ಕೇಂದ್ರ ಸಚಿವ ಸಂಪುಟ  
ದೇಶ

ರಾಷ್ಟ್ರಪತಿ ಭೇಟಿ ಮಾಡಿದ ಪ್ರಧಾನಿ: ಮೇ-ಜೂನ್ ನಲ್ಲಿ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ರಚನೆ ಸಾಧ್ಯತೆ

ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ಮಾಡಿ ಬಂದ ನಂತರ ಈ ಊಹಾಪೋಹಗಳು ಉಂಟಾಗಿದೆ.

ನವದೆಹಲಿ: ಮೇ ಅಥವಾ ಜೂನ್ ತಿಂಗಳಲ್ಲಿ ಕೇಂದ್ರ ಸಚಿವ ಸಂಪುಟ ಪುನರ್ರಚನೆ ಅಥವಾ ವಿಸ್ತರಣೆ ಸದ್ದಿಲ್ಲದೆ ನಡೆಯಲಿದೆಯೇ ಅಥವಾ ಬೇರೆ ಬೆಳವಣಿಗೆ ಏನಾದರೂ ಕೇಂದ್ರ ಸರ್ಕಾರದ ಮೋದಿ ಸಂಪುಟದಲ್ಲಿ ನಡೆಯುತ್ತಿದೆಯೇ?

ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ಮಾಡಿ ಬಂದ ನಂತರ ಈ ಊಹಾಪೋಹಗಳು ಉಂಟಾಗಿದೆ. ಈ ಭೇಟಿಗೆ ಅಧಿಕೃತವಾಗಿ ಯಾವುದೇ ನಿರ್ದಿಷ್ಟ ಬೆಳವಣಿಗೆಯ ಸಂಬಂಧವಿಲ್ಲದಿದ್ದರೂ, ಅದಕ್ಕೂ ಮೊದಲು ನಿನ್ನೆ ಸಂಜೆ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ನಿವಾಸದಲ್ಲಿ ಬಿಜೆಪಿ ನಾಯಕರ ಉನ್ನತ ಮಟ್ಟದ ಸಭೆ ನಡೆಯಿತು.

ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಇತರ ಹಿರಿಯ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದರು.

ಬಿಜೆಪಿಯ ಪ್ರಮುಖ ನಾಯಕರ ಈ ಸಭೆಯು ಪಕ್ಷದೊಳಗೆ ಗಮನಾರ್ಹ ಆಂತರಿಕ ಬೆಳವಣಿಗೆಗಳ ಬಗ್ಗೆ, ಸಂಪುಟ ಪುನರ್ರಚನೆ ಅಥವಾ ಇನ್ನೂ ಹೆಚ್ಚಿನ ಪರಿಣಾಮ ಬೀರುವ ಏನಾದರೂ, ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿನ ಹಿಂಸಾಚಾರ ಮತ್ತು ವಕ್ಫ್ ಕಾನೂನಿಗೆ ಸಂಬಂಧಿಸಿದ ಸವಾಲುಗಳಿಗೆ ಸಂಬಂಧಿಸಿದ ವದಂತಿಗಳಿಗೆ ಉತ್ತೇಜನ ನೀಡಿದೆ.

ಈ ಕುತೂಹಲಕ್ಕೆ ಮತ್ತಷ್ಟು ಕಾರಣವಾಗಿ, ಕೇಂದ್ರ ಸರ್ಕಾರ ನಿನ್ನೆ ಈ ವಾರ ಯಾವುದೇ ಸಚಿವ ಸಂಪುಟ ಸಭೆ ಇರುವುದಿಲ್ಲ ಎಂದು ಘೋಷಿಸಿದೆ. ಇದು ತಮಿಳುನಾಡು ಮತ್ತು ಬಿಹಾರದಂತಹ ಚುನಾವಣೆ ನಡೆಯಲಿರುವ ರಾಜ್ಯಗಳಿಂದ ಹೊಸ ಮುಖಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಮತ್ತಷ್ಟು ಊಹಾಪೋಹಗಳಿಗೆ ಕಾರಣವಾಗಿದೆ.

"ಕುಚ್ ಕಹಾನಾ ಅಭಿ ಮುಸ್ಕಿಲ್ ಹೈ ಕ್ಯಾ ಹೋಗಾ, ಕುಚ್ ಥೋ ಹೋಗಾ ಜರೂರ್ (ಏನಾಗುತ್ತದೆ ಎಂದು ಹೇಳುವುದು ಕಷ್ಟ, ಆದರೆ ಏನಾದರೂ ಆಗುವುದು ಖಚಿತ)" ಎಂದು ಪ್ರತಿಪಕ್ಷಗಳು ಟೀಕಿಸಿವೆ. ಪಕ್ಷದ ನಾಯಕರು ಜೆ ಪಿ ನಡ್ಡಾ ಅವರ ನಿವಾಸದಲ್ಲಿ ತುರ್ತು ವಿಷಯಗಳ ಕುರಿತು ಚರ್ಚಿಸಲು ಸಭೆ ಸೇರಿರುವುದು ಸಾಮಾನ್ಯ ವಿಷಯವಲ್ಲ ಎಂದಿದ್ದಾರೆ.

