ಸಾಂದರ್ಭಿಕ ಚಿತ್ರ 
ದೇಶ

ಅಟ್ಟಾರಿ-ವಾಘಾ ಗಡಿ ಬಂದ್: ಅಫ್ಘಾನಿಸ್ತಾನದಿಂದ 'ಡ್ರೈಫ್ರೂಟ್ಸ್' ಪೂರೈಕೆಗೆ ಹೊಡೆತ!

ವರ್ಷಗಳ ಯುದ್ಧ ಮತ್ತು ಆಂತರಿಕ ಕಲಹಗಳ ಹೊರತಾಗಿಯೂ ಡ್ರೈಫ್ರೂಟ್ಸ್' ಪೂರೈಕೆಗೆ ಅಫ್ಘಾನಿಸ್ತಾನ ಭಾರತಕ್ಕೆ ಅತಿದೊಡ್ಡ ಮೂಲವಾಗಿದೆ.

ಚಂಡೀಗಢ: ಪಹಲ್ಗಾಮ್ ಭಯೋತ್ಪಾದನಾ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ ಅಟ್ಟಾರಿ- ವಾಘಾ ಗಡಿಯನ್ನು ಮುಚ್ಚುವುದರಿಂದ ಅಫ್ಘಾನಿಸ್ತಾನದಿಂದ ಭಾರತಕ್ಕೆ ಪೂರೈಕೆಯಾಗುತ್ತಿದ್ದ 'ಡ್ರೈಫ್ರೂಟ್ಸ್' ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಇದರಿಂದಾಗಿ ಡ್ರೈಫ್ರೂಟ್ಸ್' ದೇಶೀಯ ಬೆಲೆಗಳು ಶೇ. 10 ರಿಂದ 25 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ವರ್ಷಗಳ ಯುದ್ಧ ಮತ್ತು ಆಂತರಿಕ ಕಲಹಗಳ ಹೊರತಾಗಿಯೂ ಡ್ರೈಫ್ರೂಟ್ಸ್' ಪೂರೈಕೆಗೆ ಅಫ್ಘಾನಿಸ್ತಾನ ಭಾರತಕ್ಕೆ ಅತಿದೊಡ್ಡ ಮೂಲವಾಗಿದೆ. ಅಟ್ಟಾರಿ-ವಾಘಾ ಗಡಿಯನ್ನು ಮುಚ್ಚಿದ ನಂತರ ಏಪ್ರಿಲ್ 22 ರಿಂದ ಅಫ್ಘಾನಿಸ್ತಾನದ ಕಂದಹಾರ್‌ನಿಂದ ಅಟ್ಟಾರಿಗೆ ಡ್ರೈಫ್ರೂಟ್ಸ್ ಸಾಗಿಸುವ ಯಾವುದೇ ಟ್ರಕ್‌ಗಳು ಬರುತ್ತಿಲ್ಲ ಎಂದು ದಿನಸಿ ಮತ್ತು ಒಣ ಹಣ್ಣುಗಳ ವಾಣಿಜ್ಯ ಸಂಘದ ರಾಷ್ಟ್ರೀಯ ಅಧ್ಯಕ್ಷ ಅನಿಲ್ ಮೆಹ್ರಾ TNIE ಗೆ ತಿಳಿಸಿದರು.

"ಪಾಕಿಸ್ತಾನದ ಕಡೆಯ ವಾಘಾ ಗಡಿಯಲ್ಲಿ ಸುಮಾರು 50 ಟ್ರಕ್‌ಗಳು ನಿಂತಿವೆ. ಅಫ್ಘಾನಿಸ್ತಾನದಿಂದ ಭಾರತದ ಅಟ್ಟಾರಿಗೆ ಬರುತ್ತಿದ್ದ ಸುಮಾರು 100 ಟ್ರಕ್ ಗಳು 35 ರಿಂದ 40 ಟನ್ ಡ್ರೈಫ್ರೂಟ್ಸ್ ತಂದು ಮರಳುತ್ತಿದ್ದವು. ಮುಖ್ಯವಾಗಿ ಅಫ್ಘಾನಿಸ್ತಾನದ ಕಂದಹಾರ್‌ ನಿಂದ ಡ್ರೈಫ್ರೂಟ್ಸ್ ಬಂದರೆ, ಕಾಬೂಲ್‌ನಿಂದ ಕೆಲವು ವಸ್ತುಗಳು ಬರುತ್ತವೆ ಎಂದು ಅವರು ಹೇಳಿದರು.

ಅಫ್ಘಾನಿಸ್ತಾನದಲ್ಲಿ ಯಾವುದೇ ಶೇಖರಣಾ ಸೌಲಭ್ಯವಿಲ್ಲದ ಕಾರಣ ಶೇ. 90 ರಷ್ಟು ಒಣ ಹಣ್ಣುಗಳು ಜನವರಿ ಮತ್ತು ಫೆಬ್ರವರಿಯಲ್ಲಿ ಬಂದಿವೆ ಮತ್ತು ಇದು ಹಾಳಾಗುವ ವಸ್ತುವಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮೊದಲು ಅಟ್ಟಾರಿಗೆ ಪ್ರತಿನಿತ್ಯ ಸರಾಸರಿ 15 ರಿಂದ 20 ಟ್ರಕ್‌ಗಳು ಬರುತ್ತಿದ್ದವು. ಜುಲೈ 15 ರಿಂದ ದೀಪಾವಳಿಯವರೆಗೆ ಸೀಸನ್‌ನಲ್ಲಿ ದಿನಕ್ಕೆ ಸುಮಾರು 40 ರಿಂದ 60 ಟ್ರಕ್‌ಗಳು ಬರುತ್ತವೆ' ಎಂದು ಅವರು ತಿಳಿಸಿದರು.

ಒಣ ಹಣ್ಣುಗಳ ಬೆಲೆ ಈಗಾಗಲೇ ಶೇ. 10ರಿಂದ 25 ರಷ್ಟು ಹೆಚ್ಚಾಗಿದ್ದು, ಪ್ರತಿ ಕೆಜಿಗೆ 750 ರಿಂದ 775 ರೂ.ಗಳಿದ್ದ ಬಾದಾಮಿ ಈಗ ಕೆಜಿಗೆ 850 ರೂ.ಗೆ ಮಾರಾಟವಾಗುತ್ತಿದ್ದು, ಕೆಜಿಗೆ 70 ರಿಂದ 75 ರೂ.ವರೆಗೆ ಹೆಚ್ಚಾಗಿದೆ. ಕೆಜಿಗೆ ರೂ. 1,800 ರಿಂದ ರೂ. 2,000ಕ್ಕೆ ಮಾರಾಟವಾಗುತ್ತಿದ್ದ ಫೀಸ್ತಾ ಬೆಲೆಯು ಶೇ. 15 ರಷ್ಟು ಹೆಚ್ಚಾಗಿದೆ.

ವರ್ಷಗಳ ಯುದ್ಧ ಮತ್ತು ಆಂತರಿಕ ಕಲಹಗಳ ಹೊರತಾಗಿಯೂ, ಅಫ್ಘಾನಿಸ್ತಾನ ಭಾರತಕ್ಕೆ ಒಣ ಹಣ್ಣುಗಳ ಅತಿದೊಡ್ಡ ಮೂಲವಾಗಿ ಮುಂದುವರೆದಿದೆ. ಅಟ್ಟಾರಿ ಗಡಿ ಮುಚ್ಚುವುದರಿಂದ ಪಾಕಿಸ್ತಾನದ ಮೂಲಕ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ ಎಂದು ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ಹೇಳಿದೆ.

ಇದು ಭಾರತದೊಂದಿಗೆ ವ್ಯಾಪಾರಕ್ಕಾಗಿ ಅಫ್ಘಾನಿಸ್ತಾನದ ಕಡಿಮೆ ಮತ್ತು ಅಗ್ಗದ ಸಾರಿಗೆ ಮಾರ್ಗಗಳಲ್ಲಿ ಒಂದಾಗಿದೆ. ಈ ಮಾರ್ಗದ ಮೂಲಕ ವಾರ್ಷಿಕ 500 ಮಿಲಿಯನ್ ಡಾಲರ್ ನಷ್ಟು ವಹಿವಾಟು ನಡೆಯುತಿತ್ತು ಎಂದು ಅಫ್ಘಾನಿಸ್ತಾನ ಚೇಂಬರ್ ಆಫ್ ಕಾಮರ್ಸ್ ಮತ್ತು ಇನ್ವೆಸ್ಟ್‌ಮೆಂಟ್ ಹೇಳಿದೆ.

ಅಟ್ಟಾರಿ ಗಡಿ ಬಂದ್ ಮಾಡಿರುವುದರಿಂದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಎರಡರಿಂದಲೂ 'ಡ್ರೈಫ್ರೂಟ್ಸ್' ಆಮದುಗಳ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ ಎಂದು ಇನ್ನೊಬ್ಬ ಆಮದುದಾರರು ಹೇಳಿದ್ದಾರೆ. ನಾವು ಒಣ ಹಣ್ಣು ಪಡೆಯುತ್ತೇವೆ ಆದರೆ ಇದು ಯುಎಇ, ಇರಾನ್ ಮತ್ತು ಇರಾಕ್‌ನಂತಹ ದೇಶಗಳಿಂದ ಬರುತ್ತದೆ. ಇವು ಅಫ್ಘಾನ್ ಡ್ರೈ ಫ್ರೂಟ್ಸ್‌ಗೆ ಪರ್ಯಾಯ ಮಾರ್ಗವಾಗಿ ಕಾರ್ಯನಿರ್ವಹಿಸುತ್ತವೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