ನರೇಂದ್ರ ವಿಕ್ರಮಾದಿತ್ಯ ಯಾದವ್ 
ದೇಶ

ಛತ್ತೀಸ್‌ಗಢ ಮಾಜಿ ಸ್ಪೀಕರ್ ಶುಕ್ಲಾ ಸಾವು ಪ್ರಕರಣ: 'ನಕಲಿ' ಹೃದ್ರೋಗ ತಜ್ಞನ ವಿರುದ್ಧ ಕೇಸ್ ದಾಖಲು

'ನಕಲಿ' ವೈದ್ಯ ಡಾ. ನರೇಂದ್ರ ವಿಕ್ರಮಾದಿತ್ಯ ಯಾದವ್ ಹಾಗೂ ಬಿಲಾಸ್‌ಪುರದ ಅಪೋಲೋ ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ರಾಯ್‌ಪುರ: 2006 ರಲ್ಲಿ ಛತ್ತೀಸ್‌ಗಢ ವಿಧಾನಸಭಾ ಸ್ಪೀಕರ್ ರಾಜೇಂದ್ರ ಪ್ರಸಾದ್ ಶುಕ್ಲಾ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢ ಪೊಲೀಸರು 'ನಕಲಿ' ವೈದ್ಯ ಡಾ. ಎನ್. ಜಾನ್ ಕ್ಯಾಮ್ ಅಲಿಯಾಸ್ ಡಾ. ನರೇಂದ್ರ ವಿಕ್ರಮಾದಿತ್ಯ ಯಾದವ್ ಹಾಗೂ ಬಿಲಾಸ್‌ಪುರದ ಅಪೋಲೋ ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಮಾಜಿ ಸ್ಪೀಕರ್ ಅವರ ಪುತ್ರ ಪ್ರದೀಪ್ ಶುಕ್ಲಾ ಅವರು ಕಳೆದ ಏಪ್ರಿಲ್ 8 ರಂದು ಬಿಲಾಸ್‌ಪುರದಲ್ಲಿ ಪೊಲೀಸರಿಗೆ ದೂರು ನೀಡಿದ್ದು, ತಮ್ಮ ತಂದೆಯ ಸಾವಿಗೆ ಕಾರಣರಾದವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.

ಬಿಲಾಸ್‌ಪುರದ ಸರ್ಕಂಡ ಪೊಲೀಸ್ ಠಾಣೆಯಲ್ಲಿ ಡಾ. ನರೇಂದ್ರ ಯಾದವ್ ಮತ್ತು ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ(ಐಪಿಸಿ) ಸೆಕ್ಷನ್ 420, 465, 466, 468, 471, 304 ಮತ್ತು 34 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಧ್ಯ ಪ್ರದೇಶದ ದಾಮೋಹ್‌ನಲ್ಲಿರುವ ಮಿಷನ್ ಆಸ್ಪತ್ರೆಯಲ್ಲಿ ರೋಗಿಗಳ ಸಾವಿನ ಬಗ್ಗೆಯೂ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ, ಅಲ್ಲಿ ಸಹ ಇದೇ ನಕಲಿ ಹೃದ್ರೋಗ ತಜ್ಞ ಚಿಕಿತ್ಸೆ ನೀಡಿದ್ದಾರೆ ಎಂದು ಹೇಳಲಾಗಿದೆ.

"ಡಾ. ಯಾದವ್ ಅವರು ಹೃದಯ ಶಸ್ತ್ರಚಿಕಿತ್ಸೆ ಮಾಡಿದ ನಂತರ ಮಾಜಿ ಸ್ಪೀಕರ್ ಅವರನ್ನು 18 ದಿನಗಳ ಕಾಲ ಆಸ್ಪತ್ರೆಯ ಐಸಿಯುನಲ್ಲಿ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಪ್ರದೀಪ್ ಶುಕ್ಲಾ ಅವರಿಂದ ದೂರು ಬಂದ ನಂತರ ನಾವು ವಿಚಾರಣೆ ನಡೆಸಿದಾಗ ಡಾ. ನರೇಂದ್ರ ಅವರ ಪ್ರಮಾಣಪತ್ರಗಳು ನಕಲಿ ಎಂದು ಕಂಡುಬಂದಿದೆ" ಎಂದು ಸಿಎಸ್‌ಪಿ(ಸರ್ಕಂಡ) ಸಿದ್ಧಾರ್ಥ್ ಬಾಘೇಲ್ ತಿಳಿಸಿದ್ದಾರೆ.

"ಯಾದವ್ ಅವರು ಭಾರತೀಯ ವೈದ್ಯಕೀಯ ಮಂಡಳಿಯಲ್ಲಿ ಅಥವಾ ಛತ್ತೀಸ್‌ಗಢ ವೈದ್ಯಕೀಯ ಮಂಡಳಿಯಲ್ಲಿ ನೋಂದಾಯಿಸಿಕೊಂಡಿಲ್ಲ. ಆದರೂ ಇನ್ನೂ ಹೃದ್ರೋಗ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾವು ಅವರ ಮತ್ತು ಅಪೋಲೋ ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧ ಐಪಿಸಿಯ ವಿವಿಧ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ ಮತ್ತು ಮುಂದಿನ ಕ್ರಮಕ್ಕಾಗಿ ಶೀಘ್ರದಲ್ಲೇ ನಮ್ಮ ತಂಡವನ್ನು ಕಳುಹಿಸುತ್ತೇವೆ" ಎಂದು ಬಾಘೇಲ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