ಏರ್ ಇಂಡಿಯಾ ವಿಮಾನ 
ದೇಶ

ಏರ್ ಇಂಡಿಯಾ ದೆಹಲಿ-ಬೆಂಗಳೂರು ವಿಮಾನದಲ್ಲಿ ವೈದ್ಯಕೀಯ ತುರ್ತು; ಮಹಿಳೆಗೆ ಕ್ಯಾಬಿನ್ ಸಿಬ್ಬಂದಿ ನೆರವು

ಆಗಸ್ಟ್ 23 ರಂದು ರಾತ್ರಿ 8.35 ಕ್ಕೆ ಟರ್ಮಿನಲ್ 3 ರಿಂದ ಹೊರಟಿದ್ದ AI 2807 ವಿಮಾನದಲ್ಲಿ ಈ ಘಟನೆ ಸಂಭವಿಸಿದೆ. ತುರ್ತು ಪರಿಸ್ಥಿತಿ ಉಂಟಾದಾಗ ವಿಮಾನವು ಹಾರಾಟ ಪ್ರಾರಂಭಿಸಿತ್ತು.

ನವದೆಹಲಿ: ಶನಿವಾರ ರಾತ್ರಿ ನವದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರಿಗೆ ಪ್ರಯಾಣದ ಮಧ್ಯದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾಗಿತ್ತು. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಇಳಿಯುವವರೆಗೂ ವಿಮಾನ ಸಿಬ್ಬಂದಿ ಮಹಿಳೆಗೆ ನೆರವಾಗಿದ್ದಾರೆ.

ಆಗಸ್ಟ್ 23 ರಂದು ರಾತ್ರಿ 8.35 ಕ್ಕೆ ಟರ್ಮಿನಲ್ 3 ರಿಂದ ಹೊರಟಿದ್ದ AI 2807 ವಿಮಾನದಲ್ಲಿ ಈ ಘಟನೆ ಸಂಭವಿಸಿದೆ. ತುರ್ತು ಪರಿಸ್ಥಿತಿ ಉಂಟಾದಾಗ ವಿಮಾನವು ಹಾರಾಟ ಪ್ರಾರಂಭಿಸಿತ್ತು.

ಮಹಿಳೆ ಮುಂದೆ ಕುಳಿತಿದ್ದ ಸಹ ಪ್ರಯಾಣಿಕ ಮಾರಿಯೋ ಡ ಪೆನ್ಹಾ ಎಂಬುವವರು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಪೋಸ್ಟ್ ಮಾಡಿದ್ದು, ಏರ್ ಇಂಡಿಯಾ ಸಿಬ್ಬಂದಿ ಮತ್ತು ಬೆಂಗಳೂರು ವಿಮಾನ ನಿಲ್ದಾಣದ ಸಿಬ್ಬಂದಿಯ ತ್ವರಿತ ಮತ್ತು ವೃತ್ತಿಪರ ಪ್ರತಿಕ್ರಿಯೆಗಾಗಿ ಶ್ಲಾಘಿಸಿದ್ದಾರೆ.

'ಇಂದು ರಾತ್ರಿ ನವದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ AI 2807 ನಲ್ಲಿ ಅತ್ಯಂತ ದುಃಖಕರವಾದ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾಯಿತು. ನನ್ನ ಹಿಂದಿನ ಸೀಟಿನಲ್ಲಿದ್ದ ಮಹಿಳೆಯೊಬ್ಬರ ಮೂಗಿನಿಂದ ಅಪಾರ ಮತ್ತು ನಿರಂತರವಾಗಿ ರಕ್ತಸ್ರಾವವಾಗಲು ಪ್ರಾರಂಭಿಸಿತು'

ಇಂತಹ ಪರಿಸ್ಥಿತಿಯನ್ನು ಶಾಂತವಾಗಿ ಮತ್ತು ಪರಿಣಾಮಕಾರಿಯಾಗಿ ನಿಭಾಯಿಸಿದ ವಿಮಾನದ ಸಿಬ್ಬಂದಿಗೆ ಅಭಿನಂದನೆಗಳು. 'ಸಿಬ್ಬಂದಿ ಸರ್ಜಿಕಲ್ ಗ್ಲೋವ್ಸ್‌ಗಳನ್ನು ಧರಿಸಿದ್ದರು ಮತ್ತು ವೈದ್ಯಕೀಯ ತ್ಯಾಜ್ಯವನ್ನು ವಿಲೇವಾರಿ ಮಾಡಲು ವಿಶೇಷ ಚೀಲದಲ್ಲಿ ಸಂಗ್ರಹಿಸಲಾಯಿತು' ಎಂದಿದ್ದಾರೆ.

