ಕಂಗನಾ ರನೌತ್ 
ದೇಶ

ಪ್ರಧಾನಿ ಮೋದಿ ಸನಾತನ ಧರ್ಮದ ರಾಯಭಾರಿ: ಕಂಗನಾ ರನೌತ್

ಸಂಸತ್ತಿನ ಹೊರಗೆ ಮಾತನಾಡಿದ ಕಂಗನಾ ರನೌತ್, “ಗೀತೆ ಸಾರ್ವತ್ರಿಕ ಸತ್ಯದ ಪರಂಪರೆಯಾಗಿದೆ. ನಮ್ಮ ಪ್ರಧಾನಿ ಸನಾತನ ಧರ್ಮ ಮತ್ತು ಭಾರತೀಯ ಸಂಸ್ಕೃತಿಯ ರಾಯಭಾರಿ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಭಗವದ್ಗೀತೆಯ ಪ್ರತಿಯನ್ನು ಗಿಫ್ಟ್ ನೀಡಿದ್ದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದೆ ಕಂಗನಾ ರನೌತ್, ಗೀತೆ ಸಾರ್ವತ್ರಿಕ ಸತ್ಯದ ಪರಂಪರೆಯನ್ನು ಪ್ರತಿನಿಧಿಸುತ್ತದೆ ಮತ್ತು ಪ್ರಧಾನಿ ಮೋದಿ ಸನಾತನ ಧರ್ಮ ಮತ್ತು ಭಾರತೀಯ ಸಂಸ್ಕೃತಿಯ ರಾಯಭಾರಿ ಎಂದು ಶುಕ್ರವಾರ ಹೇಳಿದ್ದಾರೆ.

ಸಂಸತ್ತಿನ ಹೊರಗೆ ಮಾತನಾಡಿದ ಕಂಗನಾ ರನೌತ್, “ಗೀತೆ ಸಾರ್ವತ್ರಿಕ ಸತ್ಯದ ಪರಂಪರೆಯಾಗಿದೆ. ನಮ್ಮ ಪ್ರಧಾನಿ ಸನಾತನ ಧರ್ಮ ಮತ್ತು ಭಾರತೀಯ ಸಂಸ್ಕೃತಿಯ ರಾಯಭಾರಿ. ಗೀತೆಯಲ್ಲಿರುವ ಸತ್ಯವು ಯಾವಾಗಲೂ ನಮಗೆ ಸ್ಫೂರ್ತಿ ನೀಡುತ್ತದೆ. ಧರ್ಮಗ್ರಂಥಗಳು ಕರ್ಮ, ಭಾವನೆಗಳು ಮತ್ತು ಕುಟುಂಬದ ಬಗ್ಗೆ ಆಳವಾದ ಬೋಧನೆಗಳನ್ನು ಹೊಂದಿವೆ. ಅಧ್ಯಕ್ಷ ಪುಟಿನ್ ಈ ಗೀತೆಯನ್ನು ಓದಿದರೆ, ಭಾರತ, ನಮ್ಮ ಮಣ್ಣು ಮತ್ತು ನಮ್ಮ ಜನರೊಂದಿಗಿನ ಅವರ ಬಾಂಧವ್ಯ ಇನ್ನಷ್ಟು ಬಲಗೊಳ್ಳುತ್ತದೆ” ಎಂದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ಮನೋಜ್ ತಿವಾರಿ ಅವರು, “ನರೇಂದ್ರ ಮೋದಿ ಈ ದೇಶದ ಸಂಸ್ಕೃತಿಗೆ ಆಶೀರ್ವಾದವಾಗಿ ಬಂದಿದ್ದಾರೆ. ತಮ್ಮ ಕರ್ತವ್ಯಗಳನ್ನು ನಿರ್ವಹಿಸುವವರು ಮಾತ್ರ ಮುಂದುವರಿಯಬೇಕು - ಫಲಿತಾಂಶದ ಬಗ್ಗೆ ಚಿಂತಿಸದೆ ತಮ್ಮ ಕರ್ತವ್ಯವನ್ನು ಮಾಡಬೇಕು ಮತ್ತು ಯಾವಾಗಲೂ ನೀತಿವಂತರಾಗಿ ವರ್ತಿಸಬೇಕು ಎಂದು ಗೀತೆ ಕಲಿಸುತ್ತದೆ. ಅವರು ಈ ಸಂದೇಶವನ್ನು ಸಾರುತ್ತಿದ್ದರೆ. ಅದು ಅರ್ಥಪೂರ್ಣ ಮತ್ತು ಪ್ರಸ್ತುತವಾಗಿದೆ” ಎಂದರು.

ಗುರುವಾರ, ಪ್ರಧಾನಿ ಮೋದಿ ಅವರು ಅಧ್ಯಕ್ಷ ಪುಟಿನ್ ಅವರಿಗೆ ಭಗವದ್ಗೀತೆಯ ರಷ್ಯನ್ ಅನುವಾದವನ್ನು ಪ್ರದಾನ ಮಾಡಿದರು. ಇದು ವಿಶ್ವಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿಯ ಶಾಶ್ವತ ಮೂಲವಾಗಿದೆ ಎಂದು ಬಣ್ಣಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