ಮೃತ ನಿಕ್ಕಿ ಮತ್ತು ಆಕೆಯ ಪತಿ ವಿಪಿನ್ 
ದೇಶ

ಸ್ಕಾರ್ಪಿಯೋ SUV, ಬುಲೆಟ್, ಚಿನ್ನ ನೀಡಿದ್ದರೂ ತೀರದ ಧನದಾಹ: ವರದಕ್ಷಿಣೆ ಕಿರುಕುಳ ಬಿಚ್ಚಿಟ್ಟ ನಿಕ್ಕಿ ಸಹೋದರಿ!

ಮೃತ ನಿಕ್ಕಿ ಮತ್ತು ಆಕೆಯ ಸಹೋದರಿ ಕಾಂಚನ್, 2016, ಡಿಸೆಂಬರ್ 10 ರಂದು ಸಹೋದರರಾದ ವಿಪಿನ್ ಮತ್ತು ರೋಹಿತ್ ಅವರನ್ನು ವಿವಾಹವಾಗಿದ್ದರು.

ನವದೆಹಲಿ: ಗ್ರೇಟರ್ ನೋಯ್ಡಾದ ಸಿರ್ಸಾ ಗ್ರಾಮದಲ್ಲಿ ವರದಕ್ಷಿಣೆಗಾಗಿ ಪತಿ ಮತ್ತು ಅತ್ತೆ ಸೇರಿ ಬೆಂಕಿ ಹಚ್ಚಿದ ನಂತರ 26 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಯಾಗಿ ಆಕೆಯ ಪತಿ ವಿಪಿನ್ ನನ್ನು ಬಂಧಿಸಲಾಗಿದೆ.

ಮೃತಳನ್ನು ನಿಕ್ಕಿ ಎಂದು ಗುರುತಿಸಲಾಗಿದೆ. ಈಕೆ 2016ರಲ್ಲಿ ಸಿರ್ಸಾ ಮೂಲದ ವಿಪಿಎನ್​ ಎಂಬಾತನನ್ನು ಮದುವೆಯಾಗಿದ್ದಳು. ಮೃತ ನಿಕ್ಕಿ ಮತ್ತು ಆಕೆಯ ಸಹೋದರಿ ಕಾಂಚನ್, 2016, ಡಿಸೆಂಬರ್ 10 ರಂದು ಸಹೋದರರಾದ ವಿಪಿನ್ ಮತ್ತು ರೋಹಿತ್ ಅವರನ್ನು ವಿವಾಹವಾಗಿದ್ದರು. ಮದುವೆಯ ಸಮಯದಲ್ಲಿ ವರರಿಗೆ ಟಾಪ್ ಮಾಡೆಲ್ ಸ್ಕಾರ್ಪಿಯೋ ಎಸ್‌ಯುವಿ, ಬುಲೆಟ್ (ರಾಯಲ್ ಎನ್‌ಫೀಲ್ಡ್) ಬೈಕ್, ನಗದು, ಚಿನ್ನ, ಎಲ್ಲವನ್ನೂ ಉಡುಗೊರೆಯಾಗಿ ನೀಡಲಾಗಿತ್ತು. ಇದಲ್ಲದೆ, ಕರ್ವಾ ಚೌತ್‌ನಲ್ಲಿ ನಮ್ಮ ಮನೆಯಿಂದ ಉಡುಗೊರೆಗಳನ್ನು ಕಳುಹಿಸಲಾಗುತ್ತಿತ್ತು ಎಂದು ನಿಕ್ಕಿ ಸಹೋದರಿ ಕಾಂಚನ್​ ತಿಳಿಸಿದ್ದಾರೆ.

ನಮ್ಮ ಪಾಲಕರು ತಮ್ಮ ಕೈಲಾದಷ್ಟು ಮಾಡಿದರು. ಆದರೆ, ನಮ್ಮ ಅತ್ತೆ-ಮಾವಂದಿರು ಅದರಿಂದ ಸಂತೋಷವಾಗಿರಲಿಲ್ಲ. ಹಣದಾಹ ಇತ್ತು. ಅದರಿಂದ ನಮನ್ನು ಟೀಕಿಸುತ್ತಲೇ ಇದ್ದರು. ನನ್ನ ಪಾಲಕರು ಉಡುಗೊರೆಯಾಗಿ ನೀಡಿದ ಬಟ್ಟೆಗಳ ಬೆಲೆ ಕೇವಲ 2 ರೂ. ಎಂದು ಗಂಡನ ಮನೆಯವರು ಹೇಳುತ್ತಿದ್ದರು ಎಂದು ಕಾಂಚನ್ ಅವರು ಕಣ್ಣೀರು ಹಾಕಿದರು.

ವಿಪಿನ್ ಮತ್ತು ರೋಹಿತ್ ಆಗಾಗ್ಗೆ ತಡರಾತ್ರಿಯವರೆಗೆ ಹೊರಗೆ ಇರುತ್ತಿದ್ದರು, ನಮ್ಮ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ. "ನಾವು ಅವರನ್ನು ಎಲ್ಲಿದ್ದೀರಿ ಎಂದು ಕೇಳಿದರೆ ನಮ್ಮ ಮೇಲೆ ಹಲ್ಲೆ ಮಾಡುತ್ತಿದ್ದರು. ಅವರು ಇತರ ಮಹಿಳೆಯರೊಂದಿಗೆ ಸಮಯ ಕಳೆಯುತ್ತಿದ್ದರು. ನಾವು ಹಲವು ರಾತ್ರಿಗಳು ಅಳುತ್ತಾ ಕಳೆದಿದ್ದೆವು. ಆದರೆ ಈಗ ಏನೂ ಉಳಿದಿಲ್ಲ, ನನ್ನ ತಂಗಿ ಹೋಗಿದ್ದಾಳೆ. ಅವಳು ನನಗಿಂತ ಸುಮಾರು ಎರಡು-ಮೂರು ವರ್ಷ ಚಿಕ್ಕವಳು, ಆದರೆ ಜನರು ನಾವು ಅವಳಿ ಮಕ್ಕಳು ಎಂದು ಭಾವಿಸಿದ್ದರು ಎಂದು ಕಾಂಚನ್ ತಿಳಿಸಿದ್ದಾರೆ.

ಇನ್ನೂ ಸಹೋದರಿಯರು ಮೇಕಪ್ ಸ್ಟುಡಿಯೋ ನಡೆಸುತ್ತಿದ್ದರು. ಆದರೆ, ಅತ್ತೆ-ಮಾವಂದಿರಿಗೆ ಇದು ಇಷ್ಟವಾಗಲಿಲ್ಲ. ನಾವು ಸಂಪಾದಿಸಿದ ಎಲ್ಲ ಹಣವನ್ನು ನಮ್ಮಿಂದು ಕಸಿದುಕೊಳ್ಳುತ್ತಿದ್ದರು. ಒಂದು ವೇಳೆ ನಾನು ಈ ವಿಡಿಯೋವನ್ನು ಚಿತ್ರೀಕರಿಸದೇ ಇದ್ದಿದ್ದರೆ, ನನ್ನ ಸಹೋದರಿ ಹೇಗೆ ಸತ್ತಳು ಎಂದು ಯಾರಿಗೂ ತಿಳಿಯುತ್ತಿರಲಿಲ್ಲ. ನಾನು ನೀರು ಸುರಿದೆ, ಅವಳನ್ನು ಉಳಿಸಲು ಪ್ರಯತ್ನಿಸಿದೆ, ಆದರೆ, ಮಧ್ಯದಲ್ಲಿ ನಾನು ಮೂರ್ಛೆ ಹೋದೆ ಎಂದು ಕಾಂಚನ್​ ಹೇಳಿದರು.

ಕಳೆದ ಗುರುವಾರ ಗಂಭೀರ ಸುಟ್ಟ ಗಾಯಗಳಿಂದ ನಿಕ್ಕಿಯನ್ನು ಗ್ರೇಟರ್​ ನೋಯ್ಡಾದ ಫೋರ್ಟೀಸ್​ ಆಸ್ಪತ್ರೆಗೆ ಕರೆತಂದಾಗ ಘಟನೆ ಬೆಳಕಿಗೆ ಬಂದಿದೆ. ಗಂಭೀರವಾಗಿ ಗಾಯಗೊಂಡಿದ್ದ ನಿಕ್ಕಿಯನ್ನು ಪರೀಕ್ಷೆ ಮಾಡಿದ ಫೋರ್ಟೀಸ್​ ಆಸ್ಪತ್ರೆ ವೈದ್ಯರು, ಉತ್ತಮ ಚಿಕಿತ್ಸೆಗಾಗಿ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ಅದರಂತೆ, ಆಕೆಯನ್ನು ಕರೆದೊಯ್ಯುವಾಗ ಮಾರ್ಗ ಮಧ್ಯೆ ಅಸುನೀಗಿದ್ದಾರೆ.

ಮದುವೆ ಸಮಯದಲ್ಲಿ ಭಾರೀ ವರದಕ್ಷಿಣೆ ನೀಡಲಾಗಿತ್ತು. ಆದರೆ, ಅಷ್ಟಕ್ಕೆ ಗಂಡನ ಮನೆಯವರ ಹಣದಾಹ ತಣಿಸಲಿಲ್ಲ. ಮತ್ತೆ 36 ಲಕ್ಷ ರೂ. ಹಣ ತೆಗೆದುಕೊಂಡು ಬರುವಂತೆ ವಿಪಿನ್​ ಮತ್ತು ಆತನ ಕುಟುಂಬ ನಿಕ್ಕಿಯನ್ನು ಒತ್ತಾಯಿಸಿತು. ಅಷ್ಟೊಂದು ಹಣವನ್ನು ತೆಗೆದುಕೊಂಡು ಬರಲು ಸಾಧ್ಯವಾಗದಿದ್ದಾಗ, ಮನಬಂದತೆ ಥಳಿಸಿದ ಗಂಡನ ಮನೆಯವರು, ಆಕೆಯನ್ನು ಬೆಂಕಿ ಹಚ್ಚಿ ಭೀಕರವಾಗಿ ಕೊಲೆಗೈದಿರುವುದು ಸದ್ಯ ಸ್ಥಳೀಯರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಈ ಭಯಾನಕ ಕೃತ್ಯವನ್ನು ಮೃತ ಯುವತಿಯ 6 ವರ್ಷದ ಪುಟ್ಟ ಮಗುವೇ ಮಾಧ್ಯಮಗಳ ಮುಂದೆ ಹಂಚಿಕೊಂಡಿದೆ. ನನ್ನ ಕಣ್ಣ ಮುಂದೆಯೇ ನನ್ನ ಅಪ್ಪ ನನ್ನ ತಾಯಿಯನ್ನು ಕೊಂದರು ಎಂದು ಹೇಳಿರುವುದು ಅನೇಕರ ಕಣ್ಣಂಚಲ್ಲಿ ನೀರು ತರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT