಪಿಗಳನ್ನು ಬಂಧಿಸಿದ್ದಾರೆ. ಶನಿವಾರ ಸಂಜೆ ಖಲಾಪರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಟಕಿಯಾ ಖುರೇಷಿಯಾನ್ ಪ್ರದೇಶದ ಮುಸ್ಲಿಂ ಹುಡುಗಿ ಸಣ್ಣ ಹಣಕಾಸು ಕಂಪನಿಯಲ್ಲಿ ಕಲೆಕ್ಷನ್ ಏಜೆಂಟ್ ಆಗಿ ಕೆಲಸ ಮಾಡುತ್ತಾಳೆ. ಶಾಮ್ಲಿಯ ಭವನ್ ಪೊಲೀಸ್ ಠಾಣೆ ಪ್ರದೇಶದ ಇಸ್ಮಾಯಿಲ್‌ಪುರ ಗ್ರಾಮದ ಸಚಿನ್ ಕೂಡ ಅದೇ ಕಂಪನಿಯಲ್ಲಿ ಉದ್ಯೋಗಿ. ಶನಿವಾರ ಸಂಜೆ, ಇಬ್ಬರೂ ಮಹಿಳೆಯಿಂದ ಹಣ ಸಂಗ್ರಹಿಸಿ ಬೈಕ್‌ನಲ್ಲಿ ಹಿಂತಿರುಗುತ್ತಿದ್ದರು. ದಾರಿಯಲ್ಲಿ, 8-10 ಯುವಕರು ಖಲಾಪರ್‌ನ ದರ್ಜಿ ಬೀದಿಯಲ್ಲಿ ಅವನ ಬೈಕನ್ನು ನಿಲ್ಲಿಸಿದರು.
ಆ ಯುವಕರ ಗುಂಪು ಮೊದಲು ಅವರಿಬ್ಬರ ಹೆಸರುಗಳನ್ನು ಕೇಳಿದರು. ನಂತರ ಆತನನ್ನು ಬಲವಂತವಾಗಿ ಹತ್ತಿರದ ಬ್ಯಾಟರಿ ಅಂಗಡಿಗೆ ಕರೆದೊಯ್ದರು. ಅಲ್ಲಿ ಅವರಿಬ್ಬರನ್ನೂ ಹೊಡೆದರು. ಈ ಸಮಯದಲ್ಲಿ, ಅವರು ಯುವತಿಯ ಬುರ್ಖಾ ಮತ್ತು ಜಡೆಯನ್ನು ಎಳೆಯುತ್ತಲೇ ಇದ್ದರು. ಕೂಗಾಟ ಕೇಳಿ ಅಕ್ಕಪಕ್ಕದ ಜನರು ಕೂಡ ಸ್ಥಳಕ್ಕೆ ಬಂದು ಇಬ್ಬರನ್ನೂ ಆ ಯುವಕರಿಂದ ರಕ್ಷಿಸಿದರು. ಘಟನೆಯ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಪೊಲೀಸರು ಸ್ಥಳಕ್ಕೆ ತಲುಪಿ, ವೀಡಿಯೊ ದೃಶ್ಯಗಳಿಂದ ಆರೋಪಿಗಳನ್ನು ಗುರುತಿಸಿದರು. ಆ ಹುಡುಗಿ ಮಹಿಳಾ ಕಾನ್‌ಸ್ಟೆಬಲ್ ಜೊತೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಳು. ಪೊಲೀಸರು ಪ್ರಕರಣ ದಾಖಲಿಸಿಕೊಂಡರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಭಾನುವಾರ ವಿಡಿಯೋ ಕಾಣಿಸಿಕೊಂಡ ನಂತರ ಪೊಲೀಸರ ಮೇಲೆ ಒತ್ತಡ ಹೆಚ್ಚಾಯಿತು. ವಿಡಿಯೋ ದೃಶ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಲಾಗಿದೆ.
ಪೊಲೀಸರು ತಕ್ಷಣ ದಾಳಿ ನಡೆಸಿ ಭಾನುವಾರ ಸಂಜೆ ತಡವಾಗಿ ಆರು ಆರೋಪಿಗಳಾದ ಸರ್ತಾಜ್, ಶಾದಾಬ್, ಉಮರ್, ಅರ್ಶ್, ಶೋಯೆಬ್ ಮತ್ತು ಶಮಿ ಎಂಬಾತನನ್ನು ಬಂಧಿಸಿದರು. ಪೊಲೀಸರು ಆರೋಪಿಗಳಿಗೆ ತಕ್ಕ ಪಾಠ ಕಲಿಸಿದ್ದಾರೆ. ಸರ್ತಾಜ್, ಶಾದಾಬ್, ಉಮರ್, ಅರ್ಶ್, ಶೋಯಬ್ ಮತ್ತು ಶಮಿ ಪೊಲೀಸ್ ಠಾಣೆಯಲ್ಲಿ ಕುಂಟುತ್ತಾ ಸಾಗುತ್ತಿರುವ ವಿಡಿಯೋ ವೈರಲ್ ಆಗಿದೆ. ಆರೋಪಿಗಳಿಗೆ ಸರಿಯಾಗಿ ನಡೆಯಲು ಸಹ ಆಗುತ್ತಿರಲಿಲ್ಲ. ಎಲ್ಲಾ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಮುಜಫರ್‌ನಗರ ಸಿಒ ಸಿಟಿ ರಾಜು ಶಾ ತಿಳಿಸಿದ್ದಾರೆ.