ಜಮ್ಮುವಿನಲ್ಲಿ ಮಳೆಯಿಂದ ಅನಾಹುತ ಸೃಷ್ಟಿಯಾಗಿರುವುದು. 
ದೇಶ

ಜಮ್ಮು: ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ; ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

ಮಳೆಯ ಪರಿಣಾಮ ವೈಷ್ಣೋದೇವಿ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಭೂಕುಸಿತ ಸಂಭವಿಸಿದ್ದು, 9 ಮಂದಿ ಯಾತ್ರಿಕರು ಸೇರಿದಂತೆ ಮಳೆ ಅನಾಹುತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.

ಜಮ್ಮು: ಜಮ್ಮುವಿನಲ್ಲಿ ಮಳೆ ಭಾರೀ ಅನಾಹುತ ಸೃಷ್ಟಿಸಿದೆ. ಮಂಗಳವಾರ ಸುರಿದ ರಣಭೀಕರ ಮಳೆಗೆ ಭೂಕುಸಿ, ಮನೆ, ಸೇತುವೆ ಕೊಚ್ಚಿ ಹೋದ ಘಟನೆ ಸಂಭವಿಸಿದ್ದು, ಕನಿಷ್ಟ 32ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

ಮಳೆಯ ಪರಿಣಾಮ ವೈಷ್ಣೋದೇವಿ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಭೂಕುಸಿತ ಸಂಭವಿಸಿದ್ದು, 9 ಮಂದಿ ಯಾತ್ರಿಕರು ಸೇರಿದಂತೆ ಮಳೆ ಅನಾಹುತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.

ವೈಷ್ಣೋದೇವಿ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಭೂಕುಸಿತ ಸಂಭವಿಸಿರುವ ಹಿನ್ನೆಲೆಯಲ್ಲಿ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ರಣ ಮಳೆ ಕೇವಲ ಜಮ್ಮು ಅಷ್ಟೇ ಅಲ್ಲದೆ, ಕಾಶ್ಮೀರ ಕಣಿವೆಯಲ್ಲಿಯೂ ಹಾನಿಯನ್ನುಂಟು ಮಾಡಿದೆ. ಇಲ್ಲಿನ ಸೇತುವೆಗಳು ಕುಸಿದು ಬಿದ್ದಿದ್ದು, ಮೊಬೈಲ್ ಟವರ್‌ಗಳು ಮತ್ತು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದರಿಂದ ಮೂಲಸೌಕರ್ಯ ತೀವ್ರವಾಗಿ ಹಾನಿಗೊಳಗಾಗಿದೆ ಎಂದು ತಿಳಇದುಬಂದಿದೆ.

ಜಮ್ಮು-ಶ್ರೀನಗರ ಮತ್ತು ಕಿಶ್ತ್ವಾರ್-ದೋಡಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ, ಭೂಕುಸಿತ, ಹಠಾತ್ ಪ್ರವಾಹದಿಂದ ರಸ್ತೆಗಳ ಸಂಚಾರದ ಮೇಲೆ ನಿರ್ಬಂಧಗಳನ್ನು ಹೇರಲಾಗಿದೆ. ಅಲ್ಲದೆ, ಜಮ್ಮುವಿಗೆ ಹೋಗುವ ಮತ್ತು ಅಲ್ಲಿಂದ ಬರುವ ಅನೇಕ ರೈಲುಗಳನ್ನು ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಧ್ಕ್ವರಿಯಲ್ಲಿರುವ ಇಂದರ್ಪ್ರಸ್ಥ ಭೋಜನಾಲಯದ ಬಳಿ ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದವರನ್ನು ಹೊರತೆಗೆಯಲು ರಕ್ಷಣಾ ಪಡೆಗಳು ಹರಸಾಹಸ ಪಡುತ್ತಿದ್ದಾರೆ. ಹಿಮಕೋಟಿ ದೇಗುಲದ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿಗೊಳಿಸಲಾಗಿದೆ.

ಈ ಬಗ್ಗೆ ಯಾತ್ರಿಕರೊಬ್ಬರು ಮಾತನಾಡಿ, "ನಾನು ದರ್ಶನ ಪಡೆದು ಬೆಟ್ಟದಿಂದ ಕೆಳಗೆ ಬರುತ್ತಿದ್ದಾಗ ಜನರು ಕೂಗಾಡಲು ಪ್ರಾರಂಭಿಸಿದ್ದರು. ಕಲ್ಲುಗಳು ಕೆಳಗೆ ಬೀಳುವುದನ್ನು ನಾನು ನೋಡಿದೆ. ಕೂಡಲೇ ನಾನು ಸುರಕ್ಷಿತ ಸ್ಥಳಕ್ಕೆ ಧಾವಿಸಿದೆ. ಆದರೂ ಗಾಯಗೊಂಡೆ ಎಂದು ಎಂದು ಹೇಳಿದ್ದಾರೆ.

ನಮ್ಮದು 5 ಜನರ ಗುಂಪಾಗಿತ್ತು. ಮೂವರು ಗಾಯಗೊಂಡಿದ್ದಾರೆ. ಬಾಲಕಿಯೊಬ್ಬಳು ದೃಶ್ಯ ನೋಡಿ ಭಯಭೀತಳಾಗಿ ಮುರ್ಛೆ ಹೋದಳು. ಬಳಿಕ ಬಾಲಕಿ ಹಾಗೂ ಗಾಯಾಳುಗಳನ್ನು ಜಮ್ಮುವಿನಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಕತ್ರಾದ ನಾರಾಯಣ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ತಿಳಿಸಿದ್ದಾರೆ.

ಕತ್ರಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಜಮ್ಮುವಿನ ರಕ್ಷಣಾ ಇಲಾಖೆಯ ಪಿಆರ್‌ಒ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"ಭಯೋತ್ಪಾದನೆಯ ವಿರುದ್ಧ ಒಟ್ಟಾಗಿ ಹೋರಾಟ": ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ, ಪುಟಿನ್

Ukraine ಯುದ್ಧದ ಬಗ್ಗೆ ಭಾರತ ತಟಸ್ಥವಾಗಿಲ್ಲ, ಶಾಂತಿಯ ಪರವಾಗಿದೆ: ಪುಟಿನ್‌ ಜೊತೆಗಿನ ಮಾತುಕತೆ ವೇಳೆ ಮೋದಿ ಸಂದೇಶ; Video

ದೆಹಲಿಯಲ್ಲಿ ಇಂದು ಬಹುನಿರೀಕ್ಷಿತ ಭಾರತ-ರಷ್ಯಾ 23ನೇ ಶೃಂಗಸಭೆ: ರಾಷ್ಟ್ರಪತಿ ಭವನದಲ್ಲಿ Vladimir Putin ಗೆ ಸೇನಾಪಡೆಗಳಿಂದ ಗೌರವ; Video

RBI ವಿತ್ತೀಯ ನೀತಿ ಪ್ರಕಟ: ರೆಪೊ ದರ ಶೇ. 5.25ಕ್ಕೆ ಇಳಿಕೆ, ಗೃಹ, ವಾಹನ ಸಾಲಗಾರರಿಗೆ ಗುಡ್ ನ್ಯೂಸ್

ಉತ್ತರಾಖಂಡ: ಆಳವಾದ ಕಂದಕಕ್ಕೆ ಉರುಳಿದ ಜೀಪ್; ಭೀಕರ ಅಪಘಾತದಲ್ಲಿ ಐವರು ಸಾವು

SCROLL FOR NEXT