ಬೈಸರನ್ ವ್ಯಾಲಿ, ಪಹಲ್ಗಾಮ್ 
ದೇಶ

ಪಾಕ್ ಒತ್ತಡದ ನಂತರ TRF ಯೂಟರ್ನ್; ಪಹಲ್ಗಾಮ್ ದಾಳಿಯಲ್ಲಿ ತನ್ನ ಪಾತ್ರ ನಿರಾಕರಿಸಿದ ಉಗ್ರ ಸಂಘಟನೆ

ಆರಂಭದಲ್ಲಿ 26 ಜನರನ್ನು ಬಲಿತೆಗೆದುಕೊಂಡ ಮತ್ತು ಒಂದು ಡಜನ್‌ಗೂ ಹೆಚ್ಚು ಪ್ರವಾಸಿಗರನ್ನು ಗಾಯಗೊಳಿಸಿದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹೊಣೆಯನ್ನು TRF ಹೊತ್ತುಕೊಂಡಿತ್ತು.

ನವದೆಹಲಿ: ಪಹಲ್ಗಾಮ್ ಉಗ್ರ ದಾಳಿಯ ಹೊಣೆ ಹೊತ್ತುಕೊಂಡಿದ್ದ ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್(TRF) ಇದೀಗ ಉಲ್ಟಾ ಹೊಡೆದಿದ್ದು, ಈ ದಾಳಿಯಲ್ಲಿ ತನ್ನ ಪಾತ್ರ ಎಂದು ಪ್ರತಿಪಾದಿಸಿದೆ.

ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್-ಎ-ತೊಯ್ಬಾದ(LeT)ಗೆ ಎಂದು ಅಂಗ ಸಂಘಟನೆ ಟಿಆರ್​​ಎಫ್, ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ತನ್ನ ಪಾತ್ರ ನಿರಾಕರಿಸಿ ಆನ್‌ಲೈನ್ ಹೇಳಿಕೆ ಬಿಡುಗಡೆ ಮಾಡಿದೆ.

ಆರಂಭದಲ್ಲಿ 26 ಜನರನ್ನು ಬಲಿತೆಗೆದುಕೊಂಡ ಮತ್ತು ಒಂದು ಡಜನ್‌ಗೂ ಹೆಚ್ಚು ಪ್ರವಾಸಿಗರನ್ನು ಗಾಯಗೊಳಿಸಿದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹೊಣೆಯನ್ನು TRF ಹೊತ್ತುಕೊಂಡಿತ್ತು.

ಪಾಕಿಸ್ತಾನದ ಒತ್ತಡದ ನಂತರ ಮತ್ತು ದಾಳಿಯ ವಿರುದ್ಧ ಕಣಿವೆಯಾದ್ಯಂತ ಭುಗಿಲೆದ್ದ ಕಾಶ್ಮೀರಿಗಳ ಬೃಹತ್ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು TRF ಈಗ ತನ್ನ ಪಾತ್ರವನ್ನು ನಿರಾಕರಿಸುತ್ತಿದೆ ಎಂದು ಭದ್ರತಾ ಮತ್ತು ಗುಪ್ತಚರ ಸಂಸ್ಥೆಯ ಮೂಲಗಳು ತಿಳಿಸಿವೆ.

"ಕರುಣಾಮಯಿ ಅಲ್ಲಾಹನ ಹೆಸರಿನಲ್ಲಿ, ಪಹಲ್ಗಾಮ್ ನಲ್ಲಿ ನಡೆದ ದಾಳಿಯಲ್ಲಿ ತಾನು ಭಾಗಿಯಾಗಿರುವುದನ್ನು ರೆಸಿಸ್ಟೆನ್ಸ್ ಫ್ರಂಟ್(TRF) ನಿಸ್ಸಂದಿಗ್ಧವಾಗಿ ನಿರಾಕರಿಸುತ್ತದೆ. ಈ ಕೃತ್ಯವನ್ನು TRF ಮಾಡಿದ ಎಂದು ಆರೋಪಿಸುವುದು ಸುಳ್ಳು, ಆತುರ ಮತ್ತು ಕಾಶ್ಮೀರಿ ಪ್ರತಿರೋಧವನ್ನು ಕೆಣಕಲು ಆಯೋಜಿಸಲಾದ ಅಭಿಯಾನದ ಭಾಗವಾಗಿದೆ" ಎಂದು ಭಯೋತ್ಪಾದಕ ಸಂಘಟನೆ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೆ ನೀಡಿದೆ.

ತನ್ನ ಡಿಜಿಟಲ್ ಪ್ಲಾಟ್‌ಫಾರ್ಮ್‌ವೊಂದರಲ್ಲಿ ಪಹಲ್ಗಾಮ್ ದಾಳಿಯ ನಂತರ ಹೊಣೆ ಹೊತ್ತುಕೊಂಡ "ಅನಧಿಕೃತ" ಸಂದೇಶವನ್ನು ಪೋಸ್ಟ್ ಮಾಡಲಾಗಿದೆ ಎಂದು ಟಿಆರ್ ಎಫ್ ಹೇಳಿದೆ.

