ಬೆಂಗಳೂರು: ಅನಗತ್ಯ ಸುದ್ದಿಗಳನ್ನು ಮೊಬೈಲ್ ಪರದೆ ಮೇಲೆ ತೋರಿಸದೇ, ನೀವು ಯಾವ ರೀತಿಯ ಸುದ್ದಿಗಳನ್ನು ಓದಬೇಕು ಎಂಬುದನ್ನು ನೀವೇ ಆಯ್ಕೆ ಮಾಡುವ ಸಾತಂತ್ರ್ಯವನ್ನು ಗೂಗಲ್ ನೀಡುತ್ತಿದೆ.
ಇದಕ್ಕಾಗಿ ಆದ್ಯತೆಯ ಸುದ್ದಿ ಮೂಲಗಳು ಎಂಬ ಹೊಸ ವೈಶಿಷ್ಟ್ಯವನ್ನು ಗೂಗಲ್ ಗ್ರಾಹಕರಿಗೆ ಪರಿಚಯಿಸಿದೆ. ಈ ಮೂಲಕ ಗ್ರಾಹಕರಿಗೆ ಟಾಪ್ ಸ್ಟೋರೀಸ್ ಫೀಡ್ ತಾವು ಆಯ್ಕೆ ಮಾಡಿದ ಆದ್ಯತೆಯ ಸುದ್ದಿ ಮೂಲಗಳಿಂದಲೇ ಸುದ್ದಿಗಳು ಗೋಚರಿಸಲಿವೆ.
ಗೂಗಲ್‌ನ ಪೂರ್ವನಿಗದಿತ ಅಲ್ಗಾರಿದಮ್‌ಗಳನ್ನು ಸಂಪೂರ್ಣವಾಗಿ ಅವಲಂಬಿಸುವ ಬದಲು, preferred news source ಮೂಲಕ ನೀವು ಮೊದಲು ನೋಡಲು ಬಯಸುವ ಸುದ್ದಿ ವಾಹಿನಿಯನ್ನಾಗಿ ನಿಮ್ಮ ವಿಶ್ವಾಸಾರ್ಹ ವೆಬ್ ಸೈಟ್ kannadaprabha.com ನ್ನು ಆಯ್ಕೆ ಮಾಡಬಹುದಾಗಿದೆ.
ಓದುಗರಿಗೆ ಸಂಬಂಧಿಸಿದಂತೆ ಇದರರ್ಥ ಏನೆಂದರೆ ನೀವು ಈಗಾಗಲೇ ವಿಶ್ವಾಸವಿಡುವ ಮತ್ತು ಗೌರವಿಸುವ ವಿಷಯದೊಂದಿಗೆ ಅಪ್ಡೇಟ್ ಆಗುವುದು ಎಂಬುದಾದರೆ, ಪ್ರಕಾಶಕರಿಗೆ ಸಂಬಂಧಿಸಿದಂತೆ ಇದು ತಮ್ಮ ಪ್ರೇಕ್ಷಕರು, ವೀಕ್ಷಕರೊಂದಿಗೆ ಬಲವಾದ, ದೀರ್ಘಕಾಲೀನ ಸಂಬಂಧಗಳನ್ನು ಬೆಳೆಸಲು ಅವಕಾಶವನ್ನು ತೆರೆಯುತ್ತದೆ.
