ನವದೆಹಲಿ: ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಅವರು ಸೋಮವಾರ ಸಂಸತ್ತಿನ ಆವರಣಕ್ಕೆ ನಾಯಿಯೊಂದನ್ನು ಕರೆತಂದಿದ್ದು, ಅದು ಬೀದಿ ನಾಯಿ ಎಂದು ಹೇಳಿಕೊಂಡರು ಮತ್ತು ಅದಕ್ಕೆ ಇತರ ಸಂಸದರ ಆಕ್ಷೇಪಣೆಗಳನ್ನು ಸ್ಪಷ್ಟ ತಳ್ಳಿಹಾಕಿದರು. "ನಿಜವಾದ ನಾಯಿಗಳು ಸಂಸತ್ತಿನಲ್ಲಿ ಕುಳಿತಿವೆ" ಮತ್ತು ಪ್ರತಿದಿನ ಜನರನ್ನು ಕಚ್ಚುತ್ತಿವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.
ಇಂದು ಬೆಳಗ್ಗೆ ಸಂಸತ್ತಿಗೆ ಹೋಗುವಾಗ ನಾಯಿಮರಿಯನ್ನು ರಕ್ಷಿಸಿದೆ ಎಂದು ಚೌಧರಿ ವಿವರಿಸಿದರು. ರಸ್ತೆಯಲ್ಲಿ ಸ್ಕೂಟರ್-ಕಾರು ಡಿಕ್ಕಿ ಹೊಡೆದಿದ್ದರಿಂದ ಗಾಯಗೊಂಡಿದ್ದ ನಾಯಿಮರಿಯನ್ನು ಗಮನಿಸಿದ ಕಾಂಗ್ರೆಸ್ ನಾಯಕಿ, ಅದನ್ನು ತಮ್ಮ ಕಾರಿನಲ್ಲಿ ಸಂಸತ್ತಿಗೆ ಕರೆ ತಂದರು. ಸ್ವಲ್ಪ ಸಮಯದ ಆ ನಾಯಿಮರಿ ಕಾಂಗ್ರೆಸ್ ಸಂಸದ ಕಾರಿನಿಂದ ಹೊರಟುಹೋಯಿತು.
"ಏನಾದರೂ ಕಾನೂನು ಇದೆಯೇ? ನಾನು ದಾರಿಯಲ್ಲಿ ಹೋಗುತ್ತಿದ್ದೆ. ಕಾರು ಡಿಕ್ಕಿಯಿಂದ ಗಾಯಗೊಂಡಿದ್ದ ಈ ಪುಟ್ಟ ನಾಯಿಮರಿ ರಸ್ತೆಯಲ್ಲಿ ಅಲೆದಾಡುತ್ತಿತ್ತು. ಅದು ಮತ್ತೊಂದು ವಾಹನದ ಚಕ್ರಕ್ಕೆ ಸಿಲುಕಬಹುದು ಎಂದು ನಾನು ಅದನ್ನು ಎತ್ತಿಕೊಂಡು, ಕಾರಿನಲ್ಲಿ ಇರಿಸಿ, ಸಂಸತ್ತಿಗೆ ಕರೆತಂದೆ. ಕಾರು ಹೊರಟುಹೋಯಿತು ಆದರೆ ನಾಯಿಯೂ ಹಾಗೆಯೇ ಇತ್ತು" ಚೌಧರಿ ANI ಗೆ ತಿಳಿಸಿದರು.
ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ(ಎನ್‌ಡಿಎ) ಯಾವುದೇ ಸಂಸದರನ್ನು ಹೆಸರಿಸದೆ, ಆಡಳಿತ ಪಕ್ಷವನ್ನು ಟೀಕಿಸಿದ ಚೌಧರಿ, "ನಿಜವಾದ ನಾಯಿಗಳು ಸಂಸತ್ತಿನಲ್ಲಿ ಕುಳಿತಿವೆ" ಮತ್ತು ಅದರ ಬಗ್ಗೆ ಯಾವುದೇ ಚರ್ಚೆ ನಡೆಯುವುದಿಲ್ಲ ಎಂದರು.
"ಕಚ್ಚುವ ನಿಜವಾದ ನಾಯಿಗಳು ಸಂಸತ್ತಿನಲ್ಲಿ ಕುಳಿತಿವೆ. ಅವರು ಸರ್ಕಾರವನ್ನು ನಡೆಸುತ್ತಾರೆ. ನಾವು ಮೂಕ ಪ್ರಾಣಿಯನ್ನು ನೋಡಿಕೊಳ್ಳುತ್ತೇವೆ ಮತ್ತು ಇದು ದೊಡ್ಡ ವಿಷಯ ಮತ್ತು ಚರ್ಚೆಯ ವಿಷಯವಾಗಿದೆ. ಸರ್ಕಾರಕ್ಕೆ ಬೇರೆ ಕೆಲಸವಿಲ್ಲವೇ? ನಾನು ನಾಯಿಯನ್ನು ಮನೆಗೆ ಕಳುಹಿಸಿ ಮನೆಯಲ್ಲಿಯೇ ಇಟ್ಟುಕೊಳ್ಳಲು ಹೇಳಿದೆ... ಸಂಸತ್ತಿನಲ್ಲಿ ಕುಳಿತು ಪ್ರತಿದಿನ ನಮ್ಮನ್ನು ಕಚ್ಚುವವರ ಬಗ್ಗೆ ನಾವು ಮಾತನಾಡುವುದಿಲ್ಲ" ಎಂದು ವಾಗ್ದಾಳಿ ನಡೆಸಿದರು.
ಸಂಸತ್ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ವಿಶೇಷವಾಗಿ ಲೋಕಸಭೆಯಲ್ಲಿ, ದೇಶಾದ್ಯಂತ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಕುರಿತು ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷದ ಸಂಸದರು ಪದೇ ಪದೇ ಸರ್ಕಾರದ ಘೋಷಣೆಗಳನ್ನು ಕೂಗಿದರು ಮತ್ತು ಪ್ರತಿಭಟನೆ ನಡೆಸಿದರು.