ವಿಮಾನವು ನಿಗದಿತ ಸಮಯಕ್ಕಿಂತ ಐದು ನಿಮಿಷ ತಡವಾಗಿ ಹೊರಟರೂ, ಪೈಲಟ್ ಪ್ರಯಾಣದ ಸಮಯದಲ್ಲಿ ಸಮಯವನ್ನು ಸರಿಹೊಂದಿಸುವಲ್ಲಿ ಯಶಸ್ವಿಯಾದರು ಮತ್ತು ನಿಗದಿತ ಸಮಯಕ್ಕಿಂತ 16 ನಿಮಿಷ ಮುಂಚಿತವಾಗಿಯೇ ವಿಮಾನವನ್ನು ಲ್ಯಾಂಡ್ ಮಾಡಿದರು. ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಉದ್ದೇಶಪೂರ್ವಕವಾಗಿ ಹೀಗೆ ಮಾಡಿರಬಹುದು. ಫ್ಲೈಟ್‌ಅವೇರ್‌ನ ಫ್ಲೈಟ್ ಟ್ರ್ಯಾಕಿಂಗ್ ಡೇಟಾದ ಪ್ರಕಾರ, ರಾತ್ರಿ 11.09ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಟರ್ಮಿನಲ್ 2 ರಲ್ಲಿ ಲ್ಯಾಂಡಿಂಗ್ ಅನ್ನು ದೃಢಪಡಿಸಿದೆ.

ವಿಮಾನ ನಿಲ್ದಾಣದಲ್ಲಿ ಈಗಾಗಲೇ ಕಾಯುತ್ತಿದ್ದ ವೈದ್ಯರೊಬ್ಬರು ವಿಮಾನ ಲ್ಯಾಂಡ್ ಆದ ತಕ್ಷಣವೇ ವಿಮಾನ ಹತ್ತಿದರು ಮತ್ತು ಪ್ರಯಾಣಿಕರಿಗೆ ತಕ್ಷಣ ಚಿಕಿತ್ಸೆ ನೀಡಿದರು. ವೈದ್ಯಕೀಯ ಸಿಬ್ಬಂದಿ ಯಾವುದೇ ಅಡೆತಡೆಯಿಲ್ಲದೆ ಮಹಿಳೆಗೆ ಸಹಾಯ ಮಾಡಲು ಸಹಕರಿಸಿದ್ದಕ್ಕಾಗಿ ಸಹ ಪ್ರಯಾಣಿಕರನ್ನು ಪೆನ್ಹಾ ಶ್ಲಾಘಿಸಿದರು.

'ವಿಮಾನಗಳಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ತಾಳ್ಮೆ ಮತ್ತು ಕೌಶಲ್ಯ ಬೇಕಾಗುತ್ತದೆ. ಅವುಗಳಲ್ಲಿ ಹೆಚ್ಚಿನವು ಕಾಣುವುದಿಲ್ಲ ಮತ್ತು ಹೆಚ್ಚಾಗಿ ಮೆಚ್ಚುಗೆ ಪಡೆಯುವುದಿಲ್ಲ. ಆದ್ದರಿಂದ, ಏರ್ ಇಂಡಿಯಾ ಮತ್ತು ಬೆಂಗಳೂರು ಸಿಬ್ಬಂದಿ ಇಂದು ರಾತ್ರಿಯ ಘಟನೆಯನ್ನು ಹೇಗೆ ನಿರ್ವಹಿಸಿದರು ಎಂಬುದಕ್ಕೆ ಇದು ಕೃತಜ್ಞತೆ ಮತ್ತು ಗೌರವದ ಟಿಪ್ಪಣಿಯಾಗಿದೆ' ಎಂದು ಪೆನ್ಹಾ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಏರ್ ಇಂಡಿಯಾ ಈ ಘಟನೆಯನ್ನು ದೃಢಪಡಿಸಿದೆ. ಆದಾಗ್ಯೂ, ಮಹಿಳೆ ಸದ್ಯ ವೈದ್ಯಕೀಯ ಸ್ಥಿತಿಯ ವಿವರಗಳು ಇನ್ನೂ ತಿಳಿದುಬಂದಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

ಕಾರುಗಳ ಬೆಲೆಯಲ್ಲಿ ಆಗಲಿದೆ ಭಾರಿ ಇಳಿಕೆ: GST ಪರಿಷ್ಕರಣೆಗಾಗಿ ಕಾದು ಕುಳಿತ ಗ್ರಾಹಕರು!

IADWS: ಭಾರತೀಯ ಸೇನೆ ಬತ್ತಳಿಕೆಗೆ 'ಲೇಸರ್ ನಿರ್ದೇಶಿತ ಹೊಸ ಅಸ್ತ್ರ': ದಂಗಾದ ಚೀನಾ, ಹೇಳಿದ್ದು ಏನು?

ಗೌರಿ-ಗಣೇಶ ಹಬ್ಬ: ಪರಿಸರ ಕಾಳಜಿ ಮರೆಯದಿರೋಣ, ಜನತೆಗೆ ಸಿಎಂ ಸಿದ್ದರಾಮಯ್ಯ ಕರೆ! Video

SCROLL FOR NEXT