ಕಳೆದ ವಾರ Google ನ ಬ್ಲಾಗ್ ಪೋಸ್ಟ್‌ನಲ್ಲಿ preferred news ಬಗ್ಗೆ ಘೋಷಿಸಲಾಗಿದ್ದು, ಈ ವೈಶಿಷ್ಟ್ಯ ಬಳಕೆದಾರರು ತಮ್ಮ ನೆಚ್ಚಿನ ವೆಬ್‌ಸೈಟ್‌ಗಳು ಮತ್ತು ಬ್ಲಾಗ್‌ಗಳನ್ನು “ಆದ್ಯತೆಯ ಮೂಲಗಳು” ಎಂದು ಸೇರಿಸುವ ಮೂಲಕ ಸರ್ಚ್ ಫಲಿತಾಂಶಗಳನ್ನು ಕಸ್ಟಮೈಸ್ ಮಾಡಲು ಅನುಮತಿಸುತ್ತದೆ. ಒಮ್ಮೆ ಆದ್ಯತೆಯ ಸುದ್ದಿಮೂಲವನ್ನು ಸೆಟ್ ಮಾಡಿದ ನಂತರ, ನೀವು ಹುಡುಕುತ್ತಿರುವ ವಿಷಯದ ಕುರಿತು ಸುದ್ದಿ ಪ್ರಕಾಶಕರು ಹೊಸ ಮತ್ತು ಸಂಬಂಧಿತ ಅಪ್ಡೇಟ್ ಗಳನ್ನು ಪ್ರಕಟಿಸಿದಾಗಲೆಲ್ಲಾ ಈ ಔಟ್‌ಲೆಟ್‌ಗಳ ವರದಿಗಳು ಟಾಪ್ ಸ್ಟೋರೀಸ್ ಕ್ಯಾರೋಸೆಲ್‌ನಲ್ಲಿ ಹೆಚ್ಚು ಪ್ರಮುಖವಾಗಿ ಕಾಣಿಸಿಕೊಳ್ಳುತ್ತವೆ.
Google ನಲ್ಲಿ ಯಾವುದೇ ಟ್ರೆಂಡಿಂಗ್ ವಿಷಯಕ್ಕಾಗಿ ಹುಡುಕಿ.
ಟಾಪ್ ಸ್ಟೋರೀಸ್ ವಿಭಾಗದಲ್ಲಿ, ಹೊಸ “ಮೂಲಗಳು” ಐಕಾನ್ ಅನ್ನು ಟ್ಯಾಪ್ ಮಾಡಿ.
ಕನ್ನಡಪ್ರಭ.ಕಾಮ್ ನ್ನು ನಿಮ್ಮ ಆದ್ಯತೆಯ ವೆಬ್‌ಸೈಟ್‌ಗಳನ್ನು ಆಯ್ಕೆಮಾಡಿ.
ಪುಟವನ್ನು ರಿಫ್ರೆಶ್ (Page refresh) ಮಾಡಿ, ಮತ್ತು ನೀವು ಆಯ್ಕೆ ಮಾಡಿದ ಮೂಲಗಳು ಈಗ ನಿಮ್ಮ ಟಾಪ್ ಸ್ಟೋರೀಸ್ ಫೀಡ್‌ನಲ್ಲಿ ಸ್ಥಿರವಾಗಿ ಗೋಚರಿಸುತ್ತವೆ.
ಹೆಚ್ಚುವರಿಯಾಗಿ, ಹೊಸದಾದ “ನಿಮ್ಮ ಮೂಲಗಳಿಂದ” ವಿಭಾಗವು ಟಾಪ್ ಸ್ಟೋರೀಸ್ ಬ್ಲಾಕ್‌ನ ಕೆಳಗೆ ಕಾಣಿಸಿಕೊಳ್ಳುತ್ತದೆ, ಆದ್ದರಿಂದ ನೀವು ಅನುಸರಿಸುವ ಸುದ್ದಿ ಮೂಲಗಳಿಂದ ಹೆಚ್ಚಿನ ಕಾಂಟೆಂಟ್ ನ್ನು ನೀವು ಸುಲಭವಾಗಿ ಪಡೆಯಬಹುದಾಗಿದೆ. ಮುಖ್ಯವಾಗಿ, ನೀವು ಆಯ್ಕೆ ಮಾಡಬಹುದಾದ ಮೂಲಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ ಎಂಬುದು ಗಮನಾರ್ಹ ಅಂಶವಾಗಿದೆ.
