ಜೆಡಿ ವ್ಯಾನ್ಸ್  online desk
ದೇಶ

ನಿಮ್ಮ ಅತಿ ದೊಡ್ಡ ಮಾರುಕಟ್ಟೆಗೆ ನಮಗೆ ಪ್ರವೇಶ ಕೊಡಿ: ಜೈಪುರದಲ್ಲಿ ಉದ್ಯಮಿಗಳನ್ನುದ್ದೇಶಿಸಿ ಅಮೆರಿಕ ಉಪಾಧ್ಯಕ್ಷ JD Vance

"21 ನೇ ಶತಮಾನದ ಭವಿಷ್ಯ ಭಾರತ ಮತ್ತು ಅಮೆರಿಕದ ಬಲದಿಂದ ನಿರ್ಧರಿಸಲ್ಪಡುತ್ತದೆ" ಎಂದು ಅವರು ಹೇಳಿದರು.

ಜೈಪುರ: ಭಾರತ ತನ್ನ ಮಾರುಕಟ್ಟೆಗಳಿಗೆ ಅಮೆರಿಕಾಗೆ ಹೆಚ್ಚಿನ ಪ್ರವೇಶವನ್ನು ನೀಡುವಂತೆ, ಹೆಚ್ಚಿನ ಅಮೇರಿಕನ್ ಇಂಧನ ಮತ್ತು ರಕ್ಷಣಾ ಯಂತ್ರಾಂಶಗಳನ್ನು ಖರೀದಿಸುವಂತೆ ಅಮೆರಿಕ ಉಪಾಧ್ಯಕ್ಷ JD Vance ಕರೆ ನೀಡಿದ್ದಾರೆ. ಉಭಯ ದೇಶಗಳ ನಡುವಿನ ಬಲವಾದ ಸಂಬಂಧಗಳ ದೃಷ್ಟಿಕೋನವನ್ನು ಅವರು ಇದೇ ವೇಳೆ ವಿವರಿಸಿದರು.

ಜೈಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಉದ್ಯಮಿಗಳನ್ನುದ್ದೇಶಿಸಿ ಮಾತನಾಡಿದ ವ್ಯಾನ್ಸ್, ಉನ್ನತ ತಂತ್ರಜ್ಞಾನ, ರಕ್ಷಣೆ, ವ್ಯಾಪಾರ ಮತ್ತು ಇಂಧನ ಸೇರಿದಂತೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ಅಮೆರಿಕ ಮತ್ತು ಭಾರತ ಒಟ್ಟಾಗಿ ಸಾಧಿಸಬಹುದಾದದ್ದು ಬಹಳಷ್ಟಿದೆ ಎಂದು ಹೇಳಿದ್ದಾರೆ. ಭಾರತ ಮತ್ತು ಅಮೆರಿಕ ಎರಡೂ ಪಾಲುದಾರಿಕೆಯ ಆದ್ಯತೆಗಳ ಆಧಾರದ ಮೇಲೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದೆಡೆಗೆ ಕೆಲಸ ಮಾಡುತ್ತಿವೆ ಎಂದು ಅವರು ಹೇಳಿದ್ದಾರೆ.

"21 ನೇ ಶತಮಾನದ ಭವಿಷ್ಯ ಭಾರತ ಮತ್ತು ಅಮೆರಿಕದ ಬಲದಿಂದ ನಿರ್ಧರಿಸಲ್ಪಡುತ್ತದೆ" ಎಂದು ಅವರು ಹೇಳಿದರು. "ವ್ಯಾಪಾರ ಸಂಬಂಧಗಳು ನ್ಯಾಯಯುತತೆಯನ್ನು ಆಧರಿಸಿರಬೇಕು" ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ಮತ್ತು ಸುಂಕದ ನೀತಿಯನ್ನು ಉಲ್ಲೇಖಿಸಿ ವ್ಯಾನ್ಸ್ ಹೇಳಿದ್ದಾರೆ.

"ನಾವು ಉಜ್ವಲ ಹೊಸ ಜಗತ್ತನ್ನು ರಚಿಸಲು ಬಯಸುತ್ತೇವೆ, ಅಮೆರಿಕ ಮತ್ತು ಭಾರತ ಒಟ್ಟಾಗಿ ಸಾಧಿಸಬಹುದಾದದ್ದು ಬಹಳಷ್ಟಿದೆ ಎಂದು ನಾನು ನಂಬುತ್ತೇನೆ. ಮತ್ತು ಆ ನಿಟ್ಟಿನಲ್ಲಿ, ಇಂದು ನಾನು ಸಹಯೋಗದ ಕೆಲವು ಕ್ಷೇತ್ರಗಳ ಬಗ್ಗೆ ಮಾತನಾಡಲು ಬಯಸುತ್ತೇನೆ ಎಂದು ಹೇಳಿದ್ದು, ಭಾರತ ಮತ್ತು ಅಮೆರಿಕ ಹೇಗೆ ಒಟ್ಟಾಗಿ ಕೆಲಸ ಮಾಡಬಹುದು ಎಂಬುದನ್ನು ವಿವರಿಸಿದ್ದು, ಭೂಮಿಯ ಮೇಲಿನ ಯಾವುದೇ ರಾಷ್ಟ್ರದೊಂದಿಗೆ ನಾವು ಮಾಡುವುದಕ್ಕಿಂತ ಅಮೆರಿಕ ಭಾರತದೊಂದಿಗೆ ಹೆಚ್ಚಿನ ಮಿಲಿಟರಿ ವ್ಯಾಯಾಮಗಳನ್ನು ಮಾಡುತ್ತದೆ. ಎರಡನೆಯದಾಗಿ, ಉತ್ತಮ ವಿಷಯಗಳನ್ನು ನಿರ್ಮಿಸಲು ಮತ್ತು ಅಂತಿಮವಾಗಿ, ಮುಂಬರುವ ವರ್ಷಗಳಲ್ಲಿ ನಮ್ಮ ಎರಡೂ ದೇಶಗಳಿಗೆ ಅಗತ್ಯವಿರುವ ಅತ್ಯಾಧುನಿಕ ನಾವೀನ್ಯ ತಂತ್ರಜ್ಞಾನಗಳನ್ನು ರಚಿಸಲು ಅಮೇರಿಕ- ಭಾರತ ಒಟ್ಟಾಗಿ ಕೆಲಸ ಮಾಡಲಿವೆ ಎಂದು ಹೇಳಿದ್ದಾರೆ.

"ಈ ವರ್ಷ ಭಾರತ ಕ್ವಾಡ್ ನಾಯಕರ ಶೃಂಗಸಭೆಯನ್ನು ಆಯೋಜಿಸುತ್ತಿರುವುದು ಸೂಕ್ತವಾಗಿದೆ. ಮುಕ್ತ, ಶಾಂತಿಯುತ ಮತ್ತು ಸಮೃದ್ಧ ಇಂಡೋ ಪೆಸಿಫಿಕ್‌ನಲ್ಲಿ ನಮ್ಮ ಆಸಕ್ತಿಗಳು ಸಂಪೂರ್ಣ ಹೊಂದಾಣಿಕೆಯಲ್ಲಿವೆ" ಎಂದು ಜೆಡಿ ವ್ಯಾನ್ಸ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

ಕಾರುಗಳ ಬೆಲೆಯಲ್ಲಿ ಆಗಲಿದೆ ಭಾರಿ ಇಳಿಕೆ: GST ಪರಿಷ್ಕರಣೆಗಾಗಿ ಕಾದು ಕುಳಿತ ಗ್ರಾಹಕರು!

IADWS: ಭಾರತೀಯ ಸೇನೆ ಬತ್ತಳಿಕೆಗೆ 'ಲೇಸರ್ ನಿರ್ದೇಶಿತ ಹೊಸ ಅಸ್ತ್ರ': ದಂಗಾದ ಚೀನಾ, ಹೇಳಿದ್ದು ಏನು?

ಗೌರಿ-ಗಣೇಶ ಹಬ್ಬ: ಪರಿಸರ ಕಾಳಜಿ ಮರೆಯದಿರೋಣ, ಜನತೆಗೆ ಸಿಎಂ ಸಿದ್ದರಾಮಯ್ಯ ಕರೆ! Video

SCROLL FOR NEXT