ನರೇಂದ್ರ ಮೋದಿ-ಜಗದೀಪ್ ಧಂಖರ್(ಸಂಗ್ರಹ ಚಿತ್ರ) 
ದೇಶ

ಮಾಜಿ VP ಧಂಖರ್ ಎಲ್ಲಿದ್ದಾರೆ? ಪ್ರಧಾನಿ ಮೋದಿಯನ್ನು ರಹಸ್ಯ ಭೇಟಿ ಮಾಡಿ ಮಾತುಕತೆ ನಡೆಸಿದರೇ?

ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಜಗದೀಪ್ ಧಂಖರ್ ಬಗ್ಗೆ ಪತ್ರ ಬರೆದಿದ್ದಾರೆ.

ನವದೆಹಲಿ: ರಾಜ್ಯಸಭೆಯ ಮಾಜಿ ಸಭಾಪತಿಗಳಾದ ಜಗದೀಪ್ ಧಂಖರ್ ಅವರು ಜುಲೈ 21 ರ ಸಂಜೆಯಿಂದ ಕಾಣೆಯಾಗಿದ್ದಾರೆ ಮತ್ತು ಅಂದಿನಿಂದ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ, ಅವರ ಬಗ್ಗೆ ಕೇಳಿಲ್ಲ, ಓದಿಲ್ಲ ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಟೀಕಾಸ್ತ್ರ ಮುಂದುವರಿಸಿದ್ದಾರೆ.

ತೆಲುಗು ಮಾಧ್ಯಮವೊಂದು ಮಾಜಿ ಉಪರಾಷ್ಟ್ರಪತಿಗಳು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ 45 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜ್ಯಸಭಾ ಮಾಜಿ ಅಧ್ಯಕ್ಷರು ಜುಲೈ 21 ರ ಸಂಜೆಯಿಂದ ಕಾಣೆಯಾಗಿದ್ದಾರೆ, ನಂತರ ಅವರನ್ನು ನೋಡಲಿಲ್ಲ, ಕೇಳಲಿಲ್ಲ, ಅವರ ಬಗ್ಗೆ ಎಲ್ಲಿಯೂ ಓದಿಲ್ಲ. ಆದರೆ ತೆಲುಗು ಮಾಧ್ಯಮ ಪ್ರಕಾರ, ರಾಜ್ಯಸಭಾ ಮಾಜಿ ಅಧ್ಯಕ್ಷರು ಇತ್ತೀಚೆಗೆ ಪ್ರಧಾನಿಯನ್ನು 45 ನಿಮಿಷಗಳ ಕಾಲ ಭೇಟಿಯಾದರು. ಹಾಗಾದರೆ ಏನು ನಡೆಯುತ್ತಿದೆ?" ಎಂದು ಎಕ್ಸ್ ಪೋಸ್ಟ್ ನಲ್ಲಿ ಜೈರಾಂ ರಮೇಶ್ ಪ್ರಶ್ನಿಸಿದ್ದಾರೆ.

ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಜಗದೀಪ್ ಧಂಖರ್ ಬಗ್ಗೆ ಪತ್ರ ಬರೆದಿದ್ದಾರೆ.

ನಮ್ಮ ಮಾಜಿ ಉಪ ರಾಷ್ಟ್ರಪತಿಗಳಿಗೆ ಏನಾಗಿದೆ, ಅವರು ಎಲ್ಲಿದ್ದಾರೆ? ಅವರ ಆರೋಗ್ಯ ಹೇಗಿದೆ? ಅವರು ಸುರಕ್ಷಿತವಾಗಿದ್ದಾರೆಯೇ? ಈ ಪ್ರಶ್ನೆಗಳ ಬಗ್ಗೆ ರಾಷ್ಟ್ರಕ್ಕೆ ಸತ್ಯ ತಿಳಿಯಬೇಕಿದೆ ಎಂದು ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ವಾಸ್ತವವಾಗಿ, ರಾಜ್ಯಸಭೆಯ ಕೆಲವು ಸಹೋದ್ಯೋಗಿಗಳು ಸುಪ್ರೀಂ ಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿಯನ್ನು ಸಲ್ಲಿಸುವ ಬಗ್ಗೆಯೂ ಯೋಚಿಸುತ್ತಿದ್ದಾರೆ, ಧಂಖರ್ ಅವರು ಎಲ್ಲಿದ್ದಾರೆ, ಅವರು ಆರೋಗ್ಯವಾಗಿದ್ದಾರೆಯೇ, ಸುರಕ್ಷಿತವಾಗಿದ್ದಾರೆಯೇ ಎಂದು ತಿಳಿದುಕೊಳ್ಳುವ ಕುತೂಹಲದಲ್ಲಿದ್ದಾರೆ.

ಮೊನ್ನೆ ಶನಿವಾರ ರಾಜ್ಯಸಭೆ ಸಂಸದ ಕಪಿಲ್ ಸಿಬಲ್, ಮಾಜಿ ಉಪ ರಾಷ್ಟ್ರಪತಿ ಜಗದೀಪ್ ಧಂಖರ್ ರಾಜೀನಾಮೆ ನೀಡಿದ ನಂತರ ಅವರು ಎಲ್ಲಿದ್ದಾರೆಂದು ತಿಳಿದಿಲ್ಲ ಎಂದು ಹೇಳಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ವಿಷಯದ ಬಗ್ಗೆ ಹೇಳಿಕೆ ನೀಡಬೇಕೆಂದು ಒತ್ತಾಯಿಸಿದ್ದರು.

ಅವರ ರಾಜೀನಾಮೆಯ ನಂತರ, ಅವರು ಎಲ್ಲಿದ್ದಾರೆ ಎಂಬುದರ ಬಗ್ಗೆ ನಮಗೆ ಏನೂ ತಿಳಿದಿಲ್ಲ. ನಾನು ಈ ಹಿಂದೆ 'ಲಾಪಾಟಾ ಲೇಡೀಸ್' ಬಗ್ಗೆ ಕೇಳಿದ್ದೆ, ಆದರೆ 'ಲಾಪಾಟಾ' ಉಪಾಧ್ಯಕ್ಷರ ಬಗ್ಗೆ ಕೇಳಿದ್ದು ಇದೇ ಮೊದಲು" ಎಂದು ಸಿಬಲ್ ಸುದ್ದಿಗಾರರಿಗೆ ಹೇಳಿದ್ದರು.

ದೇಶದ ಮುಂದಿನ ಉಪ ರಾಷ್ಟ್ರಪತಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭಗೊಂಡಿದ್ದು, ಸೆಪ್ಟೆಂಬರ್ 9 ರಂದು ಚುನಾವಣೆ ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Strait of Hormuz: 'ಹೌದು.. ನಮ್ಮ ಆಪ್ತ ರಾಷ್ಟ್ರ'... ಭಾರತದ ನೌಕೆಗಳಿಗೆ ಅನುಮತಿ ಕುರಿತು ಇರಾನ್ ರಾಯಭಾರಿ ಹೇಳಿಕೆ!

West Asia conflict: ಇರಾನ್ ಉದ್ವಿಗ್ನತೆ ನಡುವೆಯೂ Hormuz ಜಲಸಂಧಿಯಿಂದ ಸುರಕ್ಷಿತವಾಗಿ ಬಂದ ಭಾರತ ಧ್ವಜ ಹೊತ್ತ ಹಡಗು!

West Asia conflict: ಮಸ್ಕತ್‌ನಲ್ಲಿ ಡ್ರೋನ್ ದಾಳಿ, ಭಾರತ ಮೂಲದ ಇಬ್ಬರ ಸಾವು

Khamenei ಸತ್ತ... ಉತ್ತರಾಧಿಕಾರಿ ಕಾಲು ಕಟ್.. ಹೊಸ ಸರ್ವಾಧಿಕಾರಿ ಯಾರು? ಇದು ಇರಾನ್ ಗೇ ಗೊತ್ತಿಲ್ಲ!

'ನನ್ನ ಮೌನವನ್ನು ದೌರ್ಬಲ್ಯ ಎಂದು ಪರಿಗಣಿಸಬೇಡಿ'.. 'ಉತ್ತರಿಸದಿದ್ದ ಮೇಲೆ ಅಧಿವೇಶನ ಏಕೆ ಕರೆಯಬೇಕು': ಸ್ಪೀಕರ್ UT Khader ಕಿಡಿ

SCROLL FOR NEXT