ಬಂಕೆ ಬಿಹಾರಿಜೀ ದೇಗುಲ 
ದೇಶ

ದೇವರಿಗೂ ವಿಶ್ರಾಂತಿ ಬೇಕು: ವಿಶೇಷ ಪೂಜೆ ಹೆಸರಿನಲ್ಲಿ ಶ್ರೀಮಂತರಿಂದ ದೇವರ ಶೋಷಣೆ; ಸುಪ್ರೀಂ ಕೋರ್ಟ್‌ ಅಸಮಾಧಾನ

ಮಧ್ಯಾಹ್ನ 12 ಗಂಟೆಗೆ ದೇವಸ್ಥಾನ ಮುಚ್ಚಿದ ನಂತರವೂ ದೇವರಿಗೆ ಒಂದು ನಿಮಿಷವೂ ವಿಶ್ರಾಂತಿ ನೀಡುವುದಿಲ್ಲ. ಆ ವೇಳೆ ದೇವರನ್ನು ಹೆಚ್ಚು ಶೋಷಣೆ ಮಾಡಲಾಗುತ್ತಿದೆ. ಭಾರೀ ಹಣ ಪಾವತಿಸಬಲ್ಲ ಶ್ರೀಮಂತರಿಗೆ ವಿಶೇಷ ಪೂಜೆಗೆ ಅವಕಾಶ ನೀಡಲಾಗುತ್ತಿದೆ.

ನವದೆಹಲಿ: ಹಣ ಪಾವತಿಸಿ ವಿಶೇಷ ಪೂಜೆ ಹೆಸರಿನಲ್ಲಿ ಶ್ರೀಮಂತರಿಂದ ದೇವರ ಶೋಷಣೆಯಾಗುತ್ತಿದೆ ಎಂದು ಸುಪ್ರೀಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಶ್ರೀ ಕೃಷ್ಣನ ಆರಾಧನಾ ಸ್ಥಳವಾದ ಬಂಕೆ ಬಿಹಾರಿಜೀ ದೇಗುಲದಲ್ಲಿ ನ್ಯಾಯಾಲಯ ರಚಿಸಿದ್ದ ಸಮಿತಿ ನಿಗದಿಪಡಿಸಿದ್ದ ದರ್ಶನ ಸಮಯ ಮತ್ತು ದೇಗುಲ ಪದ್ದತಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಅರ್ಜಿ ಕುರಿತಂತೆ ಉನ್ನತಾಧಿಕಾರ ಹೊಂದಿರುವ ದೇವಾಲಯ ನಿರ್ವಹಣಾ ಸಮಿತಿ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್ ಜಾರಿ ಮಾಡಿದೆ.

ಸುಪ್ರೀಂಕೋರ್ಟ್ ನೇಮಿಸಿದ ದೇವಾಲಯ ನಿರ್ವಹಣಾ ಸಮಿತಿ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ ಪಾಮಚೋಲಿ ಅವರಿದ್ದ ತ್ರಿಸದಸ್ಯ ನ್ಯಾಯಪೀಠವು, ಪ್ರಕರಣದ ಮುಂದಿನ ವಿಚಾರಣೆ ಜನವರಿ ಮೊದಲ ವಾರದಲ್ಲಿ ನಡೆಸಲು ಪಟ್ಟಿ ಮಾಡಿತು.

ಮಧ್ಯಾಹ್ನ 12 ಗಂಟೆಗೆ ದೇವಸ್ಥಾನ ಮುಚ್ಚಿದ ನಂತರವೂ ದೇವರಿಗೆ ಒಂದು ನಿಮಿಷವೂ ವಿಶ್ರಾಂತಿ ನೀಡುವುದಿಲ್ಲ. ಆ ವೇಳೆ ದೇವರನ್ನು ಹೆಚ್ಚು ಶೋಷಣೆ ಮಾಡಲಾಗುತ್ತಿದೆ. ಭಾರೀ ಹಣ ಪಾವತಿಸಬಲ್ಲ ಶ್ರೀಮಂತರಿಗೆ ವಿಶೇಷ ಪೂಜೆಗೆ ಅವಕಾಶ ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಯೋತ್ಪಾದನೆ ಬಗ್ಗೆ ಭಾರತ ಯಾವುದೇ ದ್ವಿಮುಖ ನೀತಿಯನ್ನು ಹೊಂದಿಲ್ಲ, ರಾಜಿಯ ಪ್ರಶ್ನೆಯೇ ಇಲ್ಲ: ಪ್ರಧಾನಿ ಮೋದಿ-Video

ಆಪ್ತ ಮಿತ್ರನಿಗೆ ಕೈ ಕೊಟ್ಟ ಭಾರತ?; ಅಮೆರಿಕಾ ಹೇಳಿದ್ದೇ ನಿಜವಾಯ್ತಾ?

ಭಾರತ- US ವ್ಯಾಪಾರ ಒಪ್ಪಂದದಿಂದ ರೈತರಿಗೆ ಭಾರಿ ಹೊಡೆತ: ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಏನಂತಾರೆ?

ಕಾಂಗ್ರೆಸ್ ಪಕ್ಷದ ನಿಷ್ಠ ರಾಜಕಾರಣಿಯಿಂದ ವಿಶ್ವಾಸಘಾತಕ ಎಂಬ ಟೀಕೆಯ ವರೆಗೆ.... ರವನೀತ್ ಸಿಂಗ್ ಬಿಟ್ಟು ರಾಜಕೀಯ ಜೀವನದ ಬಗ್ಗೆ ಇಲ್ಲಿದೆ ಮಾಹಿತಿ

ಡಿ-ಕೋಡ್: ಕಂಬಳಿ ಹುಳದಿಂದ ಚಿಟ್ಟೆಯಾಗುವ ಕಡೆಗೆ 'ಬಿಜೆಪಿ' ರೂಪಾಂತರ

SCROLL FOR NEXT