ಸಂಗ್ರಹ ಚಿತ್ರ 
ದೇಶ

ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ: ಸೇನಾ ಮುಖ್ಯಸ್ಥರ ಹಾಟ್‌ಲೈನ್‌ ಮಾತುಕತೆ; ಪಾಕಿಸ್ತಾನಕ್ಕೆ ಭಾರತ ಎಚ್ಚರಿಕೆ!

ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆ (ಎಲ್‌ಒಸಿ) ಉದ್ದಕ್ಕೂ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಬುಧವಾರ ಹಾಟ್‌ಲೈನ್‌ನಲ್ಲಿ ಚರ್ಚೆ ನಡೆಸಿದರು.

ನವದೆಹಲಿ: ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತ ಮತ್ತು ಪಾಕ್ ಗಡಿಯಲ್ಲಿ ಪಾಕಿಸ್ತಾನ ಸೇನೆ ಅಪ್ರಚೋದಿತ ದಾಳಿ ಮುಂದುವರೆಸಿರುವಂತೆಯೇ ಇತ್ತ ಭಾರತ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.

ಹೌದು.. ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆ (ಎಲ್‌ಒಸಿ) ಉದ್ದಕ್ಕೂ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಬುಧವಾರ ಹಾಟ್‌ಲೈನ್‌ನಲ್ಲಿ ಚರ್ಚೆ ನಡೆಸಿದ್ದು, ಈ ವೇಳೆ ಪಾಕಿಸ್ತಾನ ಸೇನೆಗೆ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ಕುರಿತು ಭಾರತ ಎಚ್ಚರಿಕೆ ನೀಡಿದೆ.

ಮಿಲಿಟರಿ ಕಾರ್ಯಾಚರಣೆಗಳ ಇಬ್ಬರು ಮಹಾನಿರ್ದೇಶಕರ ನಡುವಿನ ಸಭೆ ಮಂಗಳವಾರ ನಡೆದಿದ್ದು, ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಸೇನೆಯು ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಬಗ್ಗೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಆದಾಗ್ಯೂ, ಹಾಟ್‌ಲೈನ್‌ನಲ್ಲಿ ನಡೆದ ವಿನಿಮಯ(ಚರ್ಚೆ)ವನ್ನು "ವಾಡಿಕೆಯ" ಅಥವಾ ಸಾಮಾನ್ಯ ಚರ್ಚೆ ಎಂದು ಮೂಲಗಳು ವಿವರಿಸಿದ್ದು, ಇದು ಪ್ರತಿ ಮಂಗಳವಾರ ನಡೆಯುವ ಡಿಜಿಎಂಒಗಳ ನಡುವಿನ ವಾರಕ್ಕೊಮ್ಮೆ ನಡೆಯುವ ಚರ್ಚೆಯಾಗಿದೆ ಎಂದು ಹೇಳಿವೆ. ನಿಯಂತ್ರಣ ರೇಖೆ (ಎಲ್‌ಒಸಿ) ಉದ್ದಕ್ಕೂ ಪಾಕಿಸ್ತಾನ ಸೇನೆಯ ಅಪ್ರಚೋದಿತ ಸಣ್ಣ ಶಸ್ತ್ರಾಸ್ತ್ರಗಳ ಗುಂಡಿನ ದಾಳಿಗೆ ಭಾರತೀಯ ಸೇನೆ ಕೂಡ ಪರಿಣಾಮಕಾರಿಯಾಗಿ ತಿರುಗೇಟು ನೀಡುತ್ತಿದೆ.

ಜಮ್ಮು ಮತ್ತು ಕಾಶ್ಮೀರದ ಎಲ್‌ಒಸಿ ಉದ್ದಕ್ಕೂ ಉದ್ವಿಗ್ನತೆ ಹೆಚ್ಚಿದ್ದು, ಪಾಕಿಸ್ತಾನದ ಪದೇ ಪದೇ ಕದನ ವಿರಾಮ ಉಲ್ಲಂಘನೆಗೆ ಭಾರತೀಯ ಪಡೆಗಳು ಬಲವಾದ ಪ್ರತೀಕಾರದ ಪ್ರತಿಕ್ರಿಯೆಯನ್ನು ನೀಡಿವೆ. ಇದರ ನಂತರ, ಪಾಕಿಸ್ತಾನಿ ಸೈನಿಕರು ಹಲವಾರು ಪೋಸ್ಟ್‌ಗಳನ್ನು ತೆಗೆದುಹಾಕಿ, ಧ್ವಜಗಳನ್ನು ತೆಗೆದು ಹಾಕಿದ ಬಗ್ಗೆ ವರದಿಯಾಗಿದೆ.

ಪಾಕ್ ಧ್ವಜಗಳನ್ನು ತೆಗೆದ ಪಾಕ್ ಸೈನಿಕರು!

ಅಧಿಕೃತ ಮೂಲಗಳ ಪ್ರಕಾರ, ಪಾಕಿಸ್ತಾನಿ ಪಡೆಗಳು ತಮ್ಮ ಹಲವಾರು ಫಾರ್ವರ್ಡ್ ಪೋಸ್ಟ್‌ಗಳನ್ನು ತ್ಯಜಿಸಿ ರಾಷ್ಟ್ರೀಯ ಧ್ವಜಗಳನ್ನು ತೆಗೆದುಹಾಕಿವೆ ಎಂದು ವರದಿಯಾಗಿದೆ. ಹಾಟ್‌ಲೈನ್ ಮೂಲಕ ಮಾತುಕತೆ ನಡೆಸುವಾಗ ಎಲ್‌ಒಸಿಯಲ್ಲಿ ಕದನ ವಿರಾಮ ಉಲ್ಲಂಘನೆಯ ವಿರುದ್ಧ ಭಾರತ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ. ರಕ್ಷಣಾ ಮೂಲಗಳ ಪ್ರಕಾರ, ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಈ ಪುನರಾವರ್ತಿತ ಉಲ್ಲಂಘನೆಗಳ ಬಗ್ಗೆ ಭಾರತ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದೆ.