ಪ್ರತಿದಿನ ಲಕ್ಷಾಂತರ ಓದುಗರು ತಂತ್ರಜ್ಞಾನ, ರಾಜಕೀಯ, ವ್ಯವಹಾರ, ಜೀವನಶೈಲಿ, ಸಿನಿಮಾ, ಅಂಕಣಗಳು ಹೀಗೆ ಹಲವು ತಾಜಾ, ವಿಶ್ವಾಸಾರ್ಹ ಕಾಂಟೆಂಟ್ ಗಾಗಿ ಕನ್ನಡಪ್ರಭ.ಕಾಮ್ ಗೆ ಭೇಟಿ ನೀಡುತ್ತಾರೆ. ವಿಶ್ವಾಸಾರ್ಹ, ವೇಗದ ಮತ್ತು ಆಳವಾದ ಪತ್ರಿಕೋದ್ಯಮಕ್ಕಾಗಿ ಕನ್ನಡಪ್ರಭ.ಕಾಮ್ ಜನಪ್ರಿಯ ವೆಬ್ ಸೈಟ್ ಆಗಿದ್ದು, ತಪ್ಪು ಮಾಹಿತಿ ಮತ್ತು AI- ಆಧಾರಿತ ಕಾಂಟೆಂಟ್ ಯುಗದಲ್ಲಿ, ವಿಶ್ವಾಸಾರ್ಹ ಮಾಧ್ಯಮಗಳನ್ನು ಅವಲಂಬಿಸುವುದು ಅತ್ಯಂತ ಮುಖ್ಯವಾಗಿದೆ.
ಕನ್ನಡಪ್ರಭ.ಕಾಮ್ ನ್ನು ನಿಮ್ಮ ಆದ್ಯತೆಯ ಮೂಲವಾಗಿ ಆಯ್ಕೆ ಮಾಡುವ ಮೂಲಕ, ರಾಜ್ಯ, ಕೇಂದ್ರ (ದೇಶ)ಕ್ಕೆ ಸಂಬಂಧಿಸಿದ ಸರ್ಕಾರಿ ನೀತಿ ನವೀಕರಣಗಳು ಅಥವಾ ಜಾಗತಿಕ ಮಟ್ಟದ ಬೆಳವಣಿಗೆಗಳ ಬಗ್ಗೆ ತಾಜಾ ಸುದ್ದಿಗಳ ಅಪ್ಡೇಟ್, ವಿಶೇಷ ಸಂದರ್ಶನಗಳು ಅಥವಾ ತಜ್ಞರ ವಿಶ್ಲೇಷಣೆಯನ್ನು ನೀವು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ.
preferred news source ವೈಶಿಷ್ಟ್ಯ ಪ್ರಸ್ತುತ ಗೂಗಲ್‌ನ ಎರಡು ದೊಡ್ಡ ಮಾರುಕಟ್ಟೆಗಳಾದ ಅಮೆರಿಕ ಮತ್ತು ಭಾರತದಲ್ಲಿ ಪರಿಚಯಿಸಲಾಗಿದೆ. ಕಾಲಾನಂತರದಲ್ಲಿ, ಇದು ಹೆಚ್ಚಿನ ದೇಶಗಳಿಗೆ ವಿಸ್ತರಿಸುವ ಸಾಧ್ಯತೆಯಿದೆ.
ಆದ್ಯತೆಯ ಮೂಲಗಳೊಂದಿಗೆ, ಗೂಗಲ್ ಆಯ್ಕೆಯನ್ನು ಓದುಗರ ಕೈಗೆ ಹಿಂತಿರುಗಿಸಿದೆ. ಮತ್ತು ನೀವು ನಿಖರತೆ, ವೇಗ ಮತ್ತು ವಿಶ್ವಾಸಾರ್ಹ ವರದಿ ಮಾಡುವಿಕೆಯನ್ನು ಬಯಸಿದರೆ, ಕನ್ನಡಪ್ರಭ.ಕಾಮ್ ನ್ನು ನಿಮ್ಮ ಆದ್ಯತೆಯ ಪಟ್ಟಿಗೆ ಸೇರಿಸುವುದು ನಿಮ್ಮ ಮೊದಲ ಹೆಜ್ಜೆಯಾಗಿರಲಿ.