ಜ್ಞಾನೇಶ್ ಕುಮಾರ್-ರಾಹುಲ್ ಗಾಂಧಿ 
ದೇಶ

ಮತಗಳ್ಳತನ ಆರೋಪಗಳಿಗೆ 7 ದಿನದಲ್ಲಿ ಅಫಿಡವಿಟ್ ಸಲ್ಲಿಸಿ; ಇಲ್ಲ ಅಂದರೆ ನಿಮ್ಮ...: Rahul Gandhi ಗೆ ಜ್ಞಾನೇಶ್ ಕುಮಾರ್ ಕೊನೆ ಎಚ್ಚರಿಕೆ!

ಚುನಾವಣಾ ಆಯೋಗದ ದತ್ತಾಂಶವಿಲ್ಲದ ಪಿಪಿಟಿಯನ್ನು ತೋರಿಸುವುದು, ತಪ್ಪು ವಿಶ್ಲೇಷಣೆ ಮಾಡುವುದು ಮತ್ತು ಮಹಿಳೆಯೊಬ್ಬರು ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂದು ಹೇಳುವುದು ಬಹಳ ಗಂಭೀರ ಆರೋಪವಾಗಿದೆ.

ನವದೆಹಲಿ: ಚುನಾವಣಾ ಆಯೋಗ ಮತ್ತು ಮತದಾರರ ಪಟ್ಟಿಯ ಬಗ್ಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾಡಿರುವ ಆರೋಪಗಳು ಆಧಾರರಹಿತ ಮತ್ತು ಸುಳ್ಳು. ಒಂದು ವೇಳೆ ನಿಮ್ಮ ಆರೋಪಗಳಿಗೆ ಪುರಾವೆ ಇದ್ದರೆ, ಮುಂದಿನ 7 ದಿನಗಳಲ್ಲಿ ಅಫಿಡವಿಟ್ ಸಲ್ಲಿಸಿ, ಇಲ್ಲದಿದ್ದರೆ ಇಡೀ ದೇಶಕ್ಕೆ ಕ್ಷಮೆಯಾಚಿಸಬೇಕು ಎಂದು ರಾಹುಲ್ ಗಾಂಧಿಗೆ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಸವಾಲು ಹಾಕಿದ್ದಾರೆ.

ಮತದಾರರ ಪಟ್ಟಿಯನ್ನು ಸ್ವಚ್ಛಗೊಳಿಸುವುದು ನಮ್ಮ ಜವಾಬ್ದಾರಿಯಾಗಿದೆ. ಆದರೆ ಬಿಹಾರದಲ್ಲಿ ನಮ್ಮ ಬೂತ್ ಮಟ್ಟದ ಅಧಿಕಾರಿಗಳು ಬೂತ್ ಮಟ್ಟದ ಏಜೆಂಟ್‌ಗಳು ಮತ್ತು ರಾಜಕೀಯ ಪಕ್ಷಗಳ ಸಹಯೋಗದೊಂದಿಗೆ ಕೆಲಸ ಮಾಡಿದ್ದಾರೆ ಎಂದು ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದರು. ಚುನಾವಣಾ ಆಯೋಗದ ದತ್ತಾಂಶವಿಲ್ಲದ ಪಿಪಿಟಿಯನ್ನು ತೋರಿಸುವುದು, ತಪ್ಪು ವಿಶ್ಲೇಷಣೆ ಮಾಡುವುದು ಮತ್ತು ಮಹಿಳೆಯೊಬ್ಬರು ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂದು ಹೇಳುವುದು ಬಹಳ ಗಂಭೀರ ಆರೋಪವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತರು ಹೇಳಿದರು. ಚುನಾವಣಾ ಆಯೋಗವು ಅಫಿಡವಿಟ್ ಇಲ್ಲದೆ ಅಂತಹ ಗಂಭೀರ ಆರೋಪಗಳ ಮೇಲೆ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ, ಏಕೆಂದರೆ ಅದು ಸಂವಿಧಾನ ಮತ್ತು ಚುನಾವಣಾ ಆಯೋಗ ಎರಡಕ್ಕೂ ವಿರುದ್ಧವಾಗಿರುತ್ತದೆ ಎಂದು ಅವರು ಒತ್ತಿ ಹೇಳಿದರು.

