ಸಾಂದರ್ಭಿಕ ಚಿತ್ರ 
ದೇಶ

ಸೊಸೆಯಂದಿರು, ಯುವತಿಯರಿಗೆ 'ಕ್ಯಾಮೆರಾ ಫೋನ್‌' ಬಳಕೆ ನಿಷೇಧಿಸಿದ ಗ್ರಾಮ ಪಂಚಾಯತ್!

ಸಾರ್ವಜನಿಕ ಕಾರ್ಯಕ್ರಮಗಳು ಅಥವಾ ನೆರೆಹೊರೆಯವರ ಮನೆಗೂ ಕೂಡಾ ಫೋನ್ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.

ರಾಜಸ್ಥಾನ: ರಾಜಸ್ಥಾನದ ಜಲೋರ್ ಜಿಲ್ಲೆಯ ಗ್ರಾಮ ಪಂಚಾಯಿತಿಯೊಂದು ಜನವರಿ 26 ರಿಂದ 15 ಹಳ್ಳಿಗಳ ಸೊಸೆಯಂದಿರು ಮತ್ತು ಯುವತಿಯರು ಕ್ಯಾಮೆರಾ ಹೊಂದಿರುವ ಫೋನ್ ಬಳಕೆ ಮಾಡುವುದನ್ನು ನಿಷೇಧಿಸಿದೆ.

ಅಲ್ಲದೇ ಸಾರ್ವಜನಿಕ ಕಾರ್ಯಕ್ರಮಗಳು ಅಥವಾ ನೆರೆಹೊರೆಯವರ ಮನೆಗೂ ಕೂಡಾ ಫೋನ್ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಬದಲಾಗಿ, ಸ್ಮಾರ್ಟ್‌ಫೋನ್‌ಗಳ ಬದಲಿಗೆ ಕೀಪ್ಯಾಡ್ ಫೋನ್‌ ಮಾತ್ರ ಬಳಸಲು ಅನುಮತಿ ನೀಡಲಾಗಿದೆ.

ಜಲೋರ್ ಜಿಲ್ಲೆಯ ಗಾಜಿಪುರ ಗ್ರಾಮದ 14 ಪತ್ತಿನ (ಉಪವಿಭಾಗ) ಅಧ್ಯಕ್ಷ ಸುಜ್ಞಾರಾಂ ಚೌಧರಿ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಚೌಧರಿ ಸಮುದಾಯದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಿಟಿಐ ಜೊತೆ ಮಾತನಾಡಿದ ಚೌಧರಿ, ಐವರು ಸಮುದಾಯದ ಸದಸ್ಯರು ಈ ತೀರ್ಮಾನ ತೆಗೆದುಕೊಂಡಿರುವುದಾಗಿ ತಿಳಿಸಿದರು.

ಸೊಸೆಯಂದಿರು ಮತ್ತು ಯುವತಿಯರು ಕರೆಗಾಗಿ ಕೀಪ್ಯಾಡ್ ಫೋನ್‌ಗಳನ್ನು ಬಳಸಲು ಅವಕಾಶ ಕಲ್ಪಿಸಲಾಗಿದೆ. ಶಾಲೆಗೆ ಹೋಗುವ ಹುಡುಗಿಯರು ತಮ್ಮ ವ್ಯಾಸಂಗಕ್ಕೆ ಮೊಬೈಲ್ ಫೋನ್‌ಗಳ ಅಗತ್ಯವಿರುವಾಗ ಅದನ್ನು ಮನೆಯಲ್ಲಿ ಮಾತ್ರ ಬಳಸಬಹುದು. ಮದುವೆ, ಸಾಮಾಜಿಕ ಕಾರ್ಯಕ್ರಮಗಳು ಅಥವಾ ನೆರೆಹೊರೆಯವರ ಮನೆಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗಲು ಅವರಿಗೆ ಅನುಮತಿ ಇಲ್ಲ ಎಂದು ಚೌಧರಿ ವಿವರಿಸಿದರು.

ಪಂಚಾಯತ್‌ನ ನಿರ್ಧಾರದ ಬಗ್ಗೆ ಕೇಳಿಬರುತ್ತಿರುವ ವಿರೋಧಕ್ಕೆ ಪ್ರತಿಕ್ರಿಯಿಸಿದ ಚೌಧರಿ, ಮಕ್ಕಳು ತಮ್ಮ ಮನೆಗಳಲ್ಲಿ ಮಹಿಳೆಯರ ಮೊಬೈಲ್ ಫೋನ್‌ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಇದು ಅವರ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂಬ ಕಾರಣದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು. ಕೆಲವು ಮಹಿಳೆಯರು ತಮ್ಮ ದಿನನಿತ್ಯದ ಕೆಲಸಗಳತ್ತ ಗಮನಹರಿಸಲು ಮಕ್ಕಳಿಗೆ ತಮ್ಮ ಫೋನ್‌ಗಳನ್ನು ನೀಡುತ್ತಿದ್ದಾರೆ. ಇದೆಲ್ಲವನ್ನೂ ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ: ಬಾಂಗ್ಲಾದೇಶ ರಾಯಭಾರ ಕಚೇರಿ ಎದುರು ಬೃಹತ್ ಪ್ರತಿಭಟನೆ, ಲಾಠಿ ಚಾರ್ಜ್! ವೀಸಾ ಸೇವೆ ಸ್ಥಗಿತ, Video

'ದಿನನಿತ್ಯದ ಉದ್ಯೋಗಗಳು ಕಣ್ಮರೆಯಾಗುತ್ತವೆ': ಇನ್ಫೋಸಿಸ್ ನಾರಾಯಣ ಮೂರ್ತಿ ಹೊಸ ಬಾಂಬ್!

ಪ್ರಿಯಾಂಕಾ ಗಾಂಧಿಯನ್ನು 'ಪ್ರಧಾನಿ'ಯಾಗಿ ಮಾಡೇ ಮಾಡ್ತೀವಿ, ನೋಡ್ತಾ ಇರಿ! ಕಾಂಗ್ರೆಸ್ ಸಂಸದ

17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದ ರಾಯಭಾರಿಯಾಗಿ ಪ್ರಕಾಶ್ ರಾಜ್: ಸಿದ್ದರಾಮಯ್ಯ

Vijay Hazare Trophy: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯಕ್ಕೆ ಅನುಮತಿ ನಿರಾಕರಣೆ

SCROLL FOR NEXT