ಕೆಲವು ಹಾಲಿ ಸಚಿವರನ್ನು ಅವರ ವಯಸ್ಸು ಅಥವಾ ಕಾರ್ಯಕ್ಷಮತೆಯಿಂದಾಗಿ ಅಥವಾ ಸಂಘಟನಾ ಕೆಲಸದಲ್ಲಿ ಅವರ ಅನುಭವವನ್ನು ಬಳಸಿಕೊಳ್ಳಲು, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಹೊಸ ಮುಖಗಳಿಗೆ ಸಚಿವ ಜವಾಬ್ದಾರಿಗಳನ್ನು ನೀಡುವ ಕಾರಣದಿಂದಾಗಿ ಕೈಬಿಡಬಹುದು ಎಂಬ ಮಾತುಗಳು ಕೇಳಿಬರುತ್ತಿದೆ. ಏಪ್ರಿಲ್ 19 ಅಥವಾ ಇನ್ನೊಂದು ವಾರದೊಳಗೆ ಏನಾದರೂ ಮಹತ್ವದ ಬೆಳವಣಿಗೆ ನಡೆಯಬಹುದು ಎಂದು ಹಿರಿಯ ಕಾರ್ಯಕರ್ತರೊಬ್ಬರು ಹೇಳುತ್ತಾರೆ.

ಮತ್ತೊಂದು ಮೂಲದ ಪ್ರಕಾರ, ತಮಿಳು ನಾಡಿನಲ್ಲಿ ಪಕ್ಷದ ಮಾಜಿ ಮುಖ್ಯಸ್ಥ ಕೆ. ಅಣ್ಣಾಮಲೈ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದನ್ನು ನಾವು ನಿರೀಕ್ಷಿಸುತ್ತಿದ್ದೇವೆ ಏಕೆಂದರೆ ಅವರು ಐಟಿ ಮತ್ತು ಇತರ ಯಾವುದೇ ಸಚಿವಾಲಯದ ನೇತೃತ್ವ ವಹಿಸಲು ಅತ್ಯಂತ ಅರ್ಹರಾಗಿದ್ದಾರೆ. ತಮಿಳುನಾಡಿನಲ್ಲಿ ಅವರ ಉತ್ತಮ ಸಾಂಸ್ಥಿಕ ಮತ್ತು ಚುನಾವಣಾ ತಂತ್ರಗಳ ಆಧಾರದ ಮೇಲೆ ಅವರು ಪಕ್ಷದ ಮುಖ್ಯಸ್ಥರ ಸಂಭಾವ್ಯ ಮುಖಗಳಲ್ಲಿ ಒಬ್ಬರಾಗಿರಬಹುದು, ಇದು ಪಕ್ಷವು ತನ್ನ ಸ್ಥಾನವನ್ನು ಬಲಪಡಿಸಲು ಸಹಾಯ ಮಾಡಿತು ಎನ್ನುತ್ತಾರೆ.

ನಿನ್ನೆಯ ಸಭೆಯು, ಬಿಜೆಪಿಯ ರಾಜಕೀಯ ಕಾರಿಡಾರ್‌ಗಳಲ್ಲಿ ನಿರೀಕ್ಷೆಯು ಹೆಚ್ಚಾಗಿ ಸಂಭಾವ್ಯ ಸಚಿವ ಸಂಪುಟ ಪುನರ್ರಚನೆಯ ಸುತ್ತ ಕೇಂದ್ರೀಕೃತವಾಗಿತ್ತು. ಕೇಂದ್ರದಲ್ಲಿ ಎನ್ ಡಿಎ 3 ಸರ್ಕಾರ ಅಧಿಕಾರ ವಹಿಸಿಕೊಂಡು ಒಂದು ವರ್ಷವಾಗುತ್ತಿದ್ದಂತೆ ಜೂನ್ ಅಥವಾ ಜುಲೈನಲ್ಲಿ ಪುನರ್ರಚನೆಯನ್ನು ನಿರೀಕ್ಷಿಸಲಾಗುತ್ತಿದೆ ಎಂದಿದ್ದಾರೆ.

ವಿರೋಧ ಪಕ್ಷಗಳು ಮತ್ತು ವಿವಿಧ ಸಂಘಟನೆಗಳು ಸುಪ್ರೀಂ ಕೋರ್ಟ್‌ನಲ್ಲಿ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಅರ್ಜಿ ಸಲ್ಲಿಸಿದ್ದು, ಹೊಸ ಸವಾಲುಗಳನ್ನು ಪಕ್ಷವು ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಕೆಲವು ಪಕ್ಷದ ನಾಯಕರು ಒಪ್ಪಿಕೊಳ್ಳುತ್ತಾರೆ. ಈ ಸಭೆಯು ಇತರ ವಿಷಯಗಳಿಗಿಂತ ಹೆಚ್ಚಾಗಿ ಯುಸಿಸಿ, ವಕ್ಫ್ ಕಾನೂನು, ಪಕ್ಷದ ಅಧ್ಯಕ್ಷರ ಚುನಾವಣೆ ಮತ್ತು ಪುನರ್ರಚನೆ ಕುರಿತು ಚರ್ಚೆಗಾಗಿ ಆಗಿರಬಹುದು ಎಂದು ಹಿರಿಯ ಕಾರ್ಯಕರ್ತರೊಬ್ಬರು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

SCROLL FOR NEXT