ಕೇದಾರನಾಥ ದೇವಾಲಯ 
ದೇಶ

ನಾಪತ್ತೆಯಾಗಿದ್ದ 1 ವರ್ಷದ ನಂತರ ಕೇದಾರನಾಥ ದೇವಾಲಯ ಬಳಿ ತೆಲಂಗಾಣ ವ್ಯಕ್ತಿಯ ಅಸ್ಥಿಪಂಜರ ಅವಶೇಷ! ಪತ್ತೆಯಾದದ್ದು ಹೇಗೆ?

ಶವದ ಬಳಿ ಪತ್ತೆಯಾದ ಬ್ಯಾಗ್‌ನಲ್ಲಿದ್ದ ಫೋನ್ ಮತ್ತು ಗುರುತಿನ ಕಾರ್ಡ್ ಮೂಲಕ ಆ ವ್ಯಕ್ತಿಯನ್ನು ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯ ರಾಜೇಶ್ವರ ರಾವ್‌ಪೇಟ್ ಗ್ರಾಮದ ನಿವಾಸಿ ನೋಮುಲಾ ರೋಶ್ವಂತ್ ಎಂದು ಗುರುತಿಸಲಾಗಿದೆ.

ರುದ್ರಪ್ರಯಾಗ: ಸುಮಾರು ಒಂದು ವರ್ಷದಿಂದ ನಾಪತ್ತೆಯಾಗಿದ್ದ ತೆಲಂಗಾಣದ ವ್ಯಕ್ತಿಯೊಬ್ಬರ ಅಸ್ಥಿಪಂಜರದ ಅವಶೇಷಗಳು ಕೇದಾರನಾಥ ದೇವಾಲಯದ ಮೇಲಿರುವ ಚೋರಬರಿ ಹಿಮನದಿಯ ಬಳಿ ಪತ್ತೆಯಾಗಿವೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಚೌರಾಬರಿ ಹಿಮನದಿ ಪ್ರದೇಶಕ್ಕೆ ಬಂದಿದ್ದ ವ್ಯಾಪಾರಿಗಳು ಮೃತದೇಹದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಪ್ರಕಾರ, ಶವದ ಬಳಿ ಪತ್ತೆಯಾದ ಬ್ಯಾಗ್‌ನಲ್ಲಿದ್ದ ಫೋನ್ ಮತ್ತು ಗುರುತಿನ ಕಾರ್ಡ್ ಮೂಲಕ ಆ ವ್ಯಕ್ತಿಯನ್ನು ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯ ರಾಜೇಶ್ವರ ರಾವ್‌ಪೇಟ್ ಗ್ರಾಮದ ನಿವಾಸಿ ನೋಮುಲಾ ರೋಶ್ವಂತ್ ಎಂದು ಗುರುತಿಸಲಾಗಿದೆ.

ತೆಲಂಗಾಣದ ಪೊಲೀಸ್ ಠಾಣೆಯಲ್ಲಿ ಕುಟುಂಬದವರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಕಳೆದ ವರ್ಷ ಆಗಸ್ಟ್ 30 ರಂದು ಕೊನೆಯದಾಗಿ ತಮ್ಮ ಕುಟುಂಬದವರೊಂದಿಗೆ ಮಾತನಾಡಿದ್ದ ಅವರು, ಉತ್ತರಾಖಂಡ್‌ನಲ್ಲಿದ್ದು, ದೆಹಲಿಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದರು ಎನ್ನಲಾಗಿದೆ.

ಕೇದಾರನಾಥದಲ್ಲಿ ನಿಯೋಜಿಸಲಾದ ಜಿಲ್ಲಾಡಳಿತದ ಪೊಲೀಸರ ತಂಡ ಮತ್ತು ಯಾತ್ರಾ ನಿರ್ವಹಣಾ ಪಡೆ (ವೈಎಂಎಫ್) ಕಾರ್ಯಕರ್ತರು ಶವ ಪತ್ತೆಯಾದ ಸ್ಥಳಕ್ಕೆ ತಲುಪಿ ಅವಶೇಷಗಳನ್ನು ಕೇದಾರನಾಥಕ್ಕೆ ತಂದರು. ನಂತರ ಅದನ್ನು ರುದ್ರಪ್ರಯಾಗ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು, ಅದನ್ನು ಅವರ ಕುಟುಂಬ ಮತ್ತು ಸ್ಥಳೀಯ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗುತ್ತದೆ.

ಪತ್ತೆಯಾದ ಗುರುತಿನ ಚೀಟಿಯ ಆಧಾರದ ಮೇಲೆ ತೆಲಂಗಾಣ ಪೊಲೀಸರು ಮತ್ತು ಭಕ್ತನ ಕುಟುಂಬವನ್ನು ಸಂಪರ್ಕಿಸಲಾಗಿದೆ ಎಂದು ಕೇದಾರನಾಥದಲ್ಲಿ ನಿಯೋಜನೆಗೊಂಡಿರುವ ಯಾತ್ರಾ ಇನ್ಸ್‌ಪೆಕ್ಟರ್ ರಾಜೀವ್ ಚೌಹಾಣ್ ಹೇಳಿದ್ದಾರೆ. ಕಳೆದ ವರ್ಷ ಆಗಸ್ಟ್ 31 ರಂದು ವ್ಯಕ್ತಿ ಕಾಣೆಯಾಗಿರುವುದು ಪತ್ತೆಯಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಳಗಾವಿ ಜಿಲ್ಲೆ ವಿಭಜನೆ: ಸಿಎಂ ಸಿದ್ದರಾಮಯ್ಯ ಭೇಟಿ ಮನವಿ ಸಲ್ಲಿಸಿದ ನಿಯೋಗ

ಬೆಳಗಾವಿ ಅಧಿವೇಶನ ಆರಂಭದಲ್ಲೇ ಕದನ ಸದ್ದು: 20 ಸಾವಿರ ರೈತರೊಂದಿಗೆ ಸುವರ್ಣ ಸೌಧಕ್ಕೆ ಇಂದು ಮುತ್ತಿಗೆ ಹಾಕಲು ಬಿಜೆಪಿ ಸಜ್ಜು

ST ವರ್ಗ ಸೇರ್ಪಡೆಗೆ ಆಗ್ರಹ: ಡಿ.15ರಂದು ಬೆಳಗಾವಿಯಲ್ಲಿ ಕುರುಬ ಸಮುದಾಯ ಬೃಹತ್ ಪ್ರತಿಭಟನೆ

ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ನೀಡುವುದು ಕೇಂದ್ರದ ಜವಾಬ್ದಾರಿಯೂ ಹೌದು: ರಾಜ್ಯ ಸರ್ಕಾರ

ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಇತಿಹಾಸವಿಲ್ಲ, ನಿಸ್ಪಕ್ಷಪಾತವಾಗಿ ಕೆಲಸ ಮಾಡಿದ್ದೇನೆ: ಬಸವರಾಜ ಹೊರಟ್ಟಿ

SCROLL FOR NEXT