ಈ ಫೋಟೋದಲ್ಲಿ, ಲಡಾಖ್‌ನ ಹಿಮದಿಂದ ಆವೃತವಾದ ಪ್ರದೇಶದ ನಡುವೆ ಸಿಂಧೂ ನದಿಯ ವೈಮಾನಿಕ ನೋಟ. 
ದೇಶ

ಸಿಂಧೂ ನದಿ ಜಲ ಒಪ್ಪಂದ ರದ್ದು: ಏನಿದರ ಅರ್ಥ, ಇದರಿಂದ ಏನಾಗುತ್ತದೆ?

ಎರಡೂ ದೇಶಗಳಿಗೆ ಪ್ರಮುಖವಾದ ಸಿಂಧೂ ನದಿ ವ್ಯವಸ್ಥೆಯು ಸಿಂಧೂ ನದಿ ಮತ್ತು ಅದರ ಐದು ಎಡದಂಡೆಯ ಉಪನದಿಗಳಾದ ರಾವಿ, ಬಿಯಾಸ್, ಸಟ್ಲೆಜ್, ಝೀಲಂ ಮತ್ತು ಚೆನಾಬ್ ನ್ನು ಒಳಗೊಂಡಿದೆ.

ಪಾಕಿಸ್ತಾನದೊಂದಿಗಿನ 1960 ರ ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ, ಇದಕ್ಕೆ ಕಾರಣ ಪಾಕಿಸ್ತಾನ ಗಡಿಯಾಚೆಗಿನ ಭಯೋತ್ಪಾದನೆಗೆ ನಿರಂತರ ಬೆಂಬಲ ನೀಡುತ್ತಿದೆ ಎಂದು ಭಾರತ ಉಲ್ಲೇಖಿಸಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದಾರೆ. ಅವರಲ್ಲಿ ಹೆಚ್ಚಿನವರು ಪ್ರವಾಸಿಗರು. ಪಾಕಿಸ್ತಾನದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕೆಳಮಟ್ಟಕ್ಕೆ ಇಳಿಸುವುದು ಸೇರಿದಂತೆ ಪ್ರತೀಕಾರದ ಕ್ರಮಗಳ ಭಾಗವಾಗಿ ಸಿಂಧೂ ಜಲ ಒಪ್ಪಂದ ರದ್ದು ಮುಖ್ಯವಾಗಿದೆ.

ಈ ಕ್ರಮದ ಪರಿಣಾಮ ಏನಾಗಬಹುದು?

ಎರಡೂ ದೇಶಗಳಿಗೆ ಪ್ರಮುಖವಾದ ಸಿಂಧೂ ನದಿ ವ್ಯವಸ್ಥೆಯು ಸಿಂಧೂ ನದಿ ಮತ್ತು ಅದರ ಐದು ಎಡದಂಡೆಯ ಉಪನದಿಗಳಾದ ರಾವಿ, ಬಿಯಾಸ್, ಸಟ್ಲೆಜ್, ಝೀಲಂ ಮತ್ತು ಚೆನಾಬ್ ನ್ನು ಒಳಗೊಂಡಿದೆ. ಕಳೆದ ವರ್ಷ, ಭಾರತವು ಪಾಕಿಸ್ತಾನಕ್ಕೆ ಔಪಚಾರಿಕ ನೋಟಿಸ್ ಕಳುಹಿಸಿತು, ಇದು ಆರು ದಶಕಗಳಿಗೂ ಹೆಚ್ಚು ಕಾಲ ಈ ನೀರಿನ ಹಂಚಿಕೆ ಮತ್ತು ನಿರ್ವಹಣೆಯನ್ನು ನಿಯಂತ್ರಿಸುವ ಒಪ್ಪಂದದ ಪರಿಶೀಲನೆ ಮತ್ತು ಮಾರ್ಪಾಡಿಗೆ ಭಾರತ ಕೋರಿತ್ತು.

