ತೆಲಂಗಾಣ: ದೇಶದೆಲ್ಲೆಡೆ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ತಯಾರಿ ನಡೆಯುತ್ತಿದೆ. ಈ ಮಧ್ಯೆ ಇತ್ತೀಚಿನ ದಿನಗಳಲ್ಲಿ ಧರ್ಮದ ಬಗ್ಗೆ ಮಾತನಾಡಿ ಸುದ್ದಿಯಲ್ಲಿರುವ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ.
ದಕ್ಷಿಣ ಭಾರತದಲ್ಲಿ ಪ್ರಮುಖವಾಗಿ ತೆಲಂಗಾಣದಲ್ಲಿ ಕ್ರಿಸ್ಮಸ್ ಆಚರಣೆಯನ್ನು ಸಾಧ್ಯವಾಗಿರಿಸಿರುವುದು ಸೋನಿಯಾ ಗಾಂಧಿ ಅವರ ತ್ಯಾಗ ಎಂದು ಹೇಳಿದ್ದಾರೆ.
ಸೋನಿಯಾ ಗಾಂಧಿ ತ್ಯಾಗದಿಂದ ನಾವಲ್ಲಾ ಇಂದು ಸಂಭ್ರಮದಿಂದ ಕ್ರಿಸ್ಮಸ್ ಆಚರಿಸುತ್ತಿದ್ದೇವೆ ಎಂದು ರೇವಂತ್ ರೆಡ್ಡಿ ಹೇಳಿರುವುದು ಈಗ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.
ರೇವಂತ್ ರೆಡ್ಡಿ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಮುಖ್ಯಮಂತ್ರಿಗಳು ರಾಜಕೀಯ ಜೊತೆಗೆ ಧರ್ಮಗಳನ್ನು ಬೆರೆಸುತ್ತಿದ್ದಾರೆ. ಅಷ್ಟೇ ಅಲ್ಲದೇ, ಗಾಂಧಿ ಕುಟಂಬವನ್ನು ಮೆಚ್ಚಿಸಲು ಕ್ರಿಶ್ಟಿಯನ್, ಮುಸ್ಲಿಮರ ಒಲೈಕೆಗಾಗಿ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದೆ.
ತೆಲಂಗಾಣ ಸರ್ಕಾರ ಹೈದರಾಬಾದ್‌ನ ಲಾಲ್ ಬಹುದ್ದೂರ್ ಕ್ರೀಡಾಂಗಣದಲ್ಲಿ ಕ್ರಿಸ್ಮಸ್ ಹಬ್ಬ ಆಚರಣೆ ಆಯೋಜಿಸಿದೆ. ಅದ್ಧೂರಿ ಹಬ್ಬ ಆಚರಿಸಿದೆ. ಈ ಆಚರಣೆಯಲ್ಲಿ ಭಾಗವಹಿಸುವುದಕ್ಕಾಗಿ ಕ್ರೈಸ್ತ ಬಾಂಧವರನ್ನು ತೆಲಂಗಾಣ ಸರ್ಕಾರ ಆಹ್ವಾನಿಸಿದೆ. ಈ ವೇಳೆ ಮಾತನಾಡಿದ ರೇವಂತ್ ರೆಡ್ಡಿ, ನಾವು ಕ್ರಿಸ್ಮಸ್ ಆಚರಣೆ ಮಾಡುವ ಹಿಂದೆ ಸೋನಿಯಾ ಗಾಂಧಿಯ ಅತೀ ದೊಡ್ಡ ತ್ಯಾಗವಿದೆ. ಡಿಸೆಂಬರ್ ತಿಂಗಳು ಭಾರಿ ವಿಶೇಷ. ಕಾರಣ ಇದೇ ತಿಂಗಳು ಸೋನಿಯಾ ಗಾಂಧಿ ಹುಟ್ಟು ಹಬ್ಬ. ಇದೇ ತಿಂಗಳು ಕ್ರಿಸ್ಮಸ್ ಹಬ್ಬದ ಆಚರಣೆಯೂ ಇದೆ. ಇದೇ ತಿಂಗಳು ತೆಲಂಗಾಣ ರಾಜ್ಯವಾಗಿ ಉದಯವಾಗಿತ್ತು ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.