ರಾಹುಲ್ ಗಾಂಧಿಯನ್ನು ಹೆಸರಿಸದೆ "ನನ್ನ ಎಲ್ಲಾ ಮತದಾರರನ್ನು ಅಪರಾಧಿಗಳಂತೆ ಬಿಂಬಿಸಿದರೆ ಅದನ್ನು ನೋಡಿಕೊಂಡು ಚುನಾವಣಾ ಆಯೋಗ ಮೌನವಾಗಿರಲು ಸಾಧ್ಯವಿಲ್ಲ? ನೀವು ವಿನಃಕಾರಣ ಆರೋಪಗಳು ಮಾಡಿದರೆ ನಡೆಯಲ್ಲ. ಅಫಿಡವಿಟ್ ನೀಡಬೇಕಾಗುತ್ತದೆ. ಇಲ್ಲದಿದ್ದರೆ ದೇಶಕ್ಕೆ ಕ್ಷಮೆಯಾಚನೆಯಾಗಬೇಕಾಗುತ್ತದೆ. ಮೂರನೇ ಆಯ್ಕೆ ಇಲ್ಲ. ಏಳು ದಿನಗಳಲ್ಲಿ ಅಫಿಡವಿಟ್ ಸಲ್ಲಿಸದಿದ್ದರೆ ಈ ಎಲ್ಲಾ ಆರೋಪಗಳು ಆಧಾರರಹಿತ ಎಂದರ್ಥ. ನಮ್ಮ ಮತದಾರರು ನಕಲಿ ಎಂದು ಯಾರು ಹೇಳುತ್ತಾರೋ ಅವರು ಕ್ಷಮೆಯಾಚಿಸಬೇಕು ಎಂದರು.