ಆರು ವರ್ಷಗಳಿಗೂ ಹೆಚ್ಚು ಕಾಲ ಭಾರತದ ಸಿಂಧೂ ಜಲ ಆಯುಕ್ತರಾಗಿ ಸೇವೆ ಸಲ್ಲಿಸಿರುವ ಮತ್ತು ಐಡಬ್ಲ್ಯೂಟಿಗೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಪ್ರದೀಪ್ ಕುಮಾರ್ ಸಕ್ಸೇನಾ, ನದಿ ತೀರದ ಮೇಲ್ಭಾಗದ ದೇಶವಾಗಿ ಭಾರತಕ್ಕೆ ಬಹು ಆಯ್ಕೆಗಳಿವೆ ಎಂದು ಹೇಳುತ್ತಾರೆ. ಸರ್ಕಾರ ನಿರ್ಧರಿಸಿದರೆ ಒಪ್ಪಂದವನ್ನು ರದ್ದುಗೊಳಿಸುವತ್ತ ಇದು ಮೊದಲ ಹೆಜ್ಜೆಯಾಗಬಹುದು ಎಂದು ಸಕ್ಸೇನಾ ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದೇಶದಲ್ಲಿ ಹೇಳುತ್ತಾರೆ.

ಒಪ್ಪಂದದಲ್ಲಿ ಅದರ ರದ್ದತಿಗೆ ಯಾವುದೇ ಸ್ಪಷ್ಟ ನಿಬಂಧನೆ ಇಲ್ಲದಿದ್ದರೂ, ಒಪ್ಪಂದಗಳ ಕಾನೂನಿನ ಮೇಲಿನ ವಿಯೆನ್ನಾ ಸಮಾವೇಶದ 62ನೇ ವಿಧಿಯು ಒಪ್ಪಂದದ ಮುಕ್ತಾಯದ ಸಮಯದಲ್ಲಿ ಈಗಿರುವ ಸನ್ನಿವೇಶಗಳ ಮೂಲಭೂತ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಒಪ್ಪಂದವನ್ನು ನಿರಾಕರಿಸಲು ಸಾಕಷ್ಟು ಅವಕಾಶವನ್ನು ಒದಗಿಸುತ್ತದೆ ಎನ್ನುತ್ತಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿನ ಪಶ್ಚಿಮ ನದಿಗಳ ಮೇಲಿನ ಕಿಶನ್‌ಗಂಗಾ ಜಲಾಶಯ ಮತ್ತು ಇತರ ಯೋಜನೆಗಳ ಜಲಾಶಯವನ್ನು ಹರಿಯುವ ಮೇಲಿನ ನಿರ್ಬಂಧಗಳನ್ನು ಅನುಸರಿಸಲು ಭಾರತ ಯಾವುದೇ ಬಾಧ್ಯತೆಯಿಲ್ಲ ಎಂದು ಸಕ್ಸೇನಾ ಹೇಳಿದ್ದಾರೆ.

ಹಿಂದೆ ಬಹುತೇಕ ಯೋಜನೆಗೂ ಪಾಕಿಸ್ತಾನ ಆಕ್ಷೇಪಣೆ ವ್ಯಕ್ತಪಡಿಸಿದೆ. ಸಲಾಲ್, ಬಾಗ್ಲಿಹಾರ್, ಉರಿ, ಚುಟಕ್, ನಿಮೂ ಬಾಜ್ಗೊ, ಕಿಶೆಂಗಂಗಾ, ಪಕಲ್ ದುಲ್, ಮಿಯಾರ್, ಲೋವರ್ ಕಲ್ನೈ ಮತ್ತು ರಾಟ್ಲೆ ಗಮನಾರ್ಹವಾಗಿದೆ.

2019 ರಲ್ಲಿ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ, ಸರ್ಕಾರವು ಲಡಾಖ್‌ನಲ್ಲಿ ಇನ್ನೂ ಎಂಟು ಜಲವಿದ್ಯುತ್ ಯೋಜನೆಗಳಿಗೆ ಅನುಮೋದನೆ ನೀಡಿತು. ಹೊಸ ಯೋಜನೆಗಳಿಗೆ ಆಕ್ಷೇಪಣೆಗಳು ಇನ್ನು ಮುಂದೆ ಅನ್ವಯಿಸುವುದಿಲ್ಲ.

ಸಿಂಧೂ ಜಲ ಒಪ್ಪಂದ ರದ್ದುಮಾಡಿದರೆ ಇದು ಪಾಕಿಸ್ತಾನಕ್ಕೆ ಹಾನಿಕಾರಕವೆಂದು ಸಾಬೀತುಪಡಿಸಬಹುದು, ವಿಶೇಷವಾಗಿ ಮಳೆಗಾಲದಲ್ಲಿ ನದಿಗಳು ಉಕ್ಕಿ ಹರಿಯುವಾಗ. ಭಾರತವು ಈಗ ಪಶ್ಚಿಮ ನದಿಗಳಲ್ಲಿ, ವಿಶೇಷವಾಗಿ ಝೀಲಂನಲ್ಲಿ ನೀರಿನ ಸಂಗ್ರಹಣೆಗೆ ಯಾವುದೇ ನಿರ್ಬಂಧವನ್ನು ಹೊಂದಿರುವುದಿಲ್ಲ ಮತ್ತು ಕಣಿವೆಯಲ್ಲಿ ಪ್ರವಾಹವನ್ನು ತಗ್ಗಿಸಲು ಭಾರತವು ಹಲವಾರು ಪ್ರವಾಹ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಸಕ್ಸೇನಾ ಹೇಳಿದರು.

ಸಿಂಧೂ ನದಿ ನೀರು ಒಪ್ಪಂದ ಏನದು?

ಸಿಂಧು ನದಿ ನೀರಿನ ಒಪ್ಪಂದ (Indus Waters Treaty) ಎಂಬುದು 1960ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಆದ ಅಂತಾರಾಷ್ಟ್ರೀಯ ಒಪ್ಪಂದ. ವಿಶ್ವ ಬ್ಯಾಂಕ್‌ನ ಮಧ್ಯಸ್ಥಿಕೆ ಈ ಒಪ್ಪಂದವಾಗಿತ್ತು. ಸಿಂಧು ನದಿ ನೀರನ್ನು ಎರಡೂ ದೇಶಗಳ ನಡುವೆ ಹಂಚಿಕೆ ಮಾಡಿಕೊಳ್ಳುವುದು ಇದರ ಮುಖ್ಯ ಉದ್ದೇಶ. ಈ ಒಪ್ಪಂದವು ಇಂದಿಗೂ ಎರಡೂ ದೇಶಗಳ ನಡುವಿನ ನೀರಿನ ಸಂಬಂಧವನ್ನು ನಿಯಂತ್ರಿಸುತ್ತದೆ ಮತ್ತು ಇದನ್ನು ಯಶಸ್ವಿ ಒಪ್ಪಂದವೆಂದು ಪರಿಗಣಿಸಲಾಗುತ್ತದೆ.

ಸಿಂಧೂ ಜಲ ಒಪ್ಪಂದಕ್ಕೆ ಅಂದಿನ ಭಾರತದ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನಿ ಮಿಲಿಟರಿ ಜನರಲ್ ಅಯೂಬ್ ಖಾನ್ ನಡುವೆ ಸೆಪ್ಟೆಂಬರ್ 19, 1960 ರಲ್ಲಿ ಕರಾಚಿಯಲ್ಲಿ ಸಹಿ ಹಾಕಿದ್ದರು. 62 ವರ್ಷಗಳ ಹಿಂದೆ ಸಹಿ ಹಾಕಲಾದ ಸಿಂಧೂ ಜಲ ಒಪ್ಪಂದದ ಅಡಿಯಲ್ಲಿ, ಭಾರತವು ಸಿಂಧೂ ಮತ್ತು ಅದರ ಉಪ ನದಿಗಳಿಂದ ಶೇಕಡಾ 19.5 ರಷ್ಟು ನೀರು ಪಡೆದರೆ, ಪಾಕಿಸ್ತಾನ ಸುಮಾರು ಶೇಕಡ 80 ರಷ್ಟು ನೀರು ಪಡೆಯುತ್ತದೆ. ಈ ಒಪ್ಪಂದದ ಪ್ರಕಾರ, ಎರಡೂ ದೇಶಗಳ ನಡುವೆ ಪ್ರತಿ ವರ್ಷ ಸಿಂಧೂ ಜಲ ಆಯೋಗದ ಸಭೆ ನಡೆಸುವುದು ಕಡ್ಡಾಯವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT