ರಾಹುಲ್ ಗಾಂಧಿ  
ದೇಶ

'ಅಭಿ ಪಿಕ್ಚರ್ ಬಾಕಿ ಹೈ': EC ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ಮುಂದುವರಿಕೆ

ಮೊದಲು, ನಮ್ಮಲ್ಲಿ ಸಾಕ್ಷಿಗಳು ಇರಲಿಲ್ಲ ಆದರೆ ಈಗ ಇದೆ. ನಾವು ಸಂವಿಧಾನವನ್ನು ರಕ್ಷಿಸುತ್ತೇವೆ. 'ಒಬ್ಬ ವ್ಯಕ್ತಿ, ಒಂದು ಮತ' ಸಂವಿಧಾನದ ಅಡಿಪಾಯವಾಗಿದೆ" ಎಂದು ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದರು.

ನವದೆಹಲಿ: 'ಒಬ್ಬ ವ್ಯಕ್ತಿ, ಒಂದು ಮತ' ತತ್ವವನ್ನು ಜಾರಿಗೊಳಿಸುವ ಕರ್ತವ್ಯವನ್ನು ಚುನಾವಣಾ ಆಯೋಗ ನಿರ್ವಹಿಸುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ಅಕ್ರಮಗಳ ಕುರಿತು ಮತ್ತೆ ಆರೋಪಿಸಿರುವ ಲೋಕಸಭೆ ವಿರೋಧ ಪಕ್ಷ ನಾಯಕ "ಅಭಿ ಪಿಕ್ಚರ್ ಬಾಕಿ ಹೈ" ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷವು ಸಂವಿಧಾನವನ್ನು ರಕ್ಷಿಸುವಲ್ಲಿ ತೊಡಗಿಸಿಕೊಂಡಿದೆ ಆ ಕೆಲಸವನ್ನು ಮುಂದುವರಿಸುತ್ತದೆ ಎಂದರು. 'ಮತ ಕಳ್ಳತನ ಕೇವಲ ಒಂದು ಕ್ಷೇತ್ರದಲ್ಲಿ ಆಗಿದ್ದಲ್ಲ. ಹಲವು ಕಡೆ ಆಗಿದೆ. ಇದನ್ನು ರಾಷ್ಟ್ರೀಯ ಮಟ್ಟದಲ್ಲಿ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಚುನಾವಣಾ ಆಯೋಗಕ್ಕೆ ಇದು ತಿಳಿದಿದೆ ಎಂದು ನಮಗೂ ತಿಳಿದಿದೆ ಎಂದು ಇಂದು ಸಂಸತ್ ಭವನದ ಸಂಕೀರ್ಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಮೊದಲು, ನಮ್ಮಲ್ಲಿ ಸಾಕ್ಷಿಗಳು ಇರಲಿಲ್ಲ ಆದರೆ ಈಗ ಇದೆ. ನಾವು ಸಂವಿಧಾನವನ್ನು ರಕ್ಷಿಸುತ್ತೇವೆ. 'ಒಬ್ಬ ವ್ಯಕ್ತಿ, ಒಂದು ಮತ' ಸಂವಿಧಾನದ ಅಡಿಪಾಯವಾಗಿದೆ" ಎಂದು ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದರು.

'ಒಬ್ಬ ವ್ಯಕ್ತಿ, ಒಂದು ಮತ'ವನ್ನು ಜಾರಿಗೊಳಿಸುವುದು ಚುನಾವಣಾ ಆಯೋಗದ ಕರ್ತವ್ಯ.ಆದರೆ ಅವರು ತಮ್ಮ ಕರ್ತವ್ಯವನ್ನು ಮಾಡಿಲ್ಲ. ಆದ್ದರಿಂದ ನಾವು ಸಂವಿಧಾನವನ್ನು ರಕ್ಷಿಸುತ್ತಿದ್ದೇವೆ ಮತ್ತು ಅದನ್ನು ಮುಂದುವರಿಸುತ್ತೇವೆ.ಅದನ್ನು ನಾವು ನಿಲ್ಲಿಸುವುದಿಲ್ಲ ಎಂದರು.