'ಈ ಪ್ರಶ್ನೆ ಬಂದಿದ್ದಕ್ಕೆ ನಿಮಗೆ ಹೇಳಲು ಬಯಸುತ್ತೇನೆ. ನಂಬಿ, ಮತದಾರರ ವಿಷಯದಲ್ಲಿ ಹೇಳುವುದಾದರೆ, ಶೇಕಡಾ 60ಕ್ಕಿಂತ ಹೆಚ್ಚು ಮತದಾನ ಭಾರತದಲ್ಲಿ ನಡೆಯುತ್ತದೆ. ವಿಶ್ವದ ದೊಡ್ಡ ಪ್ರಜಾಪ್ರಭುತ್ವ ದೇಶಗಳು ಸಹ ಇದನ್ನು ಯೋಚಿಸಲು ಸಾಧ್ಯವಿಲ್ಲ ಎಂದು ನಾನು ನಿಮಗೆ ಮೊದಲೇ ಹೇಳಿದ್ದೆ. ನಮ್ಮಲ್ಲಿ ವಿಶ್ವದ ಅತಿದೊಡ್ಡ ಮತದಾರರ ಪಟ್ಟಿ ಇದೆ. 90-100 ಕೋಟಿಗಳ ನಡುವೆ. ಅತಿದೊಡ್ಡ ಮತದಾರರ ಪಟ್ಟಿ, ಚುನಾವಣಾ ಕಾರ್ಯಕರ್ತರು ಅತಿದೊಡ್ಡ ಸೈನ್ಯ, ಅತಿ ಹೆಚ್ಚು ಜನರು ಮತದಾನ ಮಾಡುತ್ತಿದ್ದಾರೆ. ಪುರಾವೆ ನೀಡದೆ ಆರೋಪಗಳನ್ನು ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಮುಖ್ಯ ಚುನಾವಣಾ ಆಯುಕ್ತರು, 'ಬಹುಶಃ ಅದಕ್ಕಾಗಿಯೇ ಆಗಸ್ಟ್ 1 ರಿಂದ ಯಾವುದೇ ರಾಜಕೀಯ ಪಕ್ಷವು ಒಂದೇ ಒಂದು ಆಕ್ಷೇಪಣೆ ಸಲ್ಲಿಸಿಲ್ಲ. ಇದು ಕೇವಲ ಎರಡು ವಿಷಯಗಳನ್ನು ಅರ್ಥೈಸಬಲ್ಲದು. ಕರಡು ಪಟ್ಟಿ ಸಂಪೂರ್ಣವಾಗಿ ಸರಿಯಾಗಿದೆಯೇ?' ಚುನಾವಣಾ ಆಯೋಗ ಇದನ್ನು ಒಪ್ಪಿಕೊಳ್ಳುವುದಿಲ್ಲ, ಚುನಾವಣಾ ಆಯೋಗವು ಅದರಲ್ಲಿ ದೋಷಗಳಿರಬಹುದು ಎಂದು ಹೇಳುತ್ತಿದೆ. ಅದನ್ನು ಸರಿಪಡಿಸೋಣ, ಇನ್ನೂ 15 ದಿನಗಳು ಉಳಿದಿವೆ. ಸೆಪ್ಟೆಂಬರ್ 1ರ ನಂತರವೂ ಅದೇ ರೀತಿಯ ಆರೋಪಗಳು ಬರಲು ಪ್ರಾರಂಭಿಸಿದರೆ. ಯಾರು ಹೊಣೆ? ಪ್ರತಿ ಮಾನ್ಯತೆ ಪಡೆದ ಪಕ್ಷಕ್ಕೆ ಇನ್ನೂ 15 ದಿನಗಳು ಉಳಿದಿವೆ... ಸೆಪ್ಟೆಂಬರ್ 1ರ ಮೊದಲು ಅದರಲ್ಲಿರುವ ದೋಷಗಳನ್ನು ಎತ್ತಿ ತೋರಿಸಬೇಕೆಂದು ನಾನು ಎಲ್ಲಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡುತ್ತೇನೆ. ಚುನಾವಣಾ ಆಯೋಗವು ಅವುಗಳನ್ನು ಸರಿಪಡಿಸಲು ಸಿದ್ಧವಾಗಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಂಚ ಪಡೆಯುತ್ತಿದ್ದ ಸಚಿವ ಕೆ.ಜೆ ಜಾರ್ಜ್‌ OSD ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ

Russian strike: ಉಕ್ರೇನ್‌ ರೈಲು ನಿಲ್ದಾಣದಲ್ಲಿ ರಷ್ಯಾ 'ಡ್ರೋನ್' ದಾಳಿ; ಓರ್ವ ಸಾವು, 30 ಮಂದಿಗೆ ಗಾಯ! Video

ಬೆಂಗಳೂರು: ವಿವಾಹಿತರ ಅನೈತಿಕ ಸಂಬಂಧ ಸಾವಿನಲ್ಲಿ ಅಂತ್ಯ; Oyo ರೂಂನಲ್ಲಿ ಮಹಿಳೆ ಆತ್ಮಹತ್ಯೆ!

ಪ್ರಧಾನಿ ಮೋದಿ ಜೊತೆಗಿನ ವರ್ಚುವಲ್ ಸಭೆಯಲ್ಲಿ, ಕೈ ಮುಗಿದು ಕುಳಿತ ನಿತೀಶ್ ಕುಮಾರ್; ವ್ಯಾಪಕ ಟೀಕೆ!: Video

ಜಿಲ್ಲೆಗೊಂದು ಮೆಡಿಕಲ್ ಕಾಲೇಜು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವುದು ನನ್ನ ಗುರಿ: ಸಿಎಂ ಸಿದ್ದರಾಮಯ್ಯ

SCROLL FOR NEXT