ಯಶ್- ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಭೇಟಿ  online desk
ದೇಶ

ರಾಕಿಂಗ್ ಸ್ಟಾರ್ Yash- ಮಧ್ಯ ಪ್ರದೇಶ CM ಮೋಹನ್ ಯಾದವ್ ಭೇಟಿ; ಕುತೂಹಲ!

ಈ ಬೆನ್ನಲ್ಲೇ ಭೋಪಾಲ್ ನಲ್ಲಿ ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಅವರನ್ನು ಯಶ್ ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.

ಭೋಪಾಲ್: ರಾಕಿಂಗ್ ಸ್ಟಾರ್ ಯಶ್ ಮಧ್ಯಪ್ರದೇಶ ಪ್ರವಾಸ ಕೈಗೊಂಡಿದ್ದು, ಉಜ್ಜೈನ್ ನಲ್ಲಿನ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಈ ಬೆನ್ನಲ್ಲೇ ಭೋಪಾಲ್ ನಲ್ಲಿ ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಅವರನ್ನು ಯಶ್ ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.

Yash ರಾವಣನಾಗಿ ನಟಿಸುತ್ತಿರುವ ‘ರಾಮಾಯಣ’ ಸಿನಿಮಾ ಶೂಟ್ ಮುಂಬೈನಲ್ಲಿ ನಡೆಯಲಿದೆ. ಅದಕ್ಕೂ ಮೊದಲು ಅವರು ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವಾಲಯಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಸಿಎಂ ಮೋಹನ್ ಯಾದವ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.

‘ಕೆಜಿಎಫ್ 2’ ಬಳಿಕ ದೇಶಾದ್ಯಂತ ಜನಪ್ರಿಯಗೊಂಡಿರುವ ಯಶ್, ತಮ್ಮ ರಾಜ್ಯಕ್ಕೆ ಬರುತ್ತಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಮಧ್ಯ ಪ್ರದೇಶ ಸಿಎಂ ಮೋಹನ್ ಯಾದವ್ ಭೇಟಿಗೆ ಅವಕಾಶ ಕಲ್ಪಿಸಿದ್ದಾರೆ. ಆ ಬಳಿಕ ಸೌಹಾರ್ದಯುತ ಭೇಟಿ ನಡೆದಿದೆ. ಅಭಿಮಾನಿಗಳ ವಲಯದಲ್ಲಿ ಈ ಫೋಟೋ ವೈರಲ್ ಆಗಿ ಗಮನ ಸೆಳೆದಿದೆ.

ಯಶ್ ‘ಟಾಕ್ಸಿಕ್’ ಚಿತ್ರದ ಒಂದಷ್ಟು ಪೋರ್ಷನ್​ನ ಶೂಟ್ ಪೂರ್ಣಗೊಳಿಸಿದ್ದಾರೆ. ಈಗ ಅವರ ಗಮನ ‘ರಾಮಾಯಣ’ ಚಿತ್ರದ ಮೇಲೆ ಇದೆ. ಇತ್ತೀಚೆಗೆ ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ‘ಕೆಜಿಎಫ್ 3’ ಕೆಲಸಗಳು ಶೀಘ್ರವೇ ಆರಂಭ ಆಗಲಿದೆ ಎನ್ನುವ ಸೂಚನೆ ಕೊಟ್ಟಿದ್ದಾರೆ. ಈ ಸಿನಿಮಾ ಕೆಲಸಗಳು ಪೂರ್ಣಗೊಂಡ ಬಳಿಕ ಯಶ್ ಅವರು ‘ಕೆಜಿಎಫ್ 3’ ಕೆಲಸಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia conflict: ಇರಾಕ್‌ನಲ್ಲಿ ಅಮೆರಿಕಾದ KC-135 ಸೇನಾ ವಿಮಾನ ಪತನ; ರಕ್ಷಣಾ ಕಾರ್ಯಾಚರಣೆ ಆರಂಭ

ಕಲಬುರಗಿಯಲ್ಲಿ ಪತ್ತೆಯಾದ ಪ್ರಾಚೀನ ಬೌದ್ಧ ಮಠದ ವಿಸ್ತೃತ ಉತ್ಖನನ ಕೈಗೊಳ್ಳಿ: ಕೇಂದ್ರಕ್ಕೆ ಖರ್ಗೆ ಒತ್ತಾಯ

ಆಪರೇಷನ್‌ ಕಮಲದ ಆತಂಕ: ಅಸ್ಸಾಂ ಕಾಂಗ್ರೆಸ್‌ ಶಾಸಕರು ಬಿಡದಿ ರೆಸಾರ್ಟ್‌ಗೆ ಶಿಫ್ಟ್‌; ಅಖಾಡಕ್ಕಿಳಿದ ಡಿಕೆ ಶಿವಕುಮಾರ್

ರಾಜ್ಯದ 470 ಹಳ್ಳಿಗಳಿಗೆ ಮೊಬೈಲ್ ನೆಟ್​ವರ್ಕೇ ಇಲ್ಲ..!

ಮೋದಿ ನಿಜವಾದ ಮುತ್ಸದ್ದಿ: ದೂರದೃಷ್ಟಿ ಹೊಂದಿರುವ ಅದ್ಭುತ ನಾಯಕ; ನಟ ಮೋಹನ್‌ ಲಾಲ್ ಶ್ಲಾಘನೆ

SCROLL FOR NEXT