ಮೋಹನ್ ಭಾಗವತ್ IANS
ದೇಶ

'ನಾವು ನಮ್ಮ ನೆರೆಹೊರೆಯವರಿಗೆ ಎಂದಿಗೂ ಹಾನಿ ಮಾಡುವುದಿಲ್ಲ, ಆದರೆ.. ದೌರ್ಜನ್ಯ ನಡೆಸುವವರ ಕೊಲ್ಲುವುದು ಕೂಡ ಧರ್ಮ'

ಮೊದಲನೆಯದಾಗಿ ನಾವು ನಮ್ಮ ನೆರೆಹೊರೆಯವರಿಗೆ ಹಾನಿ ಮಾಡುವುದಿಲ್ಲ. ಇದಾದ ನಂತರವೂ ಯಾರಾದರೂ ತಪ್ಪು ಮಾರ್ಗವನ್ನು ಅಳವಡಿಸಿಕೊಂಡರೆ ರಾಜನು ತನ್ನ ಪ್ರಜೆಗಳನ್ನು ರಕ್ಷಿಸಬೇಕು.

ನಾಗ್ಪುರ: ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರ ದಾಳಿ ವಿಚಾರವಾಗಿ ಕಿಡಿಕಾರಿರುವ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್, 'ನಾವು ನಮ್ಮ ನೆರೆಹೊರೆಯವರಿಗೆ ಎಂದಿಗೂ ಹಾನಿ ಮಾಡುವುದಿಲ್ಲ, ಆದರೆ.. ದೌರ್ಜನ್ಯ ನಡೆಸುವವರ ಕೊಲ್ಲುವುದು ಕೂಡ ಧರ್ಮ' ಎಂದು ಹೇಳಿದ್ದಾರೆ.

ಇಂದು ದೆಹಲಿಯಲ್ಲಿ 'ದಿ ಹಿಂದೂ ಪ್ರಣಾಳಿಕೆ'ಯನ್ನು ಬಿಡುಗಡೆ ಮಾಡಿ ಮಾತನಾಡಿದ ಮೋಹನ್ ಭಾಗವತ್, 'ದೌರ್ಜನ್ಯ ಎಸಗುವವರಿಗೆ ಪಾಠ ಕಲಿಸುವುದು ನಮ್ಮ ಕರ್ತವ್ಯ. ಮೊದಲನೆಯದಾಗಿ ನಾವು ನಮ್ಮ ನೆರೆಹೊರೆಯವರಿಗೆ ಹಾನಿ ಮಾಡುವುದಿಲ್ಲ. ಇದಾದ ನಂತರವೂ ಯಾರಾದರೂ ತಪ್ಪು ಮಾರ್ಗವನ್ನು ಅಳವಡಿಸಿಕೊಂಡರೆ ರಾಜನು ತನ್ನ ಪ್ರಜೆಗಳನ್ನು ರಕ್ಷಿಸಬೇಕು ಎಂದು ಹೇಳಿದರು.

'ದೌರ್ಜನ್ಯ ಎಸಗುವವರಿಗೆ ಪಾಠ ಕಲಿಸುವುದು ನಮ್ಮ ಕರ್ತವ್ಯ. ರಾವಣನ ಸಂಹಾರ ಕೂಡ ಲೋಕ ಕಲ್ಯಾಣಕ್ಕಾಗಿ ಆಗಿತ್ತು. ದೇವರು ರಾವಣನನ್ನು ಕೊಂದನು. ಇದು ಹಿಂಸೆಯಲ್ಲ, ಅಹಿಂಸೆ. ಅಹಿಂಸೆ ನಮ್ಮ ಧರ್ಮ. ದೌರ್ಜನ್ಯ ಎಸಗುವವರಿಗೆ ಧರ್ಮವನ್ನು ಕಲಿಸುವುದು ಅಹಿಂಸೆ. ನಾವು ನಮ್ಮ ನೆರೆಹೊರೆಯವರಿಗೆ ಎಂದಿಗೂ ಹಾನಿ ಮಾಡುವುದಿಲ್ಲ. ಇದರ ನಂತರವೂ ಯಾರಾದರೂ ತಪ್ಪು ಮಾರ್ಗವನ್ನು ಅಳವಡಿಸಿಕೊಂಡರೆ ಜನರನ್ನು ರಕ್ಷಿಸುವುದು ರಾಜನ ಕರ್ತವ್ಯ. ರಾಜನು ತನ್ನ ಕೆಲಸವನ್ನು ಮಾಡುತ್ತಾನೆ' ಎಂದು ಅವರು ಹೇಳಿದರು.

'ಈ ದಾಳಿಯು ಧರ್ಮ ಮತ್ತು ಅಧರ್ಮದ ನಡುವಿನ ಹೋರಾಟ ಎಂಬುದನ್ನು ನೆನಪಿಸುತ್ತದೆ. ಜನರನ್ನು ಅವರ ಧರ್ಮದ ಬಗ್ಗೆ ಕೇಳಿ ನಂತರ ಅವರನ್ನು ಕೊಲ್ಲಲಾಯಿತು. ಹಿಂದೂಗಳು ಎಂದಿಗೂ ಹೀಗೆ ಮಾಡುವುದಿಲ್ಲ. ಇದು ನಮ್ಮ ಸ್ವಭಾವವಲ್ಲ. ದ್ವೇಷ ನಮ್ಮ ಸಂಸ್ಕೃತಿಯಲ್ಲಿಲ್ಲ, ಆದರೆ ನಮಗಾದ ತೊಂದರೆಯನ್ನು ಮೌನವಾಗಿ ಸಹಿಸಿಕೊಳ್ಳುವುದು ನಮ್ಮ ಸಂಸ್ಕೃತಿಯಲ್ಲಿಲ್ಲ. ನಮ್ಮ ಹೃದಯದಲ್ಲಿ ನೋವು ಇದೆ. ನಾವು ಕೋಪಗೊಂಡಿದ್ದೇವೆ. ದುಷ್ಟತನವನ್ನು ಕೊನೆಗೊಳಿಸಲು ನಾವು ನಮ್ಮ ಶಕ್ತಿಯನ್ನು ತೋರಿಸಬೇಕು. ರಾವಣನು ತನ್ನ ಮನಸ್ಸನ್ನು ಬದಲಾಯಿಸಿಕೊಳ್ಳಲು ನಿರಾಕರಿಸಿದ್ದರಿಂದ ಅವನನ್ನು ಸಹ ಕೊಲ್ಲಲಾಯಿತು. ಬೇರೆ ದಾರಿ ಇರಲಿಲ್ಲ. ರಾಮನು ರಾವಣನನ್ನು ಕೊಂದನು. ಆದರೆ ಅವನಿಗೆ ಸುಧಾರಣೆಗೆ ಅವಕಾಶವನ್ನು ನೀಡಲಾಯಿತು. ಅವನು ಸುಧಾರಿಸದಿದ್ದಾಗ ದೇವರೇ ಅವನನ್ನು ಕೊಂದನು' ಎಂದು ಹೇಳಿದ್ದಾರೆ.

'ರಾಜನ ಕರ್ತವ್ಯವೆಂದರೆ ತನ್ನ ಪ್ರಜೆಗಳನ್ನು ರಕ್ಷಿಸುವುದು ಮತ್ತು ದಬ್ಬಾಳಿಕೆ ಮಾಡುವವರನ್ನು ಕೊಲ್ಲುವುದು. ಅಹಿಂಸೆ ನಮ್ಮ ಮೂಲ ಸ್ವಭಾವ. ಆದರೆ ಕೆಲವು ಜನರು ಹಾಳಾಗಿರುತ್ತಾರೆ. ರಾವಣನಿಗೆ ಎಲ್ಲವೂ ಇತ್ತು. ಆದರೆ ಅವನ ಮನಸ್ಸು ಅಹಿಂಸೆಯ ವಿರುದ್ಧವಾಗಿತ್ತು. ಇದರಿಂದಾಗಿ ದೇವರು ಅವನನ್ನು ಕೊಂದನು. ಅದೇ ರೀತಿ, ಗೂಂಡಾಗಳಿಂದ ಹೊಡೆತಕ್ಕೆ ಒಳಗಾಗದಿರುವುದು ನಮ್ಮ ಕರ್ತವ್ಯ. ಅವರಿಗೆ ಪಾಠ ಕಲಿಸುವುದು ನಮ್ಮ ಕರ್ತವ್ಯ. ನಾವು ನಮ್ಮ ನೆರೆಹೊರೆಯವರಿಗೆ ಯಾವುದೇ ಹಾನಿ ಮಾಡುವುದಿಲ್ಲ. ಆದರೆ ಅವರು ತಮ್ಮ ಧರ್ಮವನ್ನು ಅನುಸರಿಸದಿದ್ದರ., ತನ್ನ ಪ್ರಜೆಗಳನ್ನು ರಕ್ಷಿಸುವುದು ರಾಜನ ಕರ್ತವ್ಯ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

'ನಾವು ಧರ್ಮವನ್ನು ಕೇವಲ ಒಂದು ಆಚರಣೆ ಎಂದು ಪರಿಗಣಿಸಿದ್ದೇವೆ. ಧರ್ಮವು ಪೂಜಾ ಸ್ಥಳ ಮತ್ತು ಆಹಾರ ಪದ್ಧತಿಗೆ ಸಂಬಂಧಿಸಿತ್ತು. ಅಂದರೆ ಧರ್ಮವು ಪೂಜೆ ಮತ್ತು ಏನು ತಿನ್ನಬೇಕು ಎಂಬುದಕ್ಕೆ ಸೀಮಿತವಾಗಿದೆ ಎಂದು ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬರ ಮಾರ್ಗವು ಅವರಿಗೆ ಸರಿಯಾಗಿಯೇ ಇರುತ್ತದೆ. ನನ್ನ ಮಾರ್ಗ ನನಗೆ ಸರಿಯಾಗಿದೆ. ಆದರೆ ನಾನು ಎಲ್ಲರ ಮಾರ್ಗವನ್ನು ಸಹ ಗೌರವಿಸುತ್ತೇನೆ. ನನ್ನದು ಚೆನ್ನಾಗಿದೆ, ಇತರರದು ಕೆಟ್ಟದು ಎಂದು ಹೇಳಬಾರದು. ಇಂದು ಹಿಂದೂ ಸಮಾಜವು ಹಿಂದೂ ಧರ್ಮವನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆಯಿದೆ' ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಾತಿ ಗಣತಿ: ಮನೆ ಮನೆ ಸಮೀಕ್ಷೆ ಮುಕ್ತಾಯ; ರಾಜ್ಯದ ಒಟ್ಟು ಜನಸಂಖ್ಯೆ ಎಷ್ಟು ಗೊತ್ತಾ?

ದೇಶದ ಮೊದಲ 'ಕಡುಬಡತನ ಮುಕ್ತ' ರಾಜ್ಯ: ಘೋಷಣೆಗೆ ಕೇರಳ ಸಜ್ಜು, ಆರ್ಥಿಕ ತಜ್ಞರ ಆಕ್ಷೇಪವೇನು?

ಸಿಎಂ ಆಗಿ ಡಿಕೆಶಿ ನವೆಂಬರ್ 21ಕ್ಕೆ ಪ್ರಮಾಣ ವಚನ: ವರದಿಗಾರರ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಸಿಡಿಮಿಡಿ!

ಕುಡಚಿ ಕಾಂಗ್ರೆಸ್ MLA​ ಪುತ್ರನಿಗೆ ಡಿಕೆ ಶಿವಕುಮಾರ್ ಹೆಸರು ನಾಮಕರಣ! ವಿಶೇಷ ಏನು ಗೊತ್ತಾ?

ಬೆಂಗಳೂರು: ಲವರ್ ಜೊತೆ ಸೇರಿ 'ತಾಯಿಯನ್ನೇ ಕೊಂದು' ಆತ್ಮಹತ್ಯೆಯ ನಾಟಕವಾಡಿದ್ದ ಮಗಳು! ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು ಹೇಗೆ ಗೊತ್ತಾ?

SCROLL FOR NEXT