FASTag ವಾರ್ಷಿಕ ಪಾಸ್ 
ದೇಶ

ನಾಲ್ಕೇ ದಿನದಲ್ಲಿ 5 ಲಕ್ಷಕ್ಕೂ ಹೆಚ್ಚು FASTag ಪಾಸ್‌ ಮಾರಾಟ; ತಮಿಳುನಾಡು, ಕರ್ನಾಟಕದಲ್ಲಿ ಹೆಚ್ಚು ಸೇಲ್

ತಮಿಳುನಾಡಿನಲ್ಲಿ 1.5 ಲಕ್ಷ ಮತ್ತು ಕರ್ನಾಟಕದಲ್ಲಿ ಸುಮಾರು ಒಂದು ಲಕ್ಷ ಸೇರಿದಂತೆ ಒಟ್ಟು ಐದು ಲಕ್ಷಕ್ಕೂ ಹೆಚ್ಚು ಪಾಸ್ ವಾರ್ಷಿಕ ಪಾಸ್ ಗಳನ್ನು ಮಾರಾಟ ಮಾಡಿದೆ.

ನವದೆಹಲಿ: ಆಗಸ್ಟ್ 15 ರಂದು ಬಿಡುಗಡೆಯಾದ ವಾರ್ಷಿಕ ಫಾಸ್ಟ್‌ಟ್ಯಾಗ್ ಪಾಸ್‌ಗೆ, ವಿಶೇಷವಾಗಿ ಎರಡು ದಕ್ಷಿಣ ರಾಜ್ಯಗಳಲ್ಲಿ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI) ತಮಿಳುನಾಡಿನಲ್ಲಿ 1.5 ಲಕ್ಷ ಮತ್ತು ಕರ್ನಾಟಕದಲ್ಲಿ ಸುಮಾರು ಒಂದು ಲಕ್ಷ ಸೇರಿದಂತೆ ಒಟ್ಟು ಐದು ಲಕ್ಷಕ್ಕೂ ಹೆಚ್ಚು ಪಾಸ್ ವಾರ್ಷಿಕ ಪಾಸ್ ಗಳನ್ನು ಮಾರಾಟ ಮಾಡಿದೆ. ಸುಮಾರು ಒಂದು ಲಕ್ಷ ಪಾಸ್ ಖರೀದಿದಾರರೊಂದಿಗೆ, ಹರಿಯಾಣ ಪ್ರಸ್ತುತ ಮೂರನೇ ಅತಿ ಹೆಚ್ಚು ವಾರ್ಷಿಕ ಪಾಸ್ ಹೊಂದಿರುವ ರಾಜ್ಯವಾಗಿದೆ.

"ಪ್ರಯಾಣಿಕರಿಗೆ ಅನುಕೂಲಕರ ಮತ್ತು ಪರಿಣಾಮಕಾರಿ ಟೋಲಿಂಗ್ ಅನುಭವ ಒದಗಿಸುವ ಮೂಲಕ, ಹೊಸದಾಗಿ ಪರಿಚಯಿಸಲಾದ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಸೌಲಭ್ಯವು ದೇಶಾದ್ಯಂತ ಐದು ಲಕ್ಷ ಬಳಕೆದಾರರ ಹೆಗ್ಗುರುತನ್ನು ದಾಟಿದೆ. ಕಳೆದ ನಾಲ್ಕು ದಿನಗಳಲ್ಲಿ ತಮಿಳುನಾಡು ಅತಿ ಹೆಚ್ಚು ವಾರ್ಷಿಕ ಪಾಸ್‌ಗಳನ್ನು ಖರೀದಿಸಿದೆ, ನಂತರ ಕರ್ನಾಟಕ ಮತ್ತು ಹರಿಯಾಣ ರಾಜ್ಯಗಳು ಹೆಚ್ಚು ಪಾಸ್ ಖರೀದಿಸಿವೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ, ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಮೂಲಕ ಗರಿಷ್ಠ ವಹಿವಾಟುಗಳು ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ದಾಖಲಾಗಿವೆ.

ವಾರ್ಷಿಕ ಪಾಸ್ ವ್ಯವಸ್ಥೆಯನ್ನು ಪರಿಚಯಿಸಿರುವುದರಿಂದ ರಾಜಮಾರ್ಗ್ ಯಾತ್ರಾ ಮೊಬೈಲ್ ಅಪ್ಲಿಕೇಶನ್ ಬಳಕೆದಾರರ ಸಂಖ್ಯೆಯೂ ಹೆಚ್ಚಾಗಿದೆ. ಈ ಅಪ್ಲಿಕೇಶನ್ ಮೂಲಕ ಪಾಸ್ ಖರೀದಿಸಬಹುದು. "ಇದು ಗೂಗಲ್‌ನ ಪ್ಲೇಸ್ಟೋರ್ ಶ್ರೇಯಾಂಕದಲ್ಲಿ ಒಟ್ಟಾರೆಯಾಗಿ 23ನೇ ಸ್ಥಾನವನ್ನು ತಲುಪಿದೆ ಮತ್ತು 15 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳೊಂದಿಗೆ ಪ್ರಯಾಣ ವಿಭಾಗದಲ್ಲಿ 2 ನೇ ಸ್ಥಾನವನ್ನು ತಲುಪಿದೆ.

ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಸೌಲಭ್ಯವು ರಾಷ್ಟ್ರೀಯ ಹೆದ್ದಾರಿಗಳು ಮತ್ತು ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇಗಳಲ್ಲಿ ಸುಮಾರು 1,150 ಟೋಲ್ ಪ್ಲಾಜಾಗಳಿಗೆ ಮಾನ್ಯವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IndiGo ಅವಾಂತರ ತಹಬದಿಗೆ: ಅಡಚಣೆ ಪ್ರಮಾಣ ಇಳಿಕೆ; 'ಹಂತಹಂತವಾಗಿ ಮರಳುತ್ತಿದ್ದೇವೆ' ಎಂದ CEO

LeT ಜೊತೆಗೆ ಒಪ್ಪಂದ; ಹಮಾಸ್ 'ಭಯೋತ್ಪಾದಕ ಸಂಘಟನೆ' ಎಂದು ಘೋಷಿಸಿ; ಭಾರತಕ್ಕೆ ಇಸ್ರೇಲ್ ಒತ್ತಾಯ!

ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ: 'ತಿಥಿ' ಹೀರೋಗೆ ಇಂದೆಂಥಾ ಸ್ಥಿತಿ?, ಅಭಿ ಈಗ ದಿನಗೂಲಿ ಕಾರ್ಮಿಕ!

ಮದುವೆ ರದ್ದು ಬೆನ್ನಲ್ಲೇ ಪರಸ್ಪರ 'ಅನ್‌ಫಾಲೋ' ಮಾಡಿಕೊಂಡ ಸ್ಮೃತಿ ಮಂಧಾನ, ಪಲಾಶ್ ಮುಚ್ಚಲ್!

Goa nightclub fire: ರೆಸ್ಟೋರೆಂಟ್‌ ಮಾಲೀಕ, ಕಾರ್ಯಕ್ರಮ ಆಯೋಜಕರ ವಿರುದ್ಧ FIR; ಸರಪಂಚ್ ಬಂಧನ!

SCROLL FOR NEXT