ಕೆ.ಸಿ. ವೇಣುಗೋಪಾಲ್ 
ದೇಶ

ಮನ್ರೇಗಾಗೆ ಮರು ನಾಮಕರಣ: ಕ್ರಾಂತಿಕಾರಿ ಯೋಜನೆಯ 'ಕ್ರೆಡಿಟ್' ತೆಗೆದುಕೊಳ್ಳಲು ಪ್ರಧಾನಿ ಹುನ್ನಾರ- ಕಾಂಗ್ರೆಸ್

MGNREGAಗೆ ಮರು ನಾಮಕರಣ ಮತ್ತು ಕೆಲಸದ ದಿನಗಳ ಸಂಖ್ಯೆಯನ್ನು ಹೆಚ್ಚಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ.

ನವದೆಹಲಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (MGNREGA)ಗೆ ಮರುನಾಮಕರಣ ಮಾಡುವ ಮಸೂದೆಗೆ ಸಂಪುಟ ಅನುಮೋದನೆ ನೀಡುವುದರೊಂದಿಗೆ, ಪ್ರಧಾನಿ ನರೇಂದ್ರ ಮೋದಿ ಅವರು ಕ್ರೆಡಿಟ್ ಪಡೆಯಲು ಈ ರೀತಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ.

ಈ ಕ್ರಮವು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯಿಸಿದ ಯೋಜನೆ ಬಗ್ಗೆ ಕಾಗದದ ಮೇಲಿನ ಬದಲಾವಣೆಯಲ್ಲದೆ ಬೇರೇನೂ ಅಲ್ಲ ಎಂದು ಹೇಳಿದೆ. MGNREGAಗೆ ಮರು ನಾಮಕರಣ ಮತ್ತು ಕೆಲಸದ ದಿನಗಳ ಸಂಖ್ಯೆಯನ್ನು ಹೆಚ್ಚಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಪೂಜ್ಯ ಬಾಪು ಗ್ರಾಮೀಣ ರೋಜ್‌ಗಾರ್ ಯೋಜನೆ': ಮನ್ರೇಗಾ ಯೋಜನೆಯನ್ನು ಈಗ 'ಪೂಜ್ಯ ಬಾಪು ಗ್ರಾಮೀಣ ರೋಜ್‌ಗಾರ್ ಯೋಜನೆ' ಎಂದು ಮರುನಾಮಕರಣ ಮಾಡಲಾಗುತ್ತಿದ್ದು, ಕೆಲಸದ ದಿನಗಳ ಸಂಖ್ಯೆಯನ್ನು ಪ್ರಸ್ತುತ 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಲಾಗುತ್ತಿದೆ ಎಂದು ಮೂಲಗಳು ಉಲ್ಲೇಖಿಸಿವೆ.

ಒಂದು ಕಾಲದಲ್ಲಿ ಮನ್ರೇಗಾ ಯೋಜನೆಯನ್ನು "ವೈಫಲ್ಯದ ಜೀವಂತ ಸ್ಮಾರಕ" ಎಂದು ಕರೆದಿದ್ದ ಪ್ರಧಾನಿ, ಈಗ ಕ್ರಾಂತಿಕಾರಿ ಯೋಜನೆಯ ಕ್ರೆಡಿಟ್ ಪಡೆಯಲು ಮರುನಾಮಕರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಘಟನೆಯ ಕೆ ಸಿ ವೇಣುಗೋಪಾಲ್ ಹೇಳಿದ್ದಾರೆ.

ಇದು ನಮ್ಮ ರಾಷ್ಟ್ರೀಯ ಮನಸ್ಸಿನಿಂದ ಮಹಾತ್ಮ ಗಾಂಧಿಯನ್ನು ವಿಶೇಷವಾಗಿ ಭಾರತದ ಆತ್ಮವು ವಾಸಿಸುವ ಹಳ್ಳಿಗಳಿಂದ ಅಳಿಸುವ ಇನ್ನೊಂದು ಮಾರ್ಗವಾಗಿದೆ. ಈ ಕ್ರಮವು ಕಾಗದದ ಬದಲಾವಣೆಯಲ್ಲದೆ ಬೇರೇನೂ ಅಲ್ಲ ಎಂದು ವೇಣುಗೋಪಾಲ್ ಟೀಕಾ ಪ್ರಹಾರ ನಡೆಸಿದ್ದಾರೆ.

ಮನ್ರೇಗಾ ಕಾರ್ಮಿಕರು ಹೆಚ್ಚಿನ ವೇತನಕ್ಕೆ ಒತ್ತಾಯಿಸುತ್ತಿದ್ದಾರೆ, ಆದರೆ ಕೇಂದ್ರವು ವರ್ಷದಿಂದ ವರ್ಷಕ್ಕೆ ಯೋಜನೆಗೆ ಮೀಸಲಿಟ್ಟ ಹಣವನ್ನು ಕಡಿಮೆ ಮಾಡುತ್ತಿದೆ. ರಾಶಿ ರಾಶಿ ಬಾಕಿಯಿದೆ. ಇದು ನಿಧಾನಗವಾಗಿ ಯೋಜನೆಯನ್ನು ಕಿತ್ತುಹಾಕಲು ಮಾಡಲಾಗುತ್ತಿರುವ ಹುನ್ನಾರವಾಗಿದೆ. ವಾಸ್ತವದಲ್ಲಿ ಈ ಸರ್ಕಾರ ಕಲ್ಯಾಣದ ಉದ್ದೇಶವನ್ನು ಹೊಂದಿಲ್ಲ. ಆಲೋಚನೆಗಳು ಖಾಲಿಯಾದಾಗ ಕೇವಲ ನೆಪವನ್ನು ಹಾಕುತ್ತಿದೆ ಎಂದು ವೇಣುಗೋಪಾಲ್ ಆರೋಪಿಸಿದ್ದಾರೆ.

ಮಿಸ್ಟರ್ ಮೋದಿ, ನಿಮಗೆ ಬೇಕಾದುದನ್ನು ಮರುನಾಮಕರಣ ಮಾಡಿ, ಭಾರತದ ಪ್ರತಿಯೊಂದು ಹಳ್ಳಿಗೂ ಕ್ರಾಂತಿಕಾರಿ ಯೋಜನೆಯನ್ನು ತಂದವರು ಡಾ. ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಅವರು ಎಂದು ಜನರಿಗೆ ತಿಳಿದಿದೆ ಎಂದು ಅವರು ಹೇಳಿದ್ದಾರೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, MGNREGA ಅಥವಾ ನರೇಗಾ ಎಂದು ಪ್ರಸಿದ್ಧವಾಗಿದೆ. ಇದು ಗ್ರಾಮೀಣ ಪ್ರದೇಶದ ಕುಟುಂಬಗಳ ಜೀವನ ಭದ್ರತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ಪ್ರತಿ ಕುಟುಂಬಕ್ಕೆ ಆರ್ಥಿಕ ವರ್ಷದಲ್ಲಿ ಕನಿಷ್ಠ 100 ದಿನಗಳ ಕೆಲಸ ಒದಗಿಸುವ ಯೋಜನೆಯಾಗಿದ್ದು, 2005 ರಲ್ಲಿ ಇದನ್ನು ಜಾರಿಗೆ ತರಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟ್ರಂಪ್ ಗೆ ತೀವ್ರ ಹಿನ್ನಡೆ: ಇರಾನ್ ವಿರುದ್ಧ ಯುದ್ಧ ವಿರೋಧಿಸಿ ಅಮೆರಿಕದ ಭಯೋತ್ಪಾದನಾ ನಿಗ್ರಹ ಮುಖ್ಯಸ್ಥ ರಾಜೀನಾಮೆ!

Iran War: 'ಮಾತುಕತೆ ಪ್ರಶ್ನೆಯೇ ಇಲ್ಲ.. ಅಮೆರಿಕ, ಇಸ್ರೇಲ್ ಶರಣಾಗಲೇಬೇಕು..': Mojtaba Khamenei ಎಚ್ಚರಿಕೆ

KD ಚಿತ್ರ ವಿವಾದ: 'ಅನುವಾದ ಮಾತ್ರ ನನ್ನದು.. ಹಾಡು ಪ್ರೇಮ್ ಅವರದ್ದು..' 'ಇದೊಂದರಿಂದ ಅವಮಾನವಾಗುತ್ತಿದೆ'..: ಗೀತ ರಚನೆಕಾರ ಶಾಕಿಂಗ್ ಹೇಳಿಕೆ

ಯಾರಾಗಲಿದ್ದಾರೆ ಭಾರತದ ಮುಂದಿನ CDS?: ಇಲ್ಲಿದೆ ಮಾಹಿತಿ

ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಕಾಮಕಾಂಡ?: ಸಂತ್ರಸ್ತೆಯ ಮಗಳ ಮೇಲೂ ಕಣ್ಣು, ಆಡಿಯೋ-ವಿಡಿಯೋ ವೈರಲ್..! ಅಮಾನತು

SCROLL FOR NEXT