ನಮ್ಮನ್ನು ಬಿಟ್ಟುಹೋಗದಂತೆ ಪರಿಪರಿಯಾಗಿ ಬೇಡಿಕೊಳ್ಳುತ್ತಿರುವ ಮಕ್ಕಳು 
ದೇಶ

ಮಕ್ಕಳ ಕಣ್ಣೀರಿಗೂ ಕರಗದ ಮನಸ್ಸು: ವಿಚ್ಛೇನದ ನೀಡಿ ಪ್ರಿಯಕರನ ಜೊತೆ ಹೋಗುತ್ತಿದ್ದ ತಾಯಿಯನ್ನು ಪರಿಪರಿಯಾಗಿ ಬೇಡಿದ ಮಕ್ಕಳು, Video!

ಎಷ್ಟೇ ಕಷ್ಟಬಂದರೂ ತಾಯಿ ತನ್ನ ಮಕ್ಕಳನ್ನು ಬಿಟ್ಟುಕೊಡುವುದಿಲ್ಲ. ಮಕ್ಕಳಿಗಾಗಿಯೇ ತನ್ನ ಜೀವನವನ್ನು ಮುಡುಪಾಗಿಡುತ್ತಾಳೆ. ಆದರೆ ಇಲ್ಲೊಂದು ದೃಶ್ಯ ಎಲ್ಲರ ಮನಕಲಕುವಂತಿದೆ.

ಎಷ್ಟೇ ಕಷ್ಟಬಂದರೂ ತಾಯಿ ತನ್ನ ಮಕ್ಕಳನ್ನು ಬಿಟ್ಟುಕೊಡುವುದಿಲ್ಲ. ಮಕ್ಕಳಿಗಾಗಿಯೇ ತನ್ನ ಜೀವನವನ್ನು ಮುಡುಪಾಗಿಡುತ್ತಾಳೆ. ಆದರೆ ಇಲ್ಲೊಂದು ದೃಶ್ಯ ಎಲ್ಲರ ಮನಕಲಕುವಂತಿದೆ. ಹೌದು... ಇಲ್ಲೊಬ್ಬ ತಾಯಿ ಗಂಡನಿಗೆ ವಿಚ್ಛೇನದ ನೀಡಿ ಲವರ್ ಜೊತೆ ಹೋಗಿದ್ದಾಳೆ. ಈ ವೇಳೆ ಅಮ್ಮ ನಮ್ಮನ್ನು ಬಿಟ್ಟು ಹೋಗುತ್ತಿದ್ದಾಳೆ ಎಂದು ಅರಿತ ಮಕ್ಕಳು ಆಕೆಯನ್ನು ಪರಿಪರಿಯಾಗಿ ಬೇಡಿಕೊಳ್ಳುತ್ತಾರೆ. ಅಮ್ಮ ನೀನು ನಮಗೆ ಬೇಕು ಬಿಟ್ಟುಹೋಗಬೇಡಮ್ಮ ಎಂದು ಮಕ್ಕಳು ಎಷ್ಟೇ ಗೊಗರೆದರು ತಾಯಿ ಮಕ್ಕಳಿಗೆ ಗದರುತ್ತಾಳೆ. ತನ್ನ ಕೈ ಹಿಡಿದುಕೊಂಡಿದ್ದ ಮಗಳನ್ನು ದೂರಕ್ಕೆ ದೂಡುತ್ತಾಳೆ. ಅಂತು ಮಕ್ಕಳ ಕಣ್ಣೀರಿಗೂ ಕರಗದ ಆ ತಾಯಿಯ ಮನಸ್ಸು ನಿಮಗಿಂತ ನನಗೆ ನನ್ನ ಪ್ರಿಯಕರ ಮುಖ್ಯ ಎಂದು ಬಿಟ್ಟು ಹೋಗುತ್ತಾಳೆ. ಈ ಘಟನೆ ಎಂತಹವರ ಮನಸ್ಸು ಕದಡುವಂತೆ ಮಾಡುತ್ತದೆ. ಸದ್ಯ ಈ ಘಟನೆ ಎಲ್ಲಿ ನಡೆದಿದೆ ಎಂಬುದು ವರದಿಯಾಗಿಲ್ಲ. ಮಿಸ್ ಮೋಹಿನಿ ಎಂಬುವವರು ಎಕ್ಸ್​​ನಲ್ಲಿ ವೈರಲ್ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲಿನ ರೀತಿ ರಿವಾಜುಗಳನ್ನು ನೋಡಿದರೆ ಇದು ಉತ್ತರ ಭಾರತದಲ್ಲಿ ನಡೆದಿದೆ ಎಂಬುದು ತಿಳಿಯುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್

Flydubai ಕಾಕ್‌ಪಿಟ್ ದಾಳಿ: ಸಹ ಪೈಲಟ್ ಗುರುತು ಬಹಿರಂಗ

FlyDubai ವಿಮಾನ ಹಾರಾಟಕ್ಕೆ ಒಮಾನ್ ನಲ್ಲಿ ನಿಷೇಧ: ಪತನಕ್ಕೆ ಯತ್ನಿಸಿದ್ದ ಸಹ ಪೈಲಟ್‌ ಉಗ್ರವಾದ ಹಿನ್ನಲೆಯವನೇ?

ಪ್ರೇಮಾನಂದ ಮಹಾರಾಜರ ಶಿಷ್ಯ ಆತ್ಮಹತ್ಯೆಗೂ ಮುನ್ನ ಏನಾಯಿತು? ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ!

KPS ಯೋಜನೆ ಅನುಷ್ಠಾನಕ್ಕೆ ಕರ್ನಾಟಕಕ್ಕೆ ಎಡಿಬಿ ಯಿಂದ 1,750 ಕೋಟಿ ರೂ ಸಾಲ: ಶಾಲೆಗಳಿಗೆ ಕಾರ್ಯಕ್ಷಮತೆಯ ಗುರಿ ನಿಗದಿ!