ಬಿಹಾರ ಚುನಾವಣಾ ಆಯೋಗದ ಮತದಾರರ ಪಟ್ಟಿಯಲ್ಲಿ ಪಟ್ಟಿ ಮಾಡಲಾಗಿದೆ ಎನ್ನಲಾದ 124 ವರ್ಷದ ಮತದಾರ ಮಿಂಟಾ ದೇವಿ ಬಗ್ಗೆ ಕೇಳಿದಾಗ, ಅಂತಹ ಸಾಕಷ್ಟು ಪ್ರಕರಣಗಳಿವೆ. ಅಭಿ ಪಿಕ್ಚರ್ ಬಾಕಿ ಹೈ ಎಂದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಹ ಇಂತಹ ಹಲವಾರು ಪ್ರಕರಣಗಳಲ್ಲಿ ಸಂಬಂಧಿಕರ ವಿಳಾಸಗಳು ಮತ್ತು ಹೆಸರುಗಳು ನಕಲಿ ಇದೆ ಎಂದು ಹೇಳಿದ್ದಾರೆ.

ಸಂಸತ್ ಆವರಣದಲ್ಲಿ ಪ್ರತಿಭಟನೆ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ಟಿಎಂಸಿಯ ಡೆರೆಕ್ ಒ'ಬ್ರೇನ್, ಡಿಎಂಕೆಯ ಟಿಆರ್ ಬಾಲು, ಎನ್‌ಸಿಪಿ (ಎಸ್‌ಪಿ) ಯ ಸುಪ್ರಿಯಾ ಸುಳೆ, ಹಾಗೆಯೇ ಡಿಎಂಕೆ ಮತ್ತು ಎಡ ಪಕ್ಷಗಳ ಇತರ ವಿರೋಧ ಪಕ್ಷದ ಸಂಸದರು ಸಂಸತ್ತಿನ ಮಕರ ದ್ವಾರದ ಬಳಿ ಪ್ರತಿಭಟನೆ ನಡೆಸಿದರು.

ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಪೋಸ್ಟರ್‌ಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು. ರಾಜೀವ್ ಕುಮಾರ್ ಮತ್ತು ಜ್ಞಾನೇಶ್ ಕುಮಾರ್ ನೇತೃತ್ವದ ಚುನಾವಣಾ ಆಯೋಗವು ಬಿಜೆಪಿಯ ಒಂದು ಭಾಗವಾಗಿದೆ ಎಂದು ಕಾಂಗ್ರೆಸ್‌ನ ಮಾಣಿಕ್ಕಮ್ ಟ್ಯಾಗೋರ್ ಆರೋಪಿಸಿದರು.

ಬಿಹಾರದಲ್ಲಿ ಎಸ್‌ಐಆರ್ ಕುರಿತು ಸಂಸತ್ತಿನಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದೆ. ಆಪರೇಷನ್ ಸಿಂದೂರ್ ಕುರಿತು ಚರ್ಚೆಗಳನ್ನು ಹೊರತುಪಡಿಸಿ, ಜುಲೈ 21 ರಂದು ಮಳೆಗಾಲದ ಅಧಿವೇಶನ ಪ್ರಾರಂಭವಾದಾಗಿನಿಂದ ಸಂಸತ್ತಿನಲ್ಲಿ ಯಾವುದೇ ವ್ಯವಹಾರ ನಡೆದಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನವೆಂಬರ್ ಕ್ರಾಂತಿ ಇಲ್ಲ: ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್; 8-12 ಸಚಿವರಿಗೆ ಕೊಕ್? ಆಕಾಂಕ್ಷಿಗಳ ಪಟ್ಟಿ!

ಬಿಹಾರ ಚುನಾವಣೆ: ಸೋಲಿಗೆ ದುಃಖವಿಲ್ಲ, 'ಸಾರ್ವಜನಿಕ ಜೀವನದಲ್ಲಿ ಏರಿಳಿತ ಅನಿವಾರ್ಯ: RJD ಮೊದಲ ಪ್ರತಿಕ್ರಿಯೆ

ಬಿಹಾರ ಚುನಾವಣೆ ಫಲಿತಾಂಶಕ್ಕೆ ರಾಜಕೀಯ ಅಷ್ಟೇ ಅಲ್ಲ, ಕುಟುಂಬವೂ ಛಿದ್ರ; ರಾಜಕಾರಣದ ಜೊತೆ ಕುಟುಂಬಕ್ಕೂ ಲಾಲು ಪುತ್ರಿ ಗುಡ್ ಬೈ!

ಮಣ್ಣಲ್ಲಿ ಮಣ್ಣಾದ ʻವೃಕ್ಷಮಾತೆʼ; ಸಕಲ ಸರ್ಕಾರಿ ಗೌರವಗಳೊಂದಿಗೆ ತಿಮ್ಮಕ್ಕ ಅಂತ್ಯಕ್ರಿಯೆ

ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಪ್ರಶಸ್ತಿ; ರಾಜ್ಯದ 114 ಸ್ಥಳದಲ್ಲಿ 114 ಸಸಿ ನೆಟ್ಟು ಪೋಷಣೆ

SCROLL FOR NEXT