'ಮತದಾರ ಅಧಿಕಾರ ಯಾತ್ರೆ'ಯಲ್ಲಿ ರಾಹುಲ್ ಗಾಂಧಿ ಹಾಗೂ ಸಿಎಂ ಸಿದ್ದರಾಮಯ್ಯ 
ದೇಶ

ಬಿಹಾರದಲ್ಲಿ ಆರಂಭವಾದ 'Voter Adhikar Yatra' ದೇಶಾದ್ಯಂತ ವಿಸ್ತರಿಸಲಿದೆ: ರಾಹುಲ್ ಗಾಂಧಿ

ಬಿಜೆಪಿ, ಆರ್‌ಎಸ್‌ಎಸ್ ಮತ್ತು ಚುನಾವಣಾ ಆಯೋಗವು "ದೇಶದಲ್ಲಿ 'ಮತ ಚೋರಿ'(ಮತಗಳನ್ನು ಕದಿಯುವುದು)ಯಲ್ಲಿ ತೊಡಗಿವೆ" ಎಂದು ಅವರು ಆರೋಪಿಸಿದರು.

ಪಾಟ್ನಾ: ದಲಿತರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರಿಗೆ ಮತದಾನದ ಹಕ್ಕಿದೆ ಎಂದು ಪ್ರತಿಪಾದಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಹಾರದಲ್ಲಿ ನಡೆಯುತ್ತಿರುವ 'ಮತದಾರ ಅಧಿಕಾರ ಯಾತ್ರೆ' ಮತಗಳ ಕಳ್ಳತನದ ವಿರುದ್ಧ ದೇಶಾದ್ಯಂತ ಒಂದು ಚಳುವಳಿಯಾಗಲಿದೆ ಎಂದು ಶನಿವಾರ ಹೇಳಿದ್ದಾರೆ.

ಇಂದು ಭೋಜ್‌ಪುರದ ಜಿಲ್ಲಾ ಕೇಂದ್ರವಾದ ಅರಾದಲ್ಲಿ ನಡೆದ ಕಾಂಗ್ರೆಸ್ ಯಾತ್ರೆ ವೇಳೆ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಎಸ್ಐಆರ್ "ಸಂವಿಧಾನ ಮತ್ತು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ದಾಳಿ" ಎಂದು ಆರೋಪಿಸಿದರು.

"ಬಿಹಾರದಿಂದ ಪ್ರಾರಂಭವಾದ 'ಮತದಾರ ಅಧಿಕಾರ ಯಾತ್ರೆ' ಜನರ ಮತಗಳ್ಳತನದ ವಿರುದ್ಧ ದೇಶಾದ್ಯಂತ ಒಂದು ಚಳುವಳಿಯಾಗಲಿದೆ" ಎಂದು ಅವರು ಹೇಳಿದರು.

ಬಿಜೆಪಿ, ಆರ್‌ಎಸ್‌ಎಸ್ ಮತ್ತು ಚುನಾವಣಾ ಆಯೋಗವು "ದೇಶದಲ್ಲಿ 'ಮತ ಚೋರಿ'(ಮತಗಳನ್ನು ಕದಿಯುವುದು)ಯಲ್ಲಿ ತೊಡಗಿವೆ" ಎಂದು ಅವರು ಆರೋಪಿಸಿದರು.

"ಎನ್‌ಡಿಎ ಸರ್ಕಾರ ಮಹಾರಾಷ್ಟ್ರ ಮತ್ತು ದೇಶದ ಇತರ ಭಾಗಗಳಲ್ಲಿ ಮತಗಳನ್ನು ಕದಿಯುವಲ್ಲಿ ಯಶಸ್ವಿಯಾಗಿದೆ. ಆದರೆ ಬಿಹಾರದಲ್ಲಿ ಬಿಜೆಪಿ ಮತ್ತು ಚುನಾವಣಾ ಆಯೋಗ ಒಂದೇ ಒಂದು ಮತವನ್ನು ಕದಿಯಲು ನಾವು ಬಿಡುವುದಿಲ್ಲ" ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'Strait of Hormuz ನಲ್ಲಿ ನೌಕಾಪಡೆ ನಿಯೋಜನೆ ಕುರಿತು ಅಮೆರಿಕ ಜತೆ ದ್ವಿಪಕ್ಷೀಯ ಮಾತುಕತೆ ಇಲ್ಲ': ಭಾರತ

Video: ಭಾರತಕ್ಕೆ ಬಿಗ್‌ ರಿಲೀಫ್‌; ಹಾರ್ಮುಜ್ ಜಲಸಂಧಿ ಮೂಲಕ ಗುಜರಾತ್ ತಲುಪಿದ LPG ಹೊತ್ತ ಶಿವಾಲಿಕ್ ನೌಕೆ!

'ಸೀನಿದರೂ ದೂಷಿಸುತ್ತಾರೆ': ನಟಿ Trisha ಬೆನ್ನಿಗೆ ನಿಂತ ನಟಿ ಖುಷ್ಬು

Video: 'ಮೀಸಲಾತಿನೇ ಮೆರಿಟ್, ಟ್ಯಾಲೆಂಟ್!' 'ಕ್ರಿಕೆಟ್ ನಲ್ಲೂ ರಿಸರ್ವೇಷನ್ ಬೇಕೇ ಬೇಕು': ನಟ ಚೇತನ್ ಅಹಿಂಸಾ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಟೆಸ್ಟ್ ನಿವೃತ್ತಿಗೆ ಆ 'ತಪ್ಪು' ಕಾರಣ? : Gautam Gambhir ಶಾಕಿಂಗ್ ಸುಳಿವು!

SCROLL FOR NEXT