ತೇಜಸ್ವಿ ಯಾದವ್ - ರಾಹುಲ್ ಗಾಂಧಿ 
ದೇಶ

ಮುಂದಿನ ಲೋಕಸಭಾ ಚುನಾವಣೆ ನಂತರ ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆ: ತೇಜಸ್ವಿ ಯಾದವ್

ನಿತೀಶ್ ಕುಮಾರ್ ನೇತೃತ್ವದ ಸರ್ಕಾರ 'ಖಟ್ಟಾರ'(ಹಳಸಿದ) ಆಗಿದೆ ಮತ್ತು ಅದನ್ನು ತುರ್ತಾಗಿ ಬದಲಾಯಿಸಬೇಕಾಗಿದೆ.

ನವಾಡ: 'ಹಳೆಯ ಮತ್ತು ಹಳಸಿದ' ಎನ್‌ಡಿಎ ಸರ್ಕಾರವನ್ನು ತೆಗೆದುಹಾಕಲು ಹಾಗೂ ಮುಂದಿನ ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿ ಮಾಡಲು ಯುವಕರು ಸಂಕಲ್ಪ ಮಾಡಿದ್ದಾರೆ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಮಂಗಳವಾರ ಪ್ರತಿಪಾದಿಸಿದ್ದಾರೆ.

ಕಾಂಗ್ರೆಸ್‌ನ 'ಮತದಾರ ಅಧಿಕಾರ ಯಾತ್ರೆ'ಯ ಮೂರನೇ ದಿನವಾದ ಇಂದು ನವಾಡದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಯಾದವ್, ಯುವ ಪೀಳಿಗೆಗೆ ರಾಜ್ಯವನ್ನು ಮುನ್ನಡೆಸಲು ಅವಕಾಶ ಸಿಗುವ ಸಮಯ ಬಂದಿದೆ ಎಂದರು.

"ನಿತೀಶ್ ಕುಮಾರ್ ನೇತೃತ್ವದ ಸರ್ಕಾರ 'ಖಟ್ಟಾರ'(ಹಳಸಿದ) ಆಗಿದೆ ಮತ್ತು ಅದನ್ನು ತುರ್ತಾಗಿ ಬದಲಾಯಿಸಬೇಕಾಗಿದೆ. ಯುವಕರಿಗೆ ಈಗ ಅವಕಾಶ ಸಿಗಬೇಕು. ಬಿಹಾರದ ಬಗ್ಗೆ ನಮಗೆ ಒಂದು ದೃಷ್ಟಿಕೋನವಿದೆ ಎಂದು ಆರ್ ಜೆಡಿ ನಾಯಕ ಹೇಳಿದರು.

ಈ ಹಳೆಯ ಮತ್ತು ಹಳಸಿದ ಸರ್ಕಾರವನ್ನು ಅಧಿಕಾರದಿಂದ ತೆಗೆದುಹಾಕಲು ಮತ್ತು ಮುಂದಿನ ಲೋಕಸಭಾ ಚುನಾವಣೆಯ ನಂತರ ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂದು ಯುವಕರು ಸಂಕಲ್ಪ ಮಾಡಿದ್ದಾರೆ" ಎಂದು ಅವರು ಹೇಳಿದರು.

ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR) ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಒಂದು ಯೋಜನೆ ಎಂದು ಯಾದವ್ ಪುನರುಚ್ಚರಿಸಿದರು.

"SIR ಬಿಹಾರದಲ್ಲಿ ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಆಡಳಿತ ಪಕ್ಷದ ಪಿತೂರಿ ಎಂದು ಅವರು ಯಾದವ್ ಆರೋಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯ ಸರ್ಕಾರದ 'ದ್ವೇಷ ಭಾಷಣ' ಮಸೂದೆಗೆ ಅಮಿತ್ ಶಾ ಅಡ್ಡಗಾಲು; ಅಸ್ತಿತ್ವದಲ್ಲಿರುವ ಕಾನೂನೇ ಸಾಕು: ಕೇಂದ್ರ

Mekedatu row: ಕರ್ನಾಟಕದ DPR ತಿರಸ್ಕರಿಸಿ; ಪ್ರಧಾನಿ ಮೋದಿಗೆ ತಮಿಳುನಾಡು ಸಿಎಂ ವಿಜಯ್ ಮನವಿ

ಜನಸಂಖ್ಯಾ ಬದಲಾವಣೆ ಪರಿಶೀಲಿಸಲು ಸರ್ಕಾರದಿಂದ ಉನ್ನತ ಮಟ್ಟದ ಸಮಿತಿ

ಬೆಂಗಳೂರು: ಕೆಲಸ ಮಾಡುತ್ತಿದ್ದ ಕಂಪನಿಗೆ ಕನ್ನ! ಚಿನ್ನದ ಗಟ್ಟಿ, ಆಭರಣಗಳನ್ನು ಕದ್ದ 9 ಕಾರ್ಮಿಕರ ಬಂಧನ

IPL 2026: ನಾವೇನು ಸಿನಿಮಾ ಸ್ಟಾರ್‌ಗಳಲ್ಲ: ವಿಮಾನ ನಿಲ್ಗಾಣದಲ್ಲಿ Riyan Parag ಗರಂ, ವೈಭವ್ ಸೂರ್ಯವಂಶಿ ಶಾಕ್! Video

SCROLL FOR NEXT