"ಆಂತರಿಕ ಪರಿಶೋಧನೆಯ ನಂತರ, ಇದು ಸಂಘಟಿತ ಸೈಬರ್ ಅಪರಾಧದ ಪರಿಣಾಮ ಎಂದು ನಮಗೆ ತಿಳಿದು ಬಂದಿದೆ. ಅನಧಿಕೃತವಾಗಿ ಪೋಸ್ಟ್ ಮಾಡಿರುವುದನ್ನು ಪತ್ತೆಹಚ್ಚಲು ನಾವು ಸಂಪೂರ್ಣ ತನಿಖೆ ನಡೆಸುತ್ತಿದ್ದೇವೆ ಮತ್ತು ಆರಂಭಿಕ ತನಿಖೆಯಲ್ಲಿ ಇದು ಭಾರತೀಯ ಸೈಬರ್-ಗುಪ್ತಚರ ಕಾರ್ಯಕರ್ತರ ಕೈವಾಡವನ್ನು ಸೂಚಿಸುತ್ತದೆ" ಎಂದು ಭಯೋತ್ಪಾದಕ ಸಂಘಟನೆ ತಿಳಿಸಿದೆ.

2023ರ ಸೆಪ್ಟೆಂಬರ್​​ನಲ್ಲಿ ಜಂಟಿ ಸೇನಾ-ಪೊಲೀಸ್ ತಂಡದ ಮೇಲಿ ಇದೇ ಲಷ್ಕರ್‌ನ ರೆಸಿಸ್ಟೆನ್ಸ್ ಫೋರ್ಸ್ ದಾಳಿ ಮಾಡಿತ್ತು.ಈ ಭಯೋತ್ಪಾದಕ ಸಂಘಟನೆಯು 2019 ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಇದು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಅಂಗ ಸಂಘಟನೆಯಾಗಿದೆ. ಈ ಸಂಘಟನೆಯು ಯುವಕರನ್ನು ದಾರಿತಪ್ಪಿಸಿ ಭಯೋತ್ಪಾದಕ ಸಂಘಟನೆಗಳಲ್ಲಿ ತೊಡಗಿಸುವ ಕೆಲಸ ಮಾಡುತ್ತಾ ಬಂದಿದೆ.

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ(MHA) 2023 ರಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುವುದು, ಉಗ್ರರನ್ನು ನೇಮಿಸಿಕೊಳ್ಳುವುದು, ಒಳನುಸುಳುವಿಕೆಗೆ ಅನುಕೂಲ ಮಾಡಿಕೊಡುವುದು ಮತ್ತು ಪಾಕಿಸ್ತಾನದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಶಸ್ತ್ರಾಸ್ತ್ರ ಹಾಗೂ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಿದ್ದಕ್ಕಾಗಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ TRF ಅನ್ನು "ಭಯೋತ್ಪಾದಕ ಸಂಘಟನೆ" ಎಂದು ಘೋಷಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

SCO Summit: ಒಂದೇ ವೇದಿಕೆಯಲ್ಲಿ ಚೀನಾ- ಭಾರತ- ರಷ್ಯಾ; ಕೆರಳಿದ Trump ಭಾರತದ ಬಗ್ಗೆ ಹೇಳಿದ್ದೇನು?

ಎಲ್ಲರನ್ನೂ ಕಾಯಿಸುತ್ತಿದ್ದ ಪುಟಿನ್ ಪ್ರಧಾನಿ ಮೋದಿಗಾಗಿ 10 ನಿಮಿಷಗಳ ಕಾಲ ಕಾರಿನಲ್ಲಿ ಕಾದು ಕುಳಿತ್ತಿದ್ದರು, Video!

ಧರ್ಮಸ್ಥಳದ ವಿರುದ್ಧ ಬಿಜೆಪಿಯಿಂದಲೇ ಷಡ್ಯಂತ್ರ: ಡಿಕೆ ಶಿವಕುಮಾರ್

ಸರ್ಕಾರಿ ಬಂಗಲೆ ಖಾಲಿ ಮಾಡಿದ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧಂಖರ್!

ಸೌಜನ್ಯ ಹೆಸರು ಹೇಳಿ ದುಡ್ಡು ಮಾಡಿದೆ ಎಂದು ನಿಮ್ಮ ಪಕ್ಷದವರೇ ಟೀಕಿಸಿದರು: ವಿಜಯೇಂದ್ರಗೆ ಸೌಜನ್ಯ ತಾಯಿ ತರಾಟೆ

SCROLL FOR NEXT