ಎಲ್‌ಒಸಿ ಉದ್ದಕ್ಕೂ ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ ಹೆಚ್ಚಾಗಿದೆ. ಜಮ್ಮು ಮತ್ತು ಕಾಶ್ಮೀರದ (ಜೆ-ಕೆ) ಕುಪ್ವಾರಾ ಮತ್ತು ಪೂಂಚ್ ಜಿಲ್ಲೆಗಳ ಎದುರಿನ ಪ್ರದೇಶಗಳಲ್ಲಿ ಏಪ್ರಿಲ್ 27-28ರ ರಾತ್ರಿ ಕದನ ವಿರಾಮ ಉಲ್ಲಂಘನೆಯಾಗಿದ್ದು, ಭಾರತೀಯ ಸೇನೆಯ ಪೋಸ್ಟ್ ಗಳನ್ನುಗುರಿಯಾಗಿಸಿಕೊಂಡು ಪಾಕ್ ಸೇನೆ ಗುಂಡಿನ ದಾಳಿ ನಡೆಸಿತ್ತು. ಏಪ್ರಿಲ್ 26-27ರ ರಾತ್ರಿ ಪಾಕಿಸ್ತಾನ ಸೇನೆಯು ತುಟ್ಮರಿ ಗಾಲಿ ಮತ್ತು ರಾಂಪುರ ಸೆಕ್ಟರ್‌ಗಳ ಎದುರಿನ ಪ್ರದೇಶಗಳಲ್ಲಿ ಎಲ್‌ಒಸಿ ಉದ್ದಕ್ಕೂ ನಡೆಸಿದ ಗುಂಡಿನ ದಾಳಿಗೆ ಭಾರತೀಯ ಸೇನೆಯು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿನ್ನೆ ಬೆಳಿಗ್ಗೆಯವರೆಗೆ, ಕದನ ವಿರಾಮ ಉಲ್ಲಂಘನೆಗಳು ಎಲ್‌ಒಸಿಗೆ ಸೀಮಿತವಾಗಿತ್ತು. ಆದರೆ, ನಿನ್ನೆ ತಡರಾತ್ರಿ ಪಾಕಿಸ್ತಾನಿ ಪಡೆಗಳು ಜಮ್ಮುವಿನ ಪರ್ಗ್ವಾಲ್ ಸೆಕ್ಟರ್‌ನಲ್ಲಿರುವ ಅಂತಾರಾಷ್ಟ್ರೀಯ ಗಡಿಯಲ್ಲಿ ಗುಂಡು ಹಾರಿಸಿದಾಗ ಪರಿಸ್ಥಿತಿ ಉಲ್ಬಣಗೊಂಡಿತು. ಪಾಕಿಸ್ತಾನಿ ಸೇನೆಯು ಭಾರತೀಯ ಮಿಲಿಟರಿ ದಾಳಿಗೆ ಸಿದ್ಧತೆಗಳನ್ನು ಪ್ರಾರಂಭಿಸಿದೆ ಎಂದು ಹೇಳಿಕೊಂಡ ನಂತರ ಸೇನೆ ಮತ್ತು ನೌಕಾಪಡೆ ಎರಡೂ ಜಾಗರೂಕವಾಗಿವೆ. ಪಾಕಿಸ್ತಾನ ವಾಯುಪಡೆಯು ಹಾರಾಟ ಕಾರ್ಯಾಚರಣೆಗಳನ್ನು 50% ಕ್ಕಿಂತ ಹೆಚ್ಚು ಕಡಿಮೆ ಮಾಡಿದೆ. ವಾಯುಪ್ರದೇಶದಲ್ಲಿ ಗೊಂದಲವನ್ನು ತಪ್ಪಿಸಲು ಅಗತ್ಯ ಕಾರ್ಯಾಚರಣೆಗಳಿಗೆ ಮಾತ್ರ ಚಟುವಟಿಕೆಯನ್ನು ಸೀಮಿತಗೊಳಿಸಿದೆ ಎಂದು ಮಿಲಿಟರಿ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran war: ಅಲಿ ಖಮೇನಿ ಪುತ್ರ ಮೊಜ್ತಾಬಾ ಖಮೇನಿ ಇರಾನ್ ನೂತನ ಪರಮೋಚ್ಛ ನಾಯಕರಾಗಿ ಆಯ್ಕೆ

ರೋಚಕ ಎನಿಸುವ ಇರಾನ್ ಸಮರಾಂಗಣ ವಿಶ್ಲೇಷಣೆಗಳ ಅಸಲಿಯತ್ತೇನು? (ತೆರೆದ ಕಿಟಕಿ)

US-Israel Iran War: ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದೇ ಆದರೆ, ರಾಜ್ಯದ ಆರ್ಥಿಕತೆ ಮೇಲೆ ಭಾರೀ ಹೊಡೆತ..!

Israel Iran war: ಭಾರತಕ್ಕೆ ಬಿಗ್ ಶಾಕ್, ಕತಾರ್ ನಿಂದ ಕೈಗಾರಿಕೆಗಳಿಗೆ ಅನಿಲ ಸರಬರಾಜು ಕಡಿತ!

Israel-Iran war: Dohaದಲ್ಲಿ ಸಿಲುಕಿದ Indian basketball team, ತಂಡದಲ್ಲಿದ್ದಾರೆ ಮೂವರು ಕನ್ನಡಿಗರು..!

SCROLL FOR NEXT