ಬಿಜೆಪಿ-ಕಾಂಗ್ರೆಸ್ ಪೋಸ್ಟ್. 
ದೇಶ

Pahalgam Terror Attack: ಪ್ರಧಾನಿ ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್; ಪಾಕ್ ಮಾಜಿ ಸಚಿವ ಮೆಚ್ಚುಗೆ, ವಿವಾದ ಸೃಷ್ಟಿ

ಕಾಂಗ್ರೆಸ್ ಮಾಡಿರುವ ಈ ಪೋಸ್ಟ್'ನ್ನು ಪಾಕಿಸ್ತಾನದ ಮಾಜಿ ಸಚಿವ ಶೇರ್ ಮಾಡಿದ್ದು, ‘ಕತ್ತೆಯ ತಲೆಯಿಂದ ಕೊಂಬುಗಳು ಕಾಣೆಯಾಗಿವೆ ಎಂದು ಕೇಳಿದ್ದೆ, ಆದರೆ ಇಲ್ಲಿ ಮೋದಿ ಕಾಣೆಯಾಗಿದ್ದಾರೆಂದು ಹೇಳಿದ್ದಾರೆ.

ನವದೆಹಲಿ: ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಹಂಚಿಕೊಂಡಿರುವ ಪೋಸ್ಟರ್ ವೊಂದು ಇದೀಗ ವಿವಾದಕ್ಕೆ ಕಾರಣವಾಗಿದೆ.

‘ಬಂಧ್‌ಗಲಾ ಕುರ್ತಾ, ಚುಡಿದಾರ್ ಪೈಜಾಮಾ ಮತ್ತು ಕಪ್ಪು ಪಾದರಕ್ಷೆಯ ಮೇಲೆ 'ಗಾಯಾಬ್' (ಕಾಣೆಯಾಗಿದ್ದಾರೆ) ಎಂದು ಬರೆದಿರುವ ಪೋಸ್ಟರ್‌ ಅನ್ನು ಕಾಂಗ್ರೆಸ್ ಹಂಚಿಕೊಂಡಿದ್ದು, ಈ ಪೋಸ್ಟ್ ವಿವಾದವನ್ನು ಸೃಷ್ಟಿಸಿದೆ.

ಈ ಪೋಸ್ಟರ್‌ನಲ್ಲಿ ಯಾರ ಮುಖವೂ ಇಲ್ಲ. ಆದರೆ, ಫೋಟೋ ಶೈಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಹೋಲುವಂತಿದೆ.

ಕಾಂಗ್ರೆಸ್ ಮಾಡಿರುವ ಈ ಪೋಸ್ಟ್'ನ್ನು ಪಾಕಿಸ್ತಾನದ ಮಾಜಿ ಸಚಿವ ಶೇರ್ ಮಾಡಿದ್ದು, ‘ಕತ್ತೆಯ ತಲೆಯಿಂದ ಕೊಂಬುಗಳು ಕಾಣೆಯಾಗಿವೆ ಎಂದು ಕೇಳಿದ್ದೆ, ಆದರೆ ಇಲ್ಲಿ ಮೋದಿ ಕಾಣೆಯಾಗಿದ್ದಾರೆಂದು ಹೇಳಿದ್ದಾರೆ. ಅಲ್ಲದೆ, ಹ್ಯಾಷ್ ಟ್ಯಾಗ್ ನಲ್ಲಿ ನಾಟಿ ಕಾಂಗ್ರೆಸ್ ಎಂದು ಪೋಸ್ಟ್ ಮಾಡಿದ್ದಾರೆ. ಈ ಬೆಳವಣಿಗೆ ಬಿಜೆಪಿ ಹಾಗೂ ಜನರನ್ನು ಸಿಟ್ಟಿಗೇಳುವಂತೆ ಮಾಡಿದೆ.

ಕಾಂಗ್ರೆಸ್‌ ಪೋಸ್ಟ್ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಕಾಂಗ್ರೆಸ್ ಪಕ್ಷದ ಕೆಲ ನಾಯಕರನ್ನು ಒಟ್ಟಿಗೆ ಸೇರಿಸಿ, ಕಾಂಗ್ರೆಸ್ ಕೇ ಹಾತ್, ಪಾಕಿಸ್ತಾನ್ ಕೆ ಸಾಥ್ (ಕಾಂಗ್ರೆಸ್ ಕೈ ಪಾಕಿಸ್ತಾನದ ಜೊತೆಗೆ) ಎಂದು ಪೋಸ್ಟ್ ಮಾಡಿ, ತಿರುಗೇಟು ನೀಡಿದೆ.

ಕಾಂಗ್ರೆಸ್ ಪಕ್ಷವು ಪಾಕಿಸ್ತಾನದಂತೆ ಮಾತನಾಡುವುದಲ್ಲದೆ, ಅವರ ಕಾರ್ಯ ಸಂಸ್ಕೃತಿ ಮತ್ತು ಪದ್ಧತಿಗಳು ಇಸ್ಲಾಮಾಬಾದ್‌ನಂತೆಯೇ ಇವೆ ಎಂದು ಟೀಕಿಸಿದೆ.

‘ಕಾಂಗ್ರೆಸ್ ಪಕ್ಷವು ಪ್ರಧಾನಿ ಮೋದಿಯವರ ತಲೆ ಕಾಣೆಯಾಗಿರುವ ಚಿತ್ರವನ್ನು ಹಂಚಿಕೊಂಡಿದೆ. ಇದು ಪಾಕಿಸ್ತಾನಿ ರಾಯಭಾರಿ ಭಾರತೀಯರ ಮೇಲೆ ಕತ್ತು ಸೀಳುವುದಾಗಿ ಮಾಡಿರುವ ಸನ್ಹೆಯಂತೆ ಇದೆ. ಕಾಂಗ್ರೆಸ್ ಪಾಕಿಸ್ತಾನಿಗಳ ಭಾಷೆಯಲ್ಲಿ ಮಾತನಾಡುತ್ತಿದೆ ಮತ್ತು ಭಯೋತ್ಪಾದಕರಂತೆ ವರ್ತಿಸುತ್ತಿದೆ’ ಎಂದು ಟೀಕಿಸಿದೆ.

ರಾಜ್ಯ ಬಿಜೆಪಿ ಪೋಸ್ಟ್ ಮಾಡಿ, ಕರ್ನಾಟಕದ ಕಾಂಗ್ರೆಸ್‌ ನಾಯಕರು ಪಾಕಿಸ್ಥಾನದ ಏಜೆಂಟ್‌ಗಳಂತೆ ವರ್ತಿಸುತ್ತಿದ್ದಾರೆ. ಅವಕಾಶ ಲಭಿಸಿದರೆ ಪಾಕಿಸ್ಥಾನದ ರಾಜಕೀಯದಲ್ಲೂ ಮಿಂಚಬಹುದೇನೋ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಒಬ್ಬರಿಗೆ ಯುದ್ಧ ಬೇಡವಂತೆ, ಮತ್ತೊಬ್ಬರಿಗೆ ಪಾಕಿಸ್ಥಾನ ಮಿತ್ರರಾಷ್ಟ್ರವಂತೆ, ಇನ್ನೊಬ್ಬರು ಉಗ್ರರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುತ್ತಿದ್ದಾರೆ. ತುಂಡು ಮತಗಳಿಗಾಗಿ ಪಾಕಿಸ್ಥಾನ ಪ್ರೇರಿತ ಉಗ್ರವಾದವನ್ನು ಸಮರ್ಥಿಸುವುದಾದರೆ ಉಗ್ರಗಾಮಿಗಳಿಗೂ, ಕಾಂಗ್ರೆಸ್ಸಿಗರಿಗೂ ಯಾವ ವ್ಯತ್ಯಾಸವಿದೆ? ಎಂದು ಪ್ರಶ್ನಿಸಿದೆ.

ಬಿಜೆಪಿ ನಾಯಕ ಅಮಿತ್ ಮಾಳವೀಯ ಟ್ವೀಟ್ ಮಾಡಿ, ಕಾಂಗ್ರೆಸ್ ನಾಯಕರು ಪಾಕಿಸ್ತಾನದ ಸ್ಲೀಪರ್ ಸೆಲ್‌ಗಳಂತೆ ವರ್ತಿಸುತ್ತಿದ್ದಾರೆ. ಅವರ ಬೇಜವಾಬ್ದಾರಿ ಮತ್ತು ಖಂಡನೀಯ ಹೇಳಿಕೆಗಳನ್ನು ಸಂತ್ರಸ್ತ ಕುಟುಂಬಗಳಿಗೆ ಸಾವಿನಲ್ಲೂ ಘನತೆಯನ್ನು ನಿರಾಕರಿಸುವಷ್ಟು ದೂರ ಹೋಗಿದೆ. ಉಗ್ರರ ಹತ್ಯೆಗಳಿಗೆ ಅಪಾರ ಸಾಕ್ಷ್ಯಗಳಿವೆ. ಪ್ರತ್ಯಕ್ಷದರ್ಶಿಗಳಿಂದ ಬಂದ ನೇರ ಹೇಳಿಕೆಗಳ ಹೊರತಾಗಿಯೂ, ಕಾಂಗ್ರೆಸ್ ಉಷ್ಟ್ರಪಕ್ಷಿಯಂತೆ ಮರಳಿನಲ್ಲಿ ತನ್ನ ತಲೆಯನ್ನು ಹೂತುಹಾಕಿಕೊಂಡಿದೆ ಎಂದು ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

ಕಾರುಗಳ ಬೆಲೆಯಲ್ಲಿ ಆಗಲಿದೆ ಭಾರಿ ಇಳಿಕೆ: GST ಪರಿಷ್ಕರಣೆಗಾಗಿ ಕಾದು ಕುಳಿತ ಗ್ರಾಹಕರು!

SCROLL FOR NEXT