ಸಾಂದರ್ಭಿಕ ಚಿತ್ರ 
ದೇಶ

SIR: ಬಿಹಾರ, ಪಶ್ಚಿಮ ಬಂಗಾಳ ಆಯ್ತು, ಈಗ ರಾಜಸ್ಥಾನದಲ್ಲಿ ಸುಮಾರು 42 ಲಕ್ಷ ಮತದಾರರ ಹೆಸರು ಡಿಲೀಟ್!

ರಾಜಸ್ಥಾನದಲ್ಲೂ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ವೇಳೆ ಸುಮಾರು 42 ಲಕ್ಷ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ.

ಜೈಪುರ: ಕೇಂದ್ರ ಚುನಾವಣಾ ಆಯೋಗ ಇದೇ ವರ್ಷದ ಜೂನ್-ಜುಲೈ ತಿಂಗಳಲ್ಲಿ ಬಿಹಾರದಲ್ಲಿ ನಡೆಸಿದ್ದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ವೇಳೆಯಲ್ಲಿ ಸುಮಾರು 65 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಿತ್ತು.

7.89 ಕೋಟಿ ಮತದಾರರ ಪೈಕಿ ಸುಮಾರು 65 ಲಕ್ಷ ಮತದಾರರ ಹೆಸರನ್ನು ಪಟ್ಟಿಯಿಂದ ಡಿಲೀಟ್ ಮಾಡಲಾಗಿತ್ತು. ಇದಕ್ಕೆ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಬಳಿಕ ಪಶ್ಚಿಮ ಬಂಗಾಳದಲ್ಲೂ SIR ಬಳಿಕ ಚುನಾವಣಾ ಆಯೋಗ ಪ್ರಕಟಿಸಿದ ಮತದಾರರ ಪಟ್ಟಿಗೆ ಟಿಎಂಸಿ ಸೇರಿದಂತೆ ಹಲವು ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು.

ಇದೀಗ ರಾಜಸ್ಥಾನದಲ್ಲೂ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ವೇಳೆ ಸುಮಾರು 42 ಲಕ್ಷ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ನವೀನ್ ಮಹಾಜನ್ ಈ ವಿಷಯವನ್ನು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

5.46 ಕೋಟಿ ಮತದಾರರಲ್ಲಿ 41.85 ಲಕ್ಷ ಮತದಾರರು ಸಾವನ್ನಪ್ಪಿಬರಬಹುದು, ಅಥವಾ ಶಾಶ್ವತವಾಗಿ ವಲಸೆ, ಸ್ಥಳಾಂತರವಾಗಿರಬಹುದು ಅಥವಾ ಪರಿಷ್ಕರಣೆ ವೇಳೆಯಲ್ಲಿ ಗೈರುಹಾಜರಾಗಿದ್ದರಿಂದ ಅವರ ಎಣಿಕೆಯ ನಮೂನೆಗಳನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ. ಇವರಲ್ಲದೆ ಸುಮಾರು 11 ಲಕ್ಷ ಮತದಾರರಿಗೆ ದಾಖಲೆಗಳನ್ನು ಕೋರಿ ನೋಟಿಸ್ ನೀಡಲಾಗುವುದು ಎಂದರು.

ಜೈಪುರದಲ್ಲಿ ಅತಿ ಹೆಚ್ಚು ಮತದಾರರನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ. ಸದ್ಯ ನಡೆಯುತ್ತಿರುವ SIR ಭಾಗವಾಗಿ ರಾಜಸ್ಥಾನ ಸೇರಿದಂತೆ ಮೂರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬೆಂಕಿ' ಗದ್ದಲದ ನಡುವೆಯೇ ವಿಧಾನಸಭೆಯಲ್ಲಿ ದ್ವೇಷ ಭಾಷಣ ಮಸೂದೆ ಅಂಗೀಕಾರ

ಲೋಕಸಭೆಯಲ್ಲಿ G Ram G ಮಸೂದೆ ಅಂಗೀಕಾರ; ಪ್ರತಿಪಕ್ಷಗಳಿಂದ ಪ್ರತಿ ಹರಿದು ಹಾಕಿ ಆಕ್ರೋಶ

VB-G RAM ಮಸೂದೆ: ಸಂಸತ್ತಿನ ಸಂಕೀರ್ಣದಲ್ಲಿ ವಿಪಕ್ಷಗಳ ಪ್ರತಿಭಟನಾ ಮೆರವಣಿಗೆ, ಬೀದಿಗಿಳಿದು ಹೋರಾಟ ನಡೆಸುವುದಾಗಿ ಪ್ರತಿಜ್ಞೆ

ಅಜಿತ್ ಪವಾರ್ NCP ಜೊತೆಗೆ NCP(SP) ಮೈತ್ರಿ, ಬಿಜೆಪಿಯೊಂದಿಗೆ ಕೈಜೋಡಿಸಿದಂತೆ- ಸಂಜಯ್ ರಾವತ್ ಕಿಡಿ!

ರಾಹುಲ್ ಗಾಂಧಿ ಆಪ್ತನ ಪತ್ನಿ ಕಾಂಗ್ರೆಸ್ MLC ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ಸಾಧ್ಯತೆ

SCROLL FOR NEXT