ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ತೆಲಂಗಾಣ: ಜನಪ್ರಿಯ ತೆಲುಗು ನಟಿ ಆಮಾನಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ

ಆಮಾನಿ ಜೊತೆಗೆ ಖ್ಯಾತ ಮೇಕಪ್ ಕಲಾವಿದೆ ಶೋಭಾ ಲತಾ ಕೂಡ ಕೇಸರಿ ಪಕ್ಷಕ್ಕೆ ಸೇರಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ತೆಲುಗು ನಟಿ ಆಮಾನಿ
Lingaraj Badiger
Updated On : 20 Dec 2025, 4:48 pm

ಹೈದರಾಬಾದ್‌: ಜನಪ್ರಿಯ ತೆಲುಗು ನಟಿ ಆಮಾನಿ ಅವರು ಶನಿವಾರ ಹೈದರಾಬಾದ್‌ನಲ್ಲಿ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಮತ್ತು ತೆಲಂಗಾಣ ಬಿಜೆಪಿ ಅಧ್ಯಕ್ಷ ಎನ್ ರಾಮಚಂದರ್ ರಾವ್ ಅವರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು.

ಆಮಾನಿ ಜೊತೆಗೆ ಖ್ಯಾತ ಮೇಕಪ್ ಕಲಾವಿದೆ ಶೋಭಾ ಲತಾ ಕೂಡ ಕೇಸರಿ ಪಕ್ಷಕ್ಕೆ ಸೇರಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

1990 ರ ದಶಕದ ಜನಪ್ರಿಯ ನಾಯಕ ನಟಿ ಆಮಾನಿ, ಕಮಲ್ ಹಾಸನ್, ನಾಗಾರ್ಜುನ ಅಕ್ಕಿನೇನಿ, ಬಾಲಕೃಷ್ಣ, ಮತ್ತು ಜಗಪತಿ ಬಾಬು ಸೇರಿದಂತೆ ಹಲವು ಟಾಪ್ ನಟರೊಂದಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ.

Advertisement

Advertisement

Also Read

ದೇವಸ್ಥಾನ ತೆರವು ವಿವಾದ: ತೆಲಂಗಾಣ ಬಿಜೆಪಿ ಅಧ್ಯಕ್ಷರಿಗೆ ಗೃಹಬಂಧನ

ಆಮಾನಿ ಅವರ ಕೆಲವು ಪ್ರಮುಖ ಚಿತ್ರಗಳಲ್ಲಿ ಶುಭ ಸಂಕಲ್ಪಂ, ಶುಭ ಲಗ್ನಂ, ಮಿಸ್ಟರ್ ಪೆಲ್ಲಂ, ಘರಾನಾ ಬುಲ್ಲೋಡು ಮತ್ತು ಹಲೋ ಬ್ರದರ್ ಸೇರಿವೆ.

ಚಲನಚಿತ್ರಗಳ ಜೊತೆಗೆ, ಅವರು ದೂರದರ್ಶನ ಧಾರಾವಾಹಿಗಳಲ್ಲಿ ಸಕ್ರಿಯರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments