ರೇವಂತ್ ರೆಡ್ಡಿ  
ದೇಶ

ಕುಡುಕರಿಗೊಬ್ಬ, ಬ್ಯಾಚುಲರ್‌ಗಳಿಗೆ ಮತ್ತೊಬ್ಬ ದೇವರು: ಹಿಂದೂಗಳಲ್ಲಿ ಎಷ್ಟು ದೇವರಿದ್ದಾರೆ: 3 ಕೋಟಿ ಇದ್ದಾರಾ? ವಿವಾದವೆಬ್ಬಿಸಿದ ರೇವಂತ್ ರೆಡ್ಡಿ ಹೇಳಿಕೆ

ಹಿಂದೂಗಳು ಎಷ್ಟು ದೇವರುಗಳನ್ನು ನಂಬುತ್ತಾರೆ? ಮೂರು ಕೋಟಿ? ಇಷ್ಟೊಂದು ದೇವರುಗಳು ಯಾಕಿರಬೇಕು? ಬ್ರಹ್ಮಚಾರಿಗಳಿಗೆ ಹನುಮಂತ ದೇವರಿದ್ದಾರೆ

ಹೈದರಾಬಾದ್: 3 ಕೋಟಿ ಹಿಂದೂ ದೇವತೆಗಳು, ಪ್ರತಿಯೊಂದು ಸಂದರ್ಭಕ್ಕೂ ಒಬ್ಬ ದೇವರು ಎಂಬ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಹಗುರವಾದ ಹೇಳಿಕೆಗಳು ರಾಜಕೀಯ ವಿವಾದಕ್ಕೆ ಕಾರಣವಾಗಿವೆ.

ರೆಡ್ಡಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಿಂದೂಗಳು ಎಷ್ಟು ದೇವರುಗಳನ್ನು ನಂಬುತ್ತಾರೆ? ಮೂರು ಕೋಟಿ? ಇಷ್ಟೊಂದು ದೇವರುಗಳು ಯಾಕಿರಬೇಕು? ಬ್ರಹ್ಮಚಾರಿಗಳಿಗೆ ಹನುಮಂತ ದೇವರಿದ್ದಾರೆ. ಎರಡು ಬಾರಿ ಮದುವೆಯಾಗುವವರಿಗೆ ಬೇರೆ ದೇವರು ಇರುತ್ತಾರೆ. ಕುಡಿಯುವವರಿಗೆ ಬೇರೆ ದೇವರು ಇರುತ್ತಾರೆ. ಕೋಳಿ ಬಲಿ ನೀಡುವವರಿಗೆ ಬೇರೆ ದೇವರು ಇರುತ್ತಾರೆ. ಬೇಳೆ ಮತ್ತು ಅನ್ನ ತಿನ್ನುವವರಿಗೆ ಬೇರೆ ದೇವರು ಇರುತ್ತಾರೆ. ಪ್ರತಿಯೊಂದು ಗುಂಪಿಗೂ ತನ್ನದೇ ಆದ ದೇವರು ಇರುತ್ತದೆ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.

ಹಿಂದೂಗಳಲ್ಲಿ ಎಷ್ಟು ದೇವರಿದ್ದಾರೆ. 3 ಕೋಟಿ ಇದ್ದಾರಾ?. ಮದುವೆ ಆಗದವರಿಗೆ ಹನುಮಂತ ಇದ್ದಾನೆ. 2 ಮದುವೆಯಾದವರಿಗೆ ಒಬ್ಬ ದೇವರಿದ್ದಾನೆ. ಮದ್ಯ ಕುಡಿಯುವವರಿಗೆ ಇನ್ನೊಬ್ಬ ದೇವರಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಯಲ್ಲಮ್ಮ, ಪೋಚಮ್ಮ, ಮೈಸಮ್ಮ, ಇವರುಗಳಿಗೆ ನೀರಾ ಸುರಿಯಬೇಕು, ಕೋಳಿ ಕುಯ್ಯಬೇಕು, ಎಲ್ಲರಿಗೂ ಒಂದೊಂದು ದೇವರಿದ್ದಾರೆ ಎಂದು ಹೇಳುವ ಮೂಲಕ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ.

ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೇಳಿಕೆಗೆ ತೆಲಂಗಾಣ ಬಿಜೆಪಿ ಕಿಡಿಕಾರಿದೆ. ‘ಸಿಎಂ ರೇವಂತ್ ರೆಡ್ಡಿ ಮತ್ತೊಮ್ಮೆ ಹಿಂದೂ ದೇವತೆಗಳ ವಿರುದ್ಧ ವಿಷ ಕಾರುವ ಮೂಲಕ ಮತ್ತು ಕಾಂಗ್ರೆಸ್ ಪಕ್ಷದ ಒಡಲಾಳದಲ್ಲಿರೋ ಹಿಂದೂಫೋಬಿಕ್ ಡಿಎನ್‌ಎಯನ್ನು ಬಹಿರಂಗಪಡಿಸುವ ಮೂಲಕ ಸಭ್ಯತೆ ಗೆರೆಯನ್ನು ದಾಟಿದ್ದಾರೆ’ ಎಂದು ಹೇಳಿದೆ. ಇದು ತಮಾಷೆಯಲ್ಲ. ಇದು ನಾಲಿಗೆ ಜಾರಿ ನುಡಿದ ಮಾತಲ್ಲ. ಇದು ಹಿಂದೂ ಸಂಪ್ರದಾಯಗಳನ್ನು ಅವಹೇಳನ ಮಾಡುವ ಮತ್ತು ಭಕ್ತಾದಿಗಳನ್ನು ಅವಮಾನಿಸಲೆಂದೇ ಉದ್ದೇಶಪೂರ್ವಕವಾಗಿ ನೀಡಿದ ಹೇಳಿಕೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಿತ್ವಾ ಚಂಡಮಾರುತಕ್ಕೆ ಶ್ರೀಲಂಕಾ ತತ್ತರ: ನೆರವು ನೀಡುವ ವಿಮಾನಗಳಿಗೆ ಅನುಮತಿ ವಿಳಂಬ, ಪಾಕ್ ಆರೋಪದ ವಿರುದ್ಧ ಭಾರತ ತೀವ್ರ ಕಿಡಿ

ಬಾಗಲಕೋಟೆಯಲ್ಲಿ ಭೀಕರ ರಸ್ತೆ ಅಪಘಾತ: ಕಬ್ಬಿನ ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ; ಸ್ಥಳದಲ್ಲೇ ನಾಲ್ವರು ಯುವಕರ ದುರ್ಮರಣ

Imran Khan ಸಾವಿನ ಊಹಾಪೋಹ ನಡುವೆ ಜೈಲಿನಲ್ಲಿ ಮಾಜಿ ಪ್ರಧಾನಿ ಭೇಟಿಯಾಗಿ ಬಂದ ಸಹೋದರಿ ಉಜ್ಮಾ ಖಾನಮ್ ಹೇಳಿದ್ದೇನು?

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಇದ್ದ ವೇದಿಕೆಗೆ ನುಗ್ಗಿದ ಆಗಂತುಕ!

ದರ್ಶನ್ ಲಾಕಪ್ ಡೆತ್: ಇನ್ಸ್ ಪೆಕ್ಟರ್ ಶಿವಕುಮಾರ್ ಸೇರಿ 4 ಮಂದಿ ಅಮಾನತು!

SCROLL FOR NEXT