ಶಶಿ ತರೂರ್ 
ದೇಶ

'ಬಿಹಾರದ ಪ್ರಗತಿ' ನೋಡಿ ಸಂತೋಷ: ಮತ್ತೆ NDA ಸರ್ಕಾರ ಹೊಗಳಿದ ಕಾಂಗ್ರೆಸ್ ಸಂಸದ ಶಶಿ ತರೂರ್ !

ನಿತೀಶ್ ಕುಮಾರ್ ಸರ್ಕಾರದ ಮೂಲಸೌಕರ್ಯಗಳ ಬಗ್ಗೆ ಶಶಿ ತರೂರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ನ ಪ್ರತಿಸ್ಪರ್ಧಿ ಬಿಜೆಪಿಯು ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಜೊತೆ ಮೈತ್ರಿ ಮಾಡಿಕೊಂಡಿದೆ.

ಬಿಹಾರ: ಇತ್ತೀಚಿಗೆ ಮುಕ್ತಾಯವಾದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ 'ಮನ್ರೇಗಾ' ಯೋಜನೆಯಿಂದ ಮಹಾತ್ಮ ಗಾಂಧೀಜಿ ಅವರ ಹೆಸರು ಕೈಬಿಡುವುದಕ್ಕೆ NDA ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ಈಗ ಮತ್ತೆ ಎನ್ ಡಿಎ ಸರ್ಕಾರವನ್ನು ಹಾಡಿ ಹೊಗಳಿದ್ದಾರೆ. ಬಿಹಾರದ ಪ್ರಗತಿ ನೋಡಿ ಸಂತೋಷವಾಗುತ್ತಿದೆ ಎಂದಿದ್ದಾರೆ.

ನಿತೀಶ್ ಕುಮಾರ್ ಸರ್ಕಾರದ ಮೂಲಸೌಕರ್ಯಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಕಾಂಗ್ರೆಸ್‌ನ ಪ್ರತಿಸ್ಪರ್ಧಿ ಬಿಜೆಪಿಯು ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಜೊತೆ ಮೈತ್ರಿ ಮಾಡಿಕೊಂಡಿದೆ.

ನಳಂದ ವಿಶ್ವವಿದ್ಯಾಲಯದಲ್ಲಿ ಮೊದಲ ನಳಂದ ಸಾಹಿತ್ಯೋತ್ಸವದ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರದಲ್ಲಿ ಮೂಲಸೌಕರ್ಯಗಳು ಈ ಹಿಂದೆ ನಾನು ಕೇಳಿದ್ದಕ್ಕಿಂತ ಉತ್ತಮವಾಗಿದೆ ಎಂಬುದರಲ್ಲಿ ಯಾವುದೇ ಪ್ರಶ್ನೆಯಿಲ್ಲ ಎಂದರು.

ರಸ್ತೆಗಳು ಉತ್ತಮವಾಗಿವೆ. ಜನರು ತಡರಾತ್ರಿಯಲ್ಲೂ ಬೀದಿಯಲ್ಲಿರುತ್ತಾರೆ. ಇದು ಹಿಂದೆಂದೂ ಇರಲಿಲ್ಲ. ಇಲ್ಲಿಯವರೆಗೆ, ವಿದ್ಯುತ್, ನೀರು ಸೇರಿದಂತೆ ಎಲ್ಲವನ್ನೂ ಸಮರ್ಪಕವಾಗಿ ಪೂರೈಸಲಾಗುತ್ತಿದೆ ಎಂದರು.

ನನ್ನ ಪ್ರಕಾರ, ನಿಸ್ಸಂದೇಹವಾಗಿ, ಇತ್ತೀಚಿನ ವರ್ಷಗಳಲ್ಲಿ ಬಹಳಷ್ಟು ಒಳ್ಳೆಯ ಸಂಗತಿಗಳು ನಡೆದಿವೆ ಎಂದು ಹೇಳಿದ ಶಶಿ ತರೂರ್, ನಿತೀಶ್ ಕುಮಾರ್ ಬಗ್ಗೆ ಕೇಳಿದಾಗ ಸುಮ್ಮನಾದರು.

ನನ್ನನ್ನು ಇಲ್ಲಿ ರಾಜಕೀಯಕ್ಕೆ ಸೇರಿಸಬೇಡಿ. ಈ ಪ್ರಗತಿಯನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ಬಿಹಾರದ ಜನರು ಮತ್ತು ಅವರ ಪ್ರತಿನಿಧಿಗಳು ಕ್ರೆಡಿಟ್ ಅರ್ಹರು ಎಂದಷ್ಟೇ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹದಗೆಟ್ಟ ಸಂಬಂಧ: ಭಾರತದಲ್ಲಿ ವೀಸಾ ಸೇವೆ ಸ್ಥಗಿತಗೊಳಿಸಿದ ಬಾಂಗ್ಲಾ

'ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಕೈಬಿಟ್ಟರೆ...' ಮಹತ್ವದ ವಿಷಯಗಳನ್ನು ಉಲ್ಲೇಖಿಸಿ ರಾಹುಲ್ ಗಾಂಧಿಗೆ ಕೆ ಎನ್ ರಾಜಣ್ಣ ಪತ್ರ

ಕರೆನ್ಸಿ ನೋಟುಗಳಿಂದ ಗಾಂಧೀಜಿ ಚಿತ್ರ ತೆಗೆದುಹಾಕಲು ಸರ್ಕಾರ ಚಿಂತನೆ, ಉನ್ನತ ಮಟ್ಟದ ಸಭೆ ಕೂಡ ನಡೆದಿದೆ: ಸಿಪಿಎಂ ಸಂಸದ ಜಾನ್ ಬ್ರಿಟಾಸ್

Lokayukta raid-ಭ್ರಷ್ಟ ಅಧಿಕಾರಿಗಳ ವಿರುದ್ಧ ಮುಂದುವರಿದ ಲೋಕಾಯುಕ್ತ ಬೇಟೆ: ತೀವ್ರ ಶೋಧ

ಭಾರತ-ನ್ಯೂಜಿಲ್ಯಾಂಡ್ ಮುಕ್ತ ವ್ಯಾಪಾರ ಒಪ್ಪಂದ: 3 ತಿಂಗಳಲ್ಲಿ ಜಾರಿ, ಇದರಿಂದ ಲಾಭವೇನು?

SCROLL FOR NEXT