ಸಿಮ್ಮಾಚಲಂ-ಭವಾನಿ 
ದೇಶ

ರೈಲಿನಿಂದ ನವದಂಪತಿ ಜಿಗಿಯುವುದಕ್ಕೂ ಮುನ್ನ ರೈಲಿನೊಳಗೆ ಇಬ್ಬರ ನಡುವೆ ನಡೆದಿದ್ದೇನು?, Video!

ತೆಲಂಗಾಣದಲ್ಲಿ ನವವಿವಾಹಿತ ದಂಪತಿ ಚಲಿಸುವ ರೈಲಿನಿಂದ ಬಿದ್ದು ಸಾವನ್ನಪ್ಪಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಅಪಘಾತವೋ ಎಂದು ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತೆಲಂಗಾಣದಲ್ಲಿ ನವವಿವಾಹಿತ ದಂಪತಿ ಚಲಿಸುವ ರೈಲಿನಿಂದ ಬಿದ್ದು ಸಾವನ್ನಪ್ಪಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಅಪಘಾತವೋ ಎಂದು ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವರದಿಗಳ ಪ್ರಕಾರ, ಆಂಧ್ರಪ್ರದೇಶದ ಪಾರ್ವತಿಪುರಂ ಮಾನ್ಯಂ ಜಿಲ್ಲೆಯ ರಾವುಪಲ್ಲಿ ನಿವಾಸಿ ಸಿಮ್ಮಾಚಲಂ (25) ಎರಡು ತಿಂಗಳ ಹಿಂದೆ 19 ವರ್ಷದ ಭವಾನಿ ಅವರನ್ನು ವಿವಾಹವಾಗಿದ್ದರು. ಅವರ ಮದುವೆಯ ನಂತರ, ಅವರು ತೆಲಂಗಾಣದ ಜಗದ್ಗಿರಿಕುಟ್ಟ ಜಿಲ್ಲೆಯ ಗಾಂಧಿ ನಗರದಲ್ಲಿ ವಾಸಿಸುತ್ತಿದ್ದರು.

ವರದಿಗಳ ಪ್ರಕಾರ, ಸಿಮ್ಮಾಚಲಂ ಮತ್ತು ಭವಾನಿ ದಂಪತಿಗಳು ಕಳೆದ ಗುರುವಾರ ರಾತ್ರಿ ವಿಜಯವಾಡದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೋಗಲು ಸಿಕಂದರಾಬಾದ್ ನಿಲ್ದಾಣದಿಂದ ಮಸುಲಿಪಟ್ನಂ ಎಕ್ಸ್‌ಪ್ರೆಸ್ ಹತ್ತಿದರು. ರೈಲು ಭುವನಗಿರಿ ಜಿಲ್ಲೆಯ ಬಂಗಪಲ್ಲಿಗೆ ಸಮೀಪಿಸುತ್ತಿದ್ದಂತೆ ಅವರು ಇದ್ದಕ್ಕಿದ್ದಂತೆ ರೈಲಿನಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದರು. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಯಾದಗಿರಿಗುಟ್ಟ ವಿಭಾಗದ ಬಂಗಾಲಿ ರೈಲು ನಿಲ್ದಾಣದ ಮೂಲಕ ಹಾದುಹೋಗುವಾಗ ದಂಪತಿಗಳು ರೈಲಿನ ಬಾಗಿಲ ಬಳಿ ನಿಂತಿದ್ದು ಇದ್ದಕ್ಕಿದ್ದಂತೆ ರೈಲಿನಿಂದ ಬಿದ್ದಿದ್ದಾರೆ ಎಂದು ಪ್ರಾಥಮಿಕ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿತ್ತು. ಶುಕ್ರವಾರ ಮುಂಜಾನೆ ರೈಲ್ವೆ ಹಳಿ ನಿರ್ವಹಣಾ ಕಾರ್ಮಿಕರು ಹಳಿಗಳ ಬಳಿ ಅವರ ಶವಗಳನ್ನು ನೋಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿತ್ತು. ನಂತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಯಿತು.

ಈ ಘಟನೆಗೂ ಮುನ್ನ ರೈಲಿನಲ್ಲಿ ನವದಂಪತಿಯ ನಡುವೆ ನಡೆದಿದ್ದೇನು ಎಂಬುದರ ಕುರಿತು ವೀಡಿಯೊ ವೈರಲ್ ಆಗಿದೆ. ದಂಪತಿಗಳು ರೈಲಿನಲ್ಲಿ ಕುಳಿತಿ ಪರಸ್ಪರ ಜಗಳವಾಡುತ್ತಿರುವುದು ಕಂಡುಬಂದಿದೆ. ಪತ್ನಿ ಪದೇ ಪದೇ ಎದ್ದು ನಿಲ್ಲುತ್ತಿದ್ದು ಪತಿ ಅವಳನ್ನು ಬಲವಂತವಾಗಿ ಹಿಡಿದು ತನ್ನ ಪಕ್ಕದಲ್ಲಿ ಕೂರಿಸಲು ಪ್ರಯತ್ನಿಸಿದನು. ಮೊದಲು ಹೆಂಡತಿ ರೈಲಿನಿಂದ ಜಿಗಿದಳು, ನಂತರ ಪತಿ ಅವಳನ್ನು ರಕ್ಷಿಸಲು ಕೆಳಗೆ ಹಾರಿದನು. ಇದರ ಪರಿಣಾಮವಾಗಿ ಇಬ್ಬರೂ ಸಾವನ್ನಪ್ಪಿದರು ಎಂದು ವರದಿಯಾಗಿದೆ. ಆದಾಗ್ಯೂ, ಈ ಘಟನೆ ಆತ್ಮಹತ್ಯೆಯೇ ಅಥವಾ ರೈಲು ಪ್ರಯಾಣದ ಸಮಯದಲ್ಲಿ ಕೌಟುಂಬಿಕ ಕಲಹದಿಂದ ಉಂಟಾದ ಅಪಘಾತವೇ ಎಂದು ತನಿಖೆ ನಡೆಸುತ್ತಿದ್ದೇವೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ತನಿಖೆ ಪೂರ್ಣಗೊಂಡ ನಂತರ ಸತ್ಯ ಬಹಿರಂಗಗೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರೌಡಿಶೀಟರ್ ಕೊಲೆ ಪ್ರಕರಣ: ಬಿಜೆಪಿ ಶಾಸಕನಿಗೆ ಬಿಗ್ ಶಾಕ್; ಭೈರತಿ ಬಸವರಾಜ್ ಜಾಮೀನು ಅರ್ಜಿ ವಜಾ

ಸುದೀಪ್ ಮುಂದೆ ಮಾಜಿ ಶಾಸಕ ರಾಜುಗೌಡ ನೀಡಿದ್ದ 'ಕಾಂಜಿ, ಪೀಂಜಿ' ಹೇಳಿಕೆಗೆ ದರ್ಶನ್ ಅಭಿಮಾನಿಗಳ ತಿರುಗೇಟು!

ಬೆಂಗಳೂರು: ನಾಲ್ವರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಅಪಹರಿಸಿ; 1.5 ಲಕ್ಷ ರೂ. ದರೋಡೆ!

ವಿದೇಶದಲ್ಲಿ ಭಾರತದ ವಿರುದ್ಧ ಮಾತನಾಡುವ ಭಾರತ ವಿರೋಧಿ ನಾಯಕ; Rahul Gandhi ನಾಯಕನಲ್ಲ, ಬಾಲಕ: BJP

Shame: ರೈಲಿನ ಶೌಚಾಲಯದ ಪಕ್ಕ ಕುಳಿತು ಕ್ರೀಡಾ ಪಟುಗಳ ಪಯಣ, ಸರ್ಕಾರದ ವಿರುದ್ಧ ಕಿಡಿ.. Video Viral

SCROLL FOR NEXT