ತೇಜಸ್ Mk-1A ಜೆಟ್ ವಿಮಾನ 
ದೇಶ

HAL ನಿರ್ಮಿತ ತೇಜಸ್ ಮಾರ್ಕ್-1ಎ ಫೈಟರ್ ಜೆಟ್‌ ಗಳು ಹಸ್ತಾಂತರಕ್ಕೆ ಸಿದ್ಧ: ರಕ್ಷಣಾ ಕಾರ್ಯದರ್ಶಿ

ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್ ಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಮುಂದಿನ ತಿಂಗಳು ಎರಡು ತೇಜಸ್ ಮಾರ್ಕ್-1ಎ ಫೈಟರ್ ಜೆಟ್‌ಗಳನ್ನು ತಲುಪಿಸುವ ಸಾಧ್ಯತೆ ಇದೆ.

ಬೆಂಗಳೂರು: ಮುಂದಿನ ತಿಂಗಳು ಎಚ್‌ಎಎಲ್ ತಾನು ನಿರ್ಮಿಸಿದ 2 ತೇಜಸ್ ಮಾರ್ಕ್-1ಎ ಫೈಟರ್ ಜೆಟ್‌ಗಳನ್ನು ಭಾರತೀಯ ಸೇನೆಗೆ ತಲುಪಿಸುವ ಸಾಧ್ಯತೆ ಇದೆ ಎಂದು ಕೇಂದ್ರ ರಕ್ಷಣಾ ಕಾರ್ಯದರ್ಶಿ ಆರ್ ಕೆ ಸಿಂಗ್ ಹೇಳಿದ್ದಾರೆ.

ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್ ಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಮುಂದಿನ ತಿಂಗಳು ಎರಡು ತೇಜಸ್ ಮಾರ್ಕ್-1ಎ ಫೈಟರ್ ಜೆಟ್‌ಗಳನ್ನು ತಲುಪಿಸುವ ಸಾಧ್ಯತೆ ಇದೆ.

ಎರಡು ವಿಮಾನಗಳ ವಿತರಣೆಯ ನಂತರ 97 ತೇಜಸ್ ಜೆಟ್‌ಗಳ ಹೆಚ್ಚುವರಿ ಬ್ಯಾಚ್ ಅನ್ನು ಖರೀದಿಸಲು ಸರ್ಕಾರ ಎಚ್‌ಎಎಲ್‌ನೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದೆ ಎಂದು ಆರ್ ಕೆ ಸಿಂಗ್ ಹೇಳಿದ್ದಾರೆ.

ಹಿಂದಿನ ಒಪ್ಪಂದದಡಿಯಲ್ಲಿ ತೇಜಸ್ ಮಾರ್ಕ್ 1ಎ ಜೆಟ್‌ಗಳ ವಿತರಣೆಯಲ್ಲಿ ವಿಳಂಬದ ಬಗ್ಗೆ ಭಾರತೀಯ ವಾಯುಪಡೆ (ಐಎಎಫ್) ಕಳವಳ ವ್ಯಕ್ತಪಡಿಸಿತ್ತು.

ಇದೇ ವಿಚಾರವಾಗಿ ದೆಹಲಿಯಲ್ಲಿ ನಡೆಯುತ್ತಿರುವ ರಕ್ಷಣಾ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಆರ್ ಕೆ ಸಿಂಗ್, ತೇಜಸ್ ಕುರಿತ ಆಶಾದಾಯಕ ಬೆಳವಣಿಗಗಳು ನಡೆಯುತ್ತಿದ್ದು, ಮೊದಲ ಎರಡು ವಿಮಾನಗಳನ್ನು ಸೆಪ್ಟೆಂಬರ್ ಅಂತ್ಯದ ವೇಳೆಗೆ ಶಸ್ತ್ರಾಸ್ತ್ರ ಏಕೀಕರಣದೊಂದಿಗೆ ತಲುಪಿಸಲಾಗುವುದು. ಸುಮಾರು 38 ತೇಜಸ್ ಜೆಟ್‌ಗಳು ಈಗಾಗಲೇ ಸೇವೆಯಲ್ಲಿದ್ದು, ಇನ್ನೂ 80ಕ್ಕೂ ಹೆಚ್ಚು ವಿಮಾನಗಳನ್ನು ತಯಾರಿಸಲಾಗುತ್ತಿದೆ ಎಂದು ಹೇಳಿದರು.

ಇದಕ್ಕೆ ಇಂಬು ನೀಡುವಂತೆ ಕಳೆದ ವಾರ ಕೂಡ ಕೇಂದ್ರ ಸರ್ಕಾರವು ಸುಮಾರು ರೂ. 67,000 ಕೋಟಿ ವೆಚ್ಚದಲ್ಲಿ 97 ತೇಜಸ್ ಯುದ್ಧವಿಮಾನಗಳ ಹೆಚ್ಚುವರಿ ಬ್ಯಾಚ್ ಅನ್ನು ಅನುಮೋದಿಸಿತು.

ಫೆಬ್ರವರಿ 2021 ರಲ್ಲಿ, ರಕ್ಷಣಾ ಸಚಿವಾಲಯವು ಭಾರತೀಯ ವಾಯುಪಡೆಗಾಗಿ 83 ತೇಜಸ್ Mk-1A ಜೆಟ್‌ಗಳ ಖರೀದಿಗಾಗಿ HAL ಜೊತೆ ರೂ. 48,000 ಕೋಟಿ ಒಪ್ಪಂದ ಮಾಡಿಕೊಂಡಿತ್ತು. ತೇಜಸ್ ಜೆಟ್‌ ವಿಮಾನಗಳ ವಿತರಣೆಯು ಪ್ರಾಥಮಿಕವಾಗಿ ಅಮೆರಿಕದ ರಕ್ಷಣಾ ಪ್ರಮುಖ GE ಏರೋಸ್ಪೇಸ್ ಜೆಟ್‌ಗಳಿಗೆ ಶಕ್ತಿ ತುಂಬಲು ತನ್ನ ಏರೋ ಎಂಜಿನ್‌ಗಳ ಪೂರೈಕೆ ಮಾಡಬೇಕಿತ್ತು. ಆದರೆ ಈ ಸಂಸ್ಥೆ ಹಲವಾರು ಗಡುವುಗಳನ್ನು ತಪ್ಪಿಸಿಕೊಂಡ ಕಾರಣ ಭಾರತದಲ್ಲಿ ಎಚ್ ಎಎಲ್ ಜೆಟ್ ವಿಮಾನ ತಯಾರಿಕೆಗೆ ವಿಳಂಬವಾಗಿದೆ ಎನ್ನಲಾಗಿದೆ.

ಈ ಕುರಿತು ಮಾತನಾಡಿದ ಆರ್ ಕೆ ಸಿಂಗ್, "HAL ಸಂಪೂರ್ಣ ಪ್ಯಾಕೇಜ್ ಅನ್ನು ಒಳಗೊಂಡ ಎರಡು ತೇಜಸ್‌ಗಳನ್ನು ವಿತರಿಸಿದ ನಂತರವೇ ನಾವು ಈ ಒಪ್ಪಂದಕ್ಕೆ ಸಹಿ ಹಾಕುತ್ತೇವೆ ಎಂದು ನಾನು HAL ಗೆ ಸ್ಪಷ್ಟಪಡಿಸಿದ್ದೇನೆ. HAL 'ನಾಲ್ಕರಿಂದ ಐದು ವರ್ಷಗಳವರೆಗೆ ಆರ್ಡರ್ ಪುಸ್ತಕವನ್ನು ಹೊಂದಿರುತ್ತದೆ. ಆಶಾದಾಯಕವಾಗಿ, ಅವರು (HAL) ಈ ವೇದಿಕೆಯನ್ನು ಪರಿಪೂರ್ಣಗೊಳಿಸಲು, ರಾಡಾರ್ ಮತ್ತು ಭಾರತೀಯ ಶಸ್ತ್ರಾಸ್ತ್ರಗಳನ್ನು ಸಂಯೋಜಿಸಲು ಸಾಧ್ಯವಾಗುತ್ತದೆ. ಇದರಿಂದಾಗಿ ಅದು ಸುಖೋಯ್ ಜೊತೆಗೆ ನಮಗೆ ಕೆಲಸ ಮಾಡುತ್ತದೆ" ಎಂದು ಹೇಳಿದರು.

ತೇಜಸ್ ಜೆಟ್ ಗಳ ಸೇರ್ಪಡೆ ಹೊರತಾಗಿಯೂ ವಾಯುಪಡೆ ಸ್ಕ್ವಾಡ್ರನ್ ಗಳಲ್ಲಿ ಇನ್ನೂ ಅಂತರವಿರುತ್ತದೆ ಮತ್ತು ಆ ಅಂತರವನ್ನು ತುಂಬಲು ನಾವು ಬೇರೆ ಕೆಲವು ಆಯ್ಕೆಗಳನ್ನು ನೋಡಬೇಕಾಗುತ್ತದೆ" ಎಂದು ಹೇಳುವ ಮೂಲಕ ಆರ್ ಕೆ ಸಿಂಗ್ IAF ಗಾಗಿ ಹೆಚ್ಚಿನ ವೇದಿಕೆಗಳ ಖರೀದಿಯ ಬಗ್ಗೆ ಸುಳಿವು ನೀಡಿದರು.

ಅಂದಹಾಗೆ ಸಿಂಗಲ್-ಎಂಜಿನ್ Mk-1A IAF ನ MiG-21 ಯುದ್ಧವಿಮಾನಗಳಿಗೆ ಬದಲಿಯಾಗಿರುತ್ತದೆ. IAF ತನ್ನ ಫೈಟರ್ ಸ್ಕ್ವಾಡ್ರನ್‌ಗಳ ಸಂಖ್ಯೆ ಅಧಿಕೃತವಾಗಿ ಅನುಮೋದಿಸಲಾದ 42 ರಿಂದ 31ಕ್ಕೆ ಇಳಿದಿರುವುದರಿಂದ ಯುದ್ಧವಿಮಾನಗಳನ್ನು ಸೇರಿಸಿಕೊಳ್ಳಲು ಎದುರು ನೋಡುತ್ತಿದೆ. ತೇಜಸ್ ಒಂದು ಸಿಂಗಲ್-ಎಂಜಿನ್ ಬಹು-ಪಾತ್ರದ ಯುದ್ಧವಿಮಾನವಾಗಿದ್ದು, ಹೆಚ್ಚಿನ ಅಪಾಯದ ವಾಯು ಪರಿಸರದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ವಾಯು ರಕ್ಷಣೆ, ಕಡಲ ವಿಚಕ್ಷಣ ಮತ್ತು ದಾಳಿಯ ಪಾತ್ರಗಳನ್ನು ಕೈಗೊಳ್ಳಲು ಇದನ್ನು ವಿನ್ಯಾಸಗೊಳಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸುಪ್ರೀಂ ಕೋರ್ಟ್​ನಲ್ಲೂ ಪ್ರಜ್ವಲ್‌ಗೆ ಹಿನ್ನಡೆ; ಅತ್ಯಾಚಾರ ಪ್ರಕರಣ ಬೇರೆ ಕೋರ್ಟ್ ಗೆ ವರ್ಗಾವಣೆ ಕೋರಿದ್ದ ಅರ್ಜಿ ವಜಾ!

ರಾಜ್ಯದ ರೈತರ ನೆರವಿಗೆ ಧಾವಿಸಿದ ಕೇಂದ್ರ; MSP ಅಡಿ 9.67 ಲಕ್ಷ ಟನ್ ತೊಗರಿ ಖರೀದಿಸಲು ಒಪ್ಪಿಗೆ

ಬಿಜೆಪಿಯವರು ದ್ವೇಷ ಭಾಷಣದ ಪಿತಾಮಹರು: ಬ್ಯಾಲೆಟ್ ಇದ್ದಾಗ ಮತ ಕಳ್ಳತನ ಹೇಗೆ ಸಾಧ್ಯ? ಡಿ ಕೆ ಶಿವಕುಮಾರ್‌

ವ್ಯಾಪಾರ ಒಪ್ಪಂದ ಮಾತುಕತೆ ಪುನರಾರಂಭವಾಗುತ್ತಿದ್ದಂತೆ ಅಮೆರಿಕದಿಂದ ಮಿಶ್ರ ಪ್ರತಿಕ್ರಿಯೆ

Goa nightclub fire: ಥೈಲ್ಯಾಂಡ್ ನಲ್ಲಿ ನೈಟ್ ಕ್ಲಬ್ ಮಾಲೀಕರಾದ ಸೈರಬ್- ಗೌರವ್ ಲುತ್ರಾ ಸೋದರರ ಬಂಧನ

SCROLL FOR NEXT