ನವದಂಪತಿಗಳಿಗೆ Blue Drum ಗಿಫ್ಟ್ 
ದೇಶ

ನವದಂಪತಿಗಳಿಗೆ Blue Drum ಗಿಫ್ಟ್: ಬೇಸ್ತು ಬಿದ್ದ ವರ, ಬಿದ್ದು ಬಿದ್ದು ನಕ್ಕ ಸಂಬಂಧಿಕರು! Video Viral

ಸಂಬಂಧಿಕರ ಈ ವಿಶೇಷ ಉಡುಗೊರೆ ನೋಡಿದ ವರ ಬೇಸ್ತು ಬಿದ್ದರೆ ಪಕ್ಕದಲ್ಲೇ ಇದ್ದ ವಧು ಮತ್ತು ಸಮಾರಂಭದಲ್ಲಿ ಹಾಜರಿದ್ದ ಸಂಬಂಧಿಕರು ಬಿದ್ದು ಬಿದ್ದು ನಕ್ಕಿದ್ದಾರೆ.

ಲಖನೌ: ಮೀರತ್ ನ ಸೌರವ್ ರಜಪೂತ್ ಕೊಲೆ ಪ್ರಕರಣ ಹಸಿರಾಗಿರುವಂತೆಯೇ ಇತ್ತ ಉತ್ತರ ಪ್ರದೇಶದಲ್ಲಿ ನವದಂಪತಿಗಳಿಗೆ Blue Drum ಗಿಫ್ಟ್ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ವರನ ಕಡೆಯ ಅತಿಥಿಗಳ ಗುಂಪೊಂದು ನವದಂಪತಿಗಳಿ ದೊಡ್ಡ ನೀಲಿ ಪ್ಲಾಸ್ಟಿಕ್ ಡ್ರಮ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ಸಂಬಂಧಿಕರ ಈ ವಿಶೇಷ ಉಡುಗೊರೆ ನೋಡಿದ ವರ ಬೇಸ್ತು ಬಿದ್ದರೆ ಪಕ್ಕದಲ್ಲೇ ಇದ್ದ ವಧು ಮತ್ತು ಸಮಾರಂಭದಲ್ಲಿ ಹಾಜರಿದ್ದ ಸಂಬಂಧಿಕರು ಬಿದ್ದು ಬಿದ್ದು ನಕ್ಕಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ನೀಲಿ ಡ್ರಮ್ ಏಕೆ?

ಈ ನೀಲಿ ಡ್ರಮ್ ಉತ್ತರ ಪ್ರದೇಶ ಮಾತ್ರವಲ್ಲ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೀಡಾದ ಅಪರಾಧ ಪ್ರಕರಣದ ಕೇಂದ್ರಬಿಂದುವೇ ಈ ನೀಲಿ ಬಣ್ಣದ ಡ್ರಮ್. ಇದೇ ಉತ್ತರ ಪ್ರದೇಶದ ಮೀರತ್ ನಲ್ಲಿ ಮಹಿಳೆಯೊಬ್ಬರು ತನ್ನ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕ್ರೂರವಾಗಿ ಕೊಂದು ಬಳಿಕ ಆತನ ದೇಹವನ್ನು ತುಂಡುಗಳಾಗಿ ಕತ್ತರಿಸಿ ಇದೇ ರೀತಿಯ ನೀಲಿ ಡ್ರಮ್‌ನಲ್ಲಿ ಹಾಕಿ ಅದಕ್ಕೆ ಸಿಮೆಂಟ್ ಹಾಕಿ ಮುಚ್ಚಿ ಹಾಕಿದ್ದಳು.

ಇದೀಗ ಇದೇ ರೀತಿಯ ಡ್ರಮ್ ಅನ್ನು ವರನ ಸ್ನೇಹಿತರು ಗಿಫ್ಟ್ ನೀಡಿರುವುದು ಮದುವೆ ಗಂಡಿನ ಮುಜುಗರಕ್ಕೆ ಕಾರಣವಾಗಿದೆ. ವೇದಿಕೆ ಮೇಲಿದ್ದ ವರ ಇದನ್ನು ನೋಡಿ ಆಘಾತಕ್ಕೊಳಗಾದರೆ, ಪಕ್ಕದಲ್ಲೇ ಇದ್ದ ಆತನ ಪತ್ನಿ ನಕ್ಕಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಆದರೆ ವರನ ಕಡೆಯವರ ಈ ನಡೆ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದ್ದು, "ಇದಕ್ಕಿಂತ ಕೆಟ್ಟ ಜೋಕ್ ಏನಿರಬಹುದು! ಮದುವೆಯಂತಹ ಸಂತೋಷದ ಸಂದರ್ಭದಲ್ಲಿ ಘೋರ ತಮಾಷೆಯಾಗಿ ನೆನಪಿಸಿಕೊಳ್ಳುವುದು ಸಂಪೂರ್ಣವಾಗಿ ಸೂಕ್ತವಲ್ಲ" ಎಂದು ಕೆಲವರು ಕಿಡಿಕಾರುತ್ತಿದ್ದಾರೆ. "ಜಗತ್ತು ಮಾನಸಿಕ ಅಸ್ವಸ್ಥವಾಗಿದೆ, ಜನರು ಪ್ರತಿ ಬೀದಿಯಲ್ಲಿ ಗೇಲಿ ಮಾಡುತ್ತಿದ್ದಾರೆ, ಆದರೆ ಅದು ತನಗೇ ಸಂಭವಿಸಿದಾಗ, ಅವರಿಗೆ ಇತರರ ನೋವು ಅರ್ಥವಾಗುತ್ತದೆ ಎಂದು ಮತ್ತೋರ್ವ ಬಳಕೆದಾರರು ಕಮೆಂಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

SCROLL FOR